ಒಂದು ವರ್ಷದೊಳಗೆ ಈಡಿಗ ಭವನ ಪೂರ್ಣಗೊಳಿಸಿ, ಇಲ್ಲವಾದಲ್ಲಿ ಬಹಿರಂಗ ಕ್ಷಮೆ ಕೇಳಿ- ಕೆ.ಅಜ್ಜಪ್ಪ

Complete Idiga Bhavan within a year or else apologise publicly: K Ajjappa

ಒಂದು ವರ್ಷದೊಳಗೆ ಈಡಿಗ ಭವನ ಪೂರ್ಣಗೊಳಿಸಿ, ಇಲ್ಲವಾದಲ್ಲಿ ಬಹಿರಂಗ ಕ್ಷಮೆ ಕೇಳಿ- ಕೆ.ಅಜ್ಜಪ್ಪ
ಒಂದು ವರ್ಷದೊಳಗೆ ಈಡಿಗ ಭವನ ಪೂರ್ಣಗೊಳಿಸಿ, ಇಲ್ಲವಾದಲ್ಲಿ ಬಹಿರಂಗ ಕ್ಷಮೆ ಕೇಳಿ- ಕೆ.ಅಜ್ಜಪ್ಪ

ಒಂದು ವರ್ಷದೊಳಗೆ ಈಡಿಗ ಭವನ ಪೂರ್ಣಗೊಳಿಸಿ, ಇಲ್ಲವಾದಲ್ಲಿ ಬಹಿರಂಗ ಕ್ಷಮೆ ಕೇಳಿ- ಕೆ.ಅಜ್ಜಪ್ಪ

 ಶಿವಮೊಗ್ಗದ ಪತ್ರಿಕಾ ಭವನದಲ್ಲಿ ಇಂದು ಆರ್ಯ ಈಡಿಗ ಸಂಘದ ಮುಖಂಡರು ಸುದ್ದಿಘೋಷ್ಟಿ ಯಲ್ಲಿ ಪರೋಕ್ಷವಾಗಿ ಸಚಿವ ಮಧು ಬಂಗಾರಪ್ಪ ವಿರುದ್ಧ ಅಸಮಧಾನ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸಮಾಜದ  ಅಧ್ಯಕ್ಷ k ಅಜ್ಜಪ್ಪ ಕುಮಾರ್ ಬಂಗಾರಪ್ಪನವರು ನಮ್ಮ ತಾಲೂಕಿನಲ್ಲಿ ಈಡಿಗರ ಭವನ ನಿರ್ಮಿಸಲು 2 ಕೋಟಿ ನೀಡಿದ್ದರು. ಅದರಲ್ಲಿ 1.5 ಕೋಟಿ ರೂ ಗಳು ಮಾತ್ರ ಬಿಡುಗಡೆಯಾಗಿದೆ. ಇನ್ನು ಉಳಿದ 50 ಲಕ್ಷ ರೂ ಗಳನ್ನ ಕಾಂಗ್ರೆಸ್ ನ ಸಚಿವ ರಾದ ಮಧು ಬಂಗಾರಪ್ಪ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರು ಭವನದ ನಿರ್ಮಾಣಕ್ಕೆ ಸಾಕಷ್ಟು ನೆರವು ಸಹಕಾರವನ್ನು ನೀಡಿದ್ದಾರೆ

ನಮ್ಮ ಕಟ್ಟಡ ಕಾಮಗಾರಿ ಇನ್ನೂ ಅರ್ಧಕ್ಕೆ ನಿಂತಿದೆ. ಇನ್ನು ಒಂದು ವರ್ಷದೊಳಗೆ ಕಟ್ಟಡ  ಕಾಮಗಾರಿ ಪೂರ್ಣಗಳ್ಳಬೇಕು. ಸರ್ಕಾರಕ್ಕೆ ವಾಪಸ್ಸು ಹೋಗಿರುವ ಹಣವನ್ನು ಸಚಿವರು ವಾಸಪ್ಪು ಮಂಜೂರು ಮಾಡಿಸಿ ಕಾಮಗಾರಿ ಪೂರ್ಣಗೊಳಿಸಬೇಕು, ಇಲ್ಲವಾದಲ್ಲಿ ಮಧು ಬಂಗಾರಪ್ಪನವರು ಸಮಾಜದ ಮುಂದೆ ಕ್ಷಮೆ ಕೇಳಲಿ ಎಂದು ಅಜ್ಜಪ್ಪ ಹೇಳಿದ್ದಾರೆ.

 2018ರಿಂದ ನಾನು ಸೊರಬ ಆರ್ಯ ಈಡಿಗ ಸಮುದಾಯದ ಅಧ್ಯಕ್ಷನಾಗಿದ್ದೆ. ನಾನು ಒಂದು ದಿನ ಸಭೆಗೆ ಗೈರಾಗಿದ್ದಾಗ ಸಂಚುಮಾಡಿ ನನನ್ನು  ಅಧ್ಯಕ್ಷ ಸ್ಥಾನದಿಂದ ಇಳಿಸಿದ್ದಾರೆ ಎಂದು ಅಜ್ಜಪ್ಪ ಆರೋಪಿಸಿದ್ದಾರೆ. ವಿರೋಧದ ನಡುವೆಯೂ ನನ್ನ ಬದಲು ಬೇರೆಯವರನ್ನು ಅಧ್ಯಕ್ಷರನ್ನಾಗಿ ನೇಮಿಸಿದ್ದಾರೆ. ಇದು ಕಾನೂನಿಗೆ ಬಾಹಿರ ಎಂದರು