ಶಿವಮೊಗ್ಗ ಜಿಲ್ಲೆಯ ಸಾವಿರಾರು ಕೋಟಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ಕಾರ್ಯಕ್ರಮದ ಕಂಪ್ಲೀಟ್ ಡಿಟೈಲ್

Complete details of foundation stone laying and dedication ceremony of works worth thousands of crores of rupees in Shivamogga district

ಶಿವಮೊಗ್ಗ ಜಿಲ್ಲೆಯ ಸಾವಿರಾರು ಕೋಟಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ಕಾರ್ಯಕ್ರಮದ ಕಂಪ್ಲೀಟ್ ಡಿಟೈಲ್
ಶಿವಮೊಗ್ಗ ಜಿಲ್ಲೆಯ ಸಾವಿರಾರು ಕೋಟಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ಕಾರ್ಯಕ್ರಮದ ಕಂಪ್ಲೀಟ್ ಡಿಟೈಲ್

ಶಿವಮೊಗ್ಗ ಜಿಲ್ಲೆಯ ಸಾವಿರಾರು ಕೋಟಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ಕಾರ್ಯಕ್ರಮದ ಕಂಪ್ಲೀಟ್ ಡಿಟೈಲ್..ಯಾವೆಲ್ಲಾ ಕಾಮಗಾರಿಗಳಾಗಲಿವೆ ಎಂಬುದರ ಕಂಪ್ಲೀಟ್ ಡಿಟೈಲ್ ಇಲ್ಲಿದೆ

 ಮಲೆನಾಡು ಟುಡೆ ನ್ಯೂಸ್

ಬೆಂಗಳೂರು ಟು ಚೆನೈ ಎಕ್ಸ್‌ಪ್ರೆಸ್‌ ರಸ್ತೆ ಶ್ರೀಘ್ರದಲ್ಲೇ ಮುಕ್ತಾಯವಾಗುತ್ತದೆ ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಶಿವಮೊಗ್ಗದ ಸಂಸದ ಬಿ.ವೈ ರಾಘವೇಂದ್ರ ದೇಶಕ್ಕೆ ನಂಬರ್ ಒನ್ ರಾಜಕಾರಣಿಯಾಗಿ ಕೆಲಸ ಮಾಡಿದ್ದಾರೆಯ. ಈ ಬಾರಿ ಅವರನ್ನು ಗೆಲ್ಲಿಸಿ ಎಂದು ಗಡ್ಕರ್ ಜನತೆಗೆ ಮನವಿ ಮಾಡಿದ್ದಾರೆ ರಾಜ್ಯದ ಸಾರಿಗೆ ವಿಚಾರದಲ್ಲಿ ಕೇಂದ್ರದ ಸ್ಪಂರಧನೆಯನ್ನು ಲೋಕೋಪಯೋಗಿ ಸಚಿವ ರಮೇಶ್ ಜಾರಕಿಹೊಳಿ ಹೊಗಳಿದ್ದಾರೆ. 

ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ

ಶಿವಮೊಗ್ಗ ಜಿಲ್ಲೆಯ ಸುಮಾರು 6 ಸಾವಿರದ 168 ಕೋಟಿ ವೆಚ್ಚದ ವಿವಿಧ ರಸ್ತೆ ಮೇಲ್ಸೇಸುತೆವೆ ಕಾಮಗಾರಿ ಮತ್ತು ಶಂಕುಸ್ಥಾಪನೆಗೆ ಕೇಂದ್ರಕ ಸಾರಿಗೆ ಸಚಿವ ನಿತಿನ್ ಗಡ್ಕರಿ ಚಾಲನೆ ನೀಡಿದರು. ಶಿವಮೊಗ್ಗದ ನೆಹರು ಮೈದಾನದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ವರ್ಚುವಲ್ ಮಿಡಿಯಾ ಮೂಲಕ ಉದ್ಗಾಟಿಸಿದರು. ಈ ಸಂದರ್ಭದಲ್ಲಿ ಕನ್ನಡದಲ್ಲಿಯೇ ಭಾಷಣ ಆರಂಭಿಸಿದ ನಿತಿನ್ ಗಡ್ಕರ್. ತಮ್ಮ ಅಧಿಕಾರವಧಿಯಲ್ಲಿ ಆದ ಅಭಿವೃದ್ಧಿ ಕಾರ್ಯಗಳನ್ನು ಮೆಲಕು ಹಾಕಿದರು. ರಾಘವೇಂದ್ರ ರವರು ದೇಶಕ್ಕೆ ನಂಬರ್ ಒನ್ ರೀತಿಯಲ್ಲಿ ಕೆಲಸ ಮಾಡಿದ್ದಾರೆ.

ರಾಘವೇಂದ್ರ ಅವರು ನಿರಂತರವಾಗಿ ನನ್ನ ಕಚೇರಿ ಬಂದು ಭೇಟಿ ಮಾಡಿದ್ದಾರೆ. ರಾಘವೇಂದ್ರ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಕರ್ನಾಟಕ ಆರ್ಥಿಕ ವಾಗಿ ಮುಂದುವರೆದಿದೆ. ಭಾರತ ದೇಶ ಇದೀಗ ಪ್ರಪಂಚದಲ್ಲಿ ಮೂರನೇ ದೊಡ್ಡ ಆರ್ಥಿಕ ದೇಶವಾಗಿದೆ.ಕರ್ನಾಟಕದಲ್ಲಿ ಸಕ್ಕರೆ ಕಾರ್ಖಾನೆ ಇದೆ. ಕರ್ನಾಟಕದಲ್ಲಿ ಎಲೆಕ್ಟ್ರಾನಿಕ್ ವಾಹನಗಳು ಬಳಕೆಯಾಗ್ತಿವೆ. ಭಾರತದಲ್ಲಿ ಗ್ಯಾಸ್ ಬಳಕೆ ಹೆಚ್ಚು ಹೊತ್ತು‌ ನೀಡಬೇಕಿದೆ. ಎಲೆಕ್ಟ್ರಾನಿಕ್ ವಾಹನಗಳನ್ನ ಹೆಚ್ಚು ಬಳಕೆ ಮಾಡಬೇಕು ಆಗ ಪೆಟ್ರೋಲ್ 50 ರೂಪಾಯಿಗೆ ಸಿಗುತ್ತದೆ. ಶಿವಮೊಗ್ಗ ರಸ್ತೆ ಅಭಿವೃದ್ಧಿ ಯಾದ್ರೆ ವಿವಿಧ ಕಂಪನಿಗಳು ಬರ್ತವೆ. ಪ್ಯಾಕ್ಟರಿ ಬರ್ತವೆ, ಆಗ ಶಿವಮೊಗ್ಗ ಇನ್ನಷ್ಟು ಅಭಿವೃದ್ಧಿ ಯಾಗುತ್ತದೆ

ಕರ್ನಾಟಕದಲ್ಲಿ ಇನ್ನಷ್ಟು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಮಾಡ್ತೇನೆ ಎಂದು ಗಡ್ಕರಿ ಹೇಳಿದ್ದಾರೆ.ರಾಘವೇಂದ್ರಯವರು ಸಾಗರ ಟು ಮರಕುಟುಕ ರಸ್ತೆಗೆ ಕೇಳಿದ್ದಾರೆ, ಅದಕ್ಕೆ  ಅನುಮೋದನೆ ನೀಡ್ತೇನೆ ಆಗುಂಬೆ ಘಾಟಿಯಲ್ಲಿ ಸುರಂಗ ಮಾರ್ಗ ಮಾಡಲು, ಅಧಿಕಾರಿಗಳು ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ. ಕರ್ನಾಟಕ ಕ್ಕೆ ಸಾಕಷ್ಟು ರಸ್ತೆಗಳನ್ನ ನೀಡಿದ್ದೇನೆ. ಇನ್ನಷ್ಟು ರಾಷ್ಟ್ರೀಯ ಹೆದ್ದಾರಿ ಯನ್ನ ಮುಂದಿನ ದಿನದಲ್ಲಿ ನಿರ್ಮಾಣ ಮಾಡಲಾಗುವುದು. ಕಾಶ್ಮೀರ ದಿಂದ ಕನ್ಯಾಕುಮಾರಿ ವರೆಗೆ ಎಕ್ಸ್‌ಪ್ರೆಸ್‌ ಹೈ ವೇ ನಿರ್ಮಾಣ ಮಾಡಲಾಗುವುದು.

ದೇಶದಲ್ಲಿ 16 ರೋಪ್ ವೇ ನಿರ್ಮಾಣ ಮಾಡಲಾಗುವುದು. ಅದರಲ್ಲಿ ಕರ್ನಾಟಕದಲ್ಲಿ ಎರಡು ರೋಪ್ ವೇ ನಿರ್ಮಾಣ. ಕೊಡಚಾದ್ರಿ ಟು ಕೊಲ್ಲೂರು. ಕೊಪ್ಪಳ ಅಂಜನಾದ್ರಿ ರೋಪ್ ವೇ ನಿರ್ಮಾಣ ಮಾಜಲಾಗುವುದು ಎಂದ ಗಡ್ಕರಿ ಸಂಸದ ರಾಘವೇಂದ್ರರನ್ನು ಮತ್ತೊಮ್ಮೆ ಗೆಲ್ಲಿಸುವಂತೆ ಕರೆ ನೀಡಿದರು.

 ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ

ಕಾರ್ಯಕ್ರಮದಲ್ಲಿ ಮಾತನಾಡಿದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ , ಕರ್ನಾಟಕಕ್ಕೆ ಇವತ್ತು ವಿಶೇಷ ದಿನ ಎಂದು ಹೇಳಿದರು. ಕರ್ನಾಟಕ ಕ್ಕೆ ಇದು ಸುವರ್ಣ ಅಕ್ಷರದಲ್ಲಿ ಬರೆದಿಡುವ ದಿನ. ಯಾಕಂದ್ರೆ ಅಭಿವೃದ್ಧಿ ಯಲ್ಲಿ ರಸ್ತೆ ಅಭಿವೃದ್ಧಿ ಬಹಳ ಮುಖ್ಯ. ಇತಿಹಾಸ ಬದಲಾವಣೆ ಮಾಡುವುದಕ್ಕೆ ಗಡ್ಕರಿ ಮುಂದಾಗಿದ್ದಾರೆ. ಎಂದು ಗಡ್ಕರಿ ಯನ್ನ ಹಾಡಿ ಹೊಗಳಿದರು. ಅವರು ದೇಶಕ್ಕಾಗಿ ಸೇವೆ ಮಾಡ್ತಾ ಇದ್ದಾರೆ. ಹಾಗಾಗಿ ಅವರನ್ನ ನಾನು ಗೌರವಿಸಿತ್ತೇನೆ. ನಾನು 9 ತಿಂಗಳಲ್ಲಿ ಸಾಕಷ್ಟು ಬಾರಿ ಅವರನ್ನ ಭೇಟಿ ಮಾಡಿದ್ದೇನೆ. ಕೇಂದ್ರ ಸರ್ಕಾರಕ್ಕೆ ಬೇಕಾದ ಸಪೋರ್ಟ್ ರಾಜ್ಯ ಸರ್ಕಾರದಿಂದ ನೀಡ್ತೇವೆ ಎಂದು ಹೇಳಿದರು

 ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ

ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ ಕೇಂದ್ರ ಸಚಿವರಿಗೆ ವಿಶೇಷ ಧನ್ಯವಾದ ತಿಳಿಸಿದರು. ಕ್ಷೇತ್ರಕ್ಕೆ ಸಾಕಷ್ಟು ಅನುದಾನ ನೀಡಿದ್ದೀರಿ. ಮೋದಿ ಸರ್ಕಾರ ಬಂದ ಮೇಲೆ ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ 56 ಸಾವಿರ ಕಿ.ಮೀ  ನಿರ್ಮಾಣ ವಾಗಿದೆ. ರಸ್ತೆ ಅಭಿವೃದ್ಧಿ ಯಲ್ಲಿ ದಿನಕ್ಕೆ 37 ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ವಾಗ್ತಿದೆ. ನಾವು ಪ್ರಪಂಚದಲ್ಲಿ ರಸ್ತೆ ಅಭಿವೃದ್ಧಿ ಯಲ್ಲಿ ನಂಬರ್ 1 ಇದ್ದೀವಿ. ಮಲೆನಾಡಿಗೆ ಅಭಿವೃದ್ಧಿ ನಿತಿನ್ ಗಡ್ಕರಿ ವಿಶೇಷ ಅನುದಾನ ನೀಡಿದ್ದಾರೆ ಎಂದು ಗಡ್ಕರಿಯನ್ನು ಶ್ಲಾಘಿಸಿದರು

 ಶಾಸಕ ಆರಗ ಜ್ಞಾನೇಂದ್ರ 

ಲೋಕಸಭಾ ಚುನಾವಣೆ ಹತ್ತಿರ ಬಂದಿದೆ. ನಾವು ಯಾರಿಗೂ ಮತ ಕೇಳೋದು ಬೇಡ, ಜನರೇ ನಮ್ಗೆ ಮತ ನೀಡ್ತಾರೆ. ನಮ್ಮ ಅಭಿವೃದ್ಧಿ ಕೆಲಸ ನೋಡಿ ಜನರೇ ಮತ ಹಾಕ್ತಾರೆ. ಪಟ್ಟಿ ಮಾಡಿದ್ರೆ ದಿನಗಟ್ಟಲೇ ರಾಘಣ್ಣ ಅಭಿವೃದ್ಧಿ ಕೆಲಸ ಹೇಳಬಹುದು. ಮೋದಿ ದೇಶಕ್ಕೆ ಬೇಕು, ಮೋದಿ ದೇಶಕ್ಕೆ ಬೇಕು ಅಂದ್ರೆ ಇಲ್ಲಿ ರಾಘಣ್ಣ ಗೆಲ್ಲಿಸಬೇಕು

 ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ 

ನಮ್ಮ ಕ್ಷೇತ್ರ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸೇರಿದಕ್ಕೆ ಸಾಕಷ್ಟು ಅಭಿವೃದ್ಧಿ ಕೆಲಸ ಆಗಿವೆ. ರಾಜ್ಯದಲ್ಲಿ ನಂಬರ್ 1 ಸಂಸದ ಅಂದ್ರೆ ಅದು ನಮ್ಮ ರಾಘಣ್ಣ. ಶಿವಮೊಗ್ಗ ಕ್ಷೇತ್ರ ವನ್ನ ಮಾದರಿ ಕ್ಷೇತ್ರವನ್ನಾಗಿಸಿದ್ದಾರೆ. ಗಡ್ಕರಿ ಅವರನ್ನ ರೋಡ್ ಕರಿ ಅಂತಾ ಹೇಳಬೇಕು.

ಯಾಕೆ ಅಂದ್ರೆ ಅವರು ಬಂದ್ರೆ ರೋಡ್ ಬರುತ್ತದೆ. ಅದ್ಕೆ ಅವರನ್ನ ರೋಡ್ ಕರಿ ಅಂತಾ ನಾವು ಕರೆಯಬೇಕು

 ಶಿವಮೊಗ್ಗ ನಗರ ಶಾಸಕ ಚೆನ್ನಬಸಪ್ಪ 

ಅಭಿವೃದ್ಧಿ ಯಲ್ಲಿ ಭಾರತವನ್ನ ಅಂತರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿದಿದ್ದು ನರೇಂದ್ರ ಮೋದಿ ಅದು ಮೋದಿ ಅವರ ತಾಕತ್ತು. ಶಿವಮೊಗ್ಗ ಜಿಲ್ಲೆಯನ್ನ ಅಭಿವೃದ್ಧಿ ಯಲ್ಲಿ ಉತ್ತುಂಗಕ್ಕೆ ರಾಘವೇಂದ್ರ ಅವರು ಏರಿಸಿದ್ದಾರೆ. ಪ್ರಪಂಚಕ್ಕೆ ವಿಶ್ವಗುರು ಭಾರತ ಆಗುತ್ತದೆ.

ಮತ್ತೊಮ್ಮೆ ದೇಶಕ್ಕೆ ಮೋದಿ, ಶಿವಮೊಗ್ಗಕ್ಕೆ ರಾಘವೇಂದ್ರ.ಮೋದಿಯವರು 108 ಯೋಜನೆಗಳನ್ನ ಜಾರಿಗೆ ತಂದಿದ್ದಾರೆ.10 ವರ್ಷದಲ್ಲಿ 50 ಸಾವಿರ ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ವಾಗಿದೆ. ನಿತಿನ್ ಗಡ್ಕರಿ ಬಂದಮೇಲೆ ಒಂದು ದಿನಕ್ಕೆ 37 ಕಿ.ಮೀ ರಸ್ತೆ ನಿರ್ಮಾಣ ವಾಗ್ತಿದೆ.

 

ಶಂಕುಸ್ಥಾಪನೆಗೊಂಡ ಕಾಮಗಾರಿಗಳು:

 ಶಿವಮೊಗ್ಗ ಸಿಂಹಧಾಮದಿಂದ ಆನಂದಪುರ ವರೆಗೆ, ಕುಂಸಿ ಮತ್ತು ಯಡೇಹಳ್ಳಿ ರೈಲ್ವೆ ಮೇಲ್ಸ್ತುವೆ. ಕುಂಸಿ, ಜೋರಡಿ, ಕೋಣೆ ಹೊಸೂರು, ಯಡೇಹಳ್ಳಿ, ಆನಂದಪುರ ಬೈಪಾಸ್ ರಸ್ತೆ ಸೇರಿ ಒಟ್ಟು 39 ಕಿ.ಮೀ. ಉದ್ದದ 4 ಪಥದ ರಸ್ತೆ ನಿರ್ಮಾಣ-653 ಕೋಟಿ.

 ನಗರದ ಸಂದೇಶ್ ಮೋಟಾರ್ಸ್‌ನಿಂದ ಹರಕೆರೆ ವರೆಗೆ 4ಪಥದ ರಸ್ತೆ ನಿರ್ಮಾಣ-39.50 ಕೋಟಿ.

 ನೆಲ್ಲೀಸರದಿಂದ ತೀರ್ಥಹಳ್ಳಿ ಪಟ್ಟಣದ ವರೆಗೆ 4 ಪಥದ ರಸ್ತೆ ನಿರ್ಮಾಣ-538.71 ಕೋಟಿ.

 ಹೊಸೂರು ಬಳಿ ಹಾಗೂ ತಾಳಗುಪ್ಪ ಬಳಿ ರೈಲ್ವೆ ಮೇಲ್ಸ್ತುವೆ ಹಾಗೂ ಬೈಪಾಸ್ ರಸ್ತೆ ನಿರ್ಮಾಣ-198.58 ಕೋಟಿ.

 ಹೊಸನಗರದ ಮಾವಿನಕೊಪ್ಪದಿಂದ ಆಡುಗೋಡಿವರೆಗೆ 13.80 ಕಿ.ಮೀ. ಬೈಪಾಸ್ ರಸ್ತೆ ಮತ್ತು ಬೆಕ್ಕೋಡಿ ಹೊಸನಗರದ ಬಳಿ ಸೇತುವೆ ನಿರ್ಮಾಣ 313. 56 ಕೋಟಿ

 ಉದ್ಘಾಟನೆಗೊಂಡ ಕಾಮಗಾರಿಗಳು:

 ಶಿವಮೊಗ್ಗದ ವಿದ್ಯಾನಗರದಲ್ಲಿ 43.90 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ರೈಲ್ವೆ ಮೇಲ್ಸ್ತುವೆ

 ಶಿವಮೊಗ್ಗ ನಗರದ ಬೈಪಾಸ್ ರಸ್ತೆಯಲ್ಲಿ 20.12 ಕೋಟಿ ವೆಚ್ಚದಲಿ ತುಂಗಾನದಿಗೆ ನಿರ್ಮಾಣವಾಗಿರುವ ಮತ್ತೊಂದು ಸೇತುವೆ

 ತೀರ್ಥಹಳ್ಳಿ ಪಟ್ಟಣದಲ್ಲಿ 55.62ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ತುಂಗಾನದಿಗೆ ಸೇತುವೆ ಹಾಗೂ 1.355 ಕಿ.ಮೀ. ಉದ್ದದ ಬೈಪಾಸ್ ರಸ್ತೆ.

 ಬೈಂದೂರು, ರಾಣೆಬೆನ್ನೂರು ರಸ್ತೆಯಲ್ಲಿ 7 ಕಿರು ಸೇತುವೆಗಳು.