ಶಿವಮೊಗ್ಗ ಜಿಲ್ಲೆಯ ಸಾವಿರಾರು ಕೋಟಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಲೋಕಾರ್ಪಣೆ ಕಾರ್ಯಕ್ರಮದ ಕಂಪ್ಲೀಟ್ ಡಿಟೈಲ್..ಯಾವೆಲ್ಲಾ ಕಾಮಗಾರಿಗಳಾಗಲಿವೆ ಎಂಬುದರ ಕಂಪ್ಲೀಟ್ ಡಿಟೈಲ್ ಇಲ್ಲಿದೆ
ಬೆಂಗಳೂರು ಟು ಚೆನೈ ಎಕ್ಸ್‌ಪ್ರೆಸ್ ರಸ್ತೆ ಶ್ರೀಘ್ರದಲ್ಲೇ ಮುಕ್ತಾಯವಾಗುತ್ತದೆ ಎಂದು ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಶಿವಮೊಗ್ಗದ ಸಂಸದ ಬಿ.ವೈ ರಾಘವೇಂದ್ರ ದೇಶಕ್ಕೆ ನಂಬರ್ ಒನ್ ರಾಜಕಾರಣಿಯಾಗಿ ಕೆಲಸ ಮಾಡಿದ್ದಾರೆಯ. ಈ ಬಾರಿ ಅವರನ್ನು ಗೆಲ್ಲಿಸಿ ಎಂದು ಗಡ್ಕರ್ ಜನತೆಗೆ ಮನವಿ ಮಾಡಿದ್ದಾರೆ ರಾಜ್ಯದ ಸಾರಿಗೆ ವಿಚಾರದಲ್ಲಿ ಕೇಂದ್ರದ ಸ್ಪಂರಧನೆಯನ್ನು ಲೋಕೋಪಯೋಗಿ ಸಚಿವ ರಮೇಶ್ ಜಾರಕಿಹೊಳಿ ಹೊಗಳಿದ್ದಾರೆ.

ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ
ಶಿವಮೊಗ್ಗ ಜಿಲ್ಲೆಯ ಸುಮಾರು 6 ಸಾವಿರದ 168 ಕೋಟಿ ವೆಚ್ಚದ ವಿವಿಧ ರಸ್ತೆ ಮೇಲ್ಸೇಸುತೆವೆ ಕಾಮಗಾರಿ ಮತ್ತು ಶಂಕುಸ್ಥಾಪನೆಗೆ ಕೇಂದ್ರಕ ಸಾರಿಗೆ ಸಚಿವ ನಿತಿನ್ ಗಡ್ಕರಿ ಚಾಲನೆ ನೀಡಿದರು. ಶಿವಮೊಗ್ಗದ ನೆಹರು ಮೈದಾನದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ವರ್ಚುವಲ್ ಮಿಡಿಯಾ ಮೂಲಕ ಉದ್ಗಾಟಿಸಿದರು. ಈ ಸಂದರ್ಭದಲ್ಲಿ ಕನ್ನಡದಲ್ಲಿಯೇ ಭಾಷಣ ಆರಂಭಿಸಿದ ನಿತಿನ್ ಗಡ್ಕರ್. ತಮ್ಮ ಅಧಿಕಾರವಧಿಯಲ್ಲಿ ಆದ ಅಭಿವೃದ್ಧಿ ಕಾರ್ಯಗಳನ್ನು ಮೆಲಕು ಹಾಕಿದರು. ರಾಘವೇಂದ್ರ ರವರು ದೇಶಕ್ಕೆ ನಂಬರ್ ಒನ್ ರೀತಿಯಲ್ಲಿ ಕೆಲಸ ಮಾಡಿದ್ದಾರೆ.

ರಾಘವೇಂದ್ರ ಅವರು ನಿರಂತರವಾಗಿ ನನ್ನ ಕಚೇರಿ ಬಂದು ಭೇಟಿ ಮಾಡಿದ್ದಾರೆ. ರಾಘವೇಂದ್ರ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.
ಕರ್ನಾಟಕದಲ್ಲಿ ಇನ್ನಷ್ಟು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಮಾಡ್ತೇನೆ ಎಂದು ಗಡ್ಕರಿ ಹೇಳಿದ್ದಾರೆ.ರಾಘವೇಂದ್ರಯವರು ಸಾಗರ ಟು ಮರಕುಟುಕ ರಸ್ತೆಗೆ ಕೇಳಿದ್ದಾರೆ, ಅದಕ್ಕೆ ಅನುಮೋದನೆ ನೀಡ್ತೇನೆ ಆಗುಂಬೆ ಘಾಟಿಯಲ್ಲಿ ಸುರಂಗ ಮಾರ್ಗ ಮಾಡಲು, ಅಧಿಕಾರಿಗಳು ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ. ಕರ್ನಾಟಕ ಕ್ಕೆ ಸಾಕಷ್ಟು ರಸ್ತೆಗಳನ್ನ ನೀಡಿದ್ದೇನೆ. ಇನ್ನಷ್ಟು ರಾಷ್ಟ್ರೀಯ ಹೆದ್ದಾರಿ ಯನ್ನ ಮುಂದಿನ ದಿನದಲ್ಲಿ ನಿರ್ಮಾಣ ಮಾಡಲಾಗುವುದು. ಕಾಶ್ಮೀರ ದಿಂದ ಕನ್ಯಾಕುಮಾರಿ ವರೆಗೆ ಎಕ್ಸ್‌ಪ್ರೆಸ್ ಹೈ ವೇ ನಿರ್ಮಾಣ ಮಾಡಲಾಗುವುದು.
ದೇಶದಲ್ಲಿ 16 ರೋಪ್ ವೇ ನಿರ್ಮಾಣ ಮಾಡಲಾಗುವುದು. ಅದರಲ್ಲಿ ಕರ್ನಾಟಕದಲ್ಲಿ ಎರಡು ರೋಪ್ ವೇ ನಿರ್ಮಾಣ. ಕೊಡಚಾದ್ರಿ ಟು ಕೊಲ್ಲೂರು. ಕೊಪ್ಪಳ ಅಂಜನಾದ್ರಿ ರೋಪ್ ವೇ ನಿರ್ಮಾಣ ಮಾಜಲಾಗುವುದು ಎಂದ ಗಡ್ಕರಿ ಸಂಸದ ರಾಘವೇಂದ್ರರನ್ನು ಮತ್ತೊಮ್ಮೆ ಗೆಲ್ಲಿಸುವಂತೆ ಕರೆ ನೀಡಿದರು.


ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸದ ಬಿ.ವೈ.ರಾಘವೇಂದ್ರ ಕೇಂದ್ರ ಸಚಿವರಿಗೆ ವಿಶೇಷ ಧನ್ಯವಾದ ತಿಳಿಸಿದರು.
ಲೋಕಸಭಾ ಚುನಾವಣೆ ಹತ್ತಿರ ಬಂದಿದೆ. ನಾವು ಯಾರಿಗೂ ಮತ ಕೇಳೋದು ಬೇಡ, ಜನರೇ ನಮ್ಗೆ ಮತ ನೀಡ್ತಾರೆ. ನಮ್ಮ ಅಭಿವೃದ್ಧಿ ಕೆಲಸ ನೋಡಿ ಜನರೇ ಮತ ಹಾಕ್ತಾರೆ. ಪಟ್ಟಿ ಮಾಡಿದ್ರೆ ದಿನಗಟ್ಟಲೇ ರಾಘಣ್ಣ ಅಭಿವೃದ್ಧಿ ಕೆಲಸ ಹೇಳಬಹುದು. ಮೋದಿ ದೇಶಕ್ಕೆ ಬೇಕು, ಮೋದಿ ದೇಶಕ್ಕೆ ಬೇಕು ಅಂದ್ರೆ ಇಲ್ಲಿ ರಾಘಣ್ಣ ಗೆಲ್ಲಿಸಬೇಕು
ನಮ್ಮ ಕ್ಷೇತ್ರ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಸೇರಿದಕ್ಕೆ ಸಾಕಷ್ಟು ಅಭಿವೃದ್ಧಿ ಕೆಲಸ ಆಗಿವೆ. ರಾಜ್ಯದಲ್ಲಿ ನಂಬರ್ 1 ಸಂಸದ ಅಂದ್ರೆ ಅದು ನಮ್ಮ ರಾಘಣ್ಣ. ಶಿವಮೊಗ್ಗ ಕ್ಷೇತ್ರ ವನ್ನ ಮಾದರಿ ಕ್ಷೇತ್ರವನ್ನಾಗಿಸಿದ್ದಾರೆ. ಗಡ್ಕರಿ ಅವರನ್ನ ರೋಡ್ ಕರಿ ಅಂತಾ ಹೇಳಬೇಕು.
ಯಾಕೆ ಅಂದ್ರೆ ಅವರು ಬಂದ್ರೆ ರೋಡ್ ಬರುತ್ತದೆ. ಅದ್ಕೆ ಅವರನ್ನ ರೋಡ್ ಕರಿ ಅಂತಾ ನಾವು ಕರೆಯಬೇಕು
ಅಭಿವೃದ್ಧಿ ಯಲ್ಲಿ ಭಾರತವನ್ನ ಅಂತರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿದಿದ್ದು ನರೇಂದ್ರ ಮೋದಿ ಅದು ಮೋದಿ ಅವರ ತಾಕತ್ತು. ಶಿವಮೊಗ್ಗ ಜಿಲ್ಲೆಯನ್ನ ಅಭಿವೃದ್ಧಿ ಯಲ್ಲಿ ಉತ್ತುಂಗಕ್ಕೆ ರಾಘವೇಂದ್ರ ಅವರು ಏರಿಸಿದ್ದಾರೆ. ಪ್ರಪಂಚಕ್ಕೆ ವಿಶ್ವಗುರು ಭಾರತ ಆಗುತ್ತದೆ.
ಮತ್ತೊಮ್ಮೆ ದೇಶಕ್ಕೆ ಮೋದಿ, ಶಿವಮೊಗ್ಗಕ್ಕೆ ರಾಘವೇಂದ್ರ.ಮೋದಿಯವರು 108 ಯೋಜನೆಗಳನ್ನ ಜಾರಿಗೆ ತಂದಿದ್ದಾರೆ.10 ವರ್ಷದಲ್ಲಿ 50 ಸಾವಿರ ಕಿ.ಮೀ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ವಾಗಿದೆ. ನಿತಿನ್ ಗಡ್ಕರಿ ಬಂದಮೇಲೆ ಒಂದು ದಿನಕ್ಕೆ 37 ಕಿ.ಮೀ ರಸ್ತೆ ನಿರ್ಮಾಣ ವಾಗ್ತಿದೆ.
ಶಂಕುಸ್ಥಾಪನೆಗೊಂಡ ಕಾಮಗಾರಿಗಳು:


