SHIVAMOGGA NEWS TODAY

ಶಿವಮೊಗ್ಗಕ್ಕೆ ಸಚಿವ ರಾಮಲಿಂಗಾ ರೆಡ್ಡಿ : ಯಾವಾಗ, ಕಾರಣವೇನು 

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

Minister Ramalinga Reddy ಶಿವಮೊಗ್ಗ | ಜಲಸಂಪನ್ಮೂಲ ಸಚಿವರಾದ  ರಾಮಲಿಂಗಾರೆಡ್ಡಿ ಅವರು ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಪ್ರವಾಸ ಹಮ್ಮಿಕೊಂಡಿದ್ದಾರೆ. ಈ ಕುರಿತು ಜಲಸಂಪನ್ಮೂಲ ಸಚಿವರ ಆಪ್ತ ಕಾರ್ಯದರ್ಶಿಗಳ ಕಚೇರಿಯಿಂದ ಅಧಿಕೃತ ಪ್ರವಾಸದ ವೇಳಾಪಟ್ಟಿ ಬಿಡುಗಡೆಯಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯ ವಿವಿಧ ಹಂತದ ಪ್ರಮುಖ ಕಾಮಗಾರಿಗಳನ್ನು ಖುದ್ದಾಗಿ ವೀಕ್ಷಣೆ ಮಾಡಲು ಹಾಗೂ ಪ್ರಗತಿ ಪರಿಶೀಲನೆ ನಡೆಸಲು ಸಚಿವರು ಈ ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದಾರೆ.

ಶಿವಮೊಗ್ಗ : ಬ್ಯಾಂಕ್​ನಲ್ಲಿ ಅಗ್ನಿ ಅವಘಡ: ಲಕ್ಷಾಂತರ ಮೌಲ್ಯದ ವಸ್ತುಗಳು ಬೆಣಕಿಗಾಹುತಿ

Minister Ramalinga Reddy ಜುಲೈ 5ರ ಭಾನುವಾರದಂದು ಬೆಳಗ್ಗೆ 06:00 ಗಂಟೆಗೆ ಬೆಂಗಳೂರು ರಸ್ತೆ ಮೂಲಕ ಪ್ರಯಾಣ ಬೆಳೆಸಲಿರುವ ಸಚಿವರು, ಬೆಳಗ್ಗೆ 10:30ಕ್ಕೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆಗೆ ಆಗಮಿಸಲಿದ್ದಾರೆ. ಅಲ್ಲಿ ಭದ್ರಾ ಮೇಲ್ದಂಡೆ ಯೋಜನೆ ಪ್ಯಾಕೇಜ್-1 ಕಾಮಗಾರಿಯ ವಿದ್ಯುತ್ ಸಂಪರ್ಕದ ಟವರ್ ನಿರ್ಮಾಣ ಕೆಲಸದ ಪರಿವಿಕ್ಷಣೆ ನಡೆಸಲಿದ್ದಾರೆ. ತದನಂತರ ಬೆಳಗ್ಗೆ 11:00 ಗಂಟೆಗೆ ಮುತ್ತಿನಕೊಪ್ಪ ರಸ್ತೆ ಮೂಲಕ ಎನ್.ಆರ್.ಪುರ ತಾಲೂಕಿನ ಮುತ್ತಿನಕೊಪ್ಪಕ್ಕೆ ತೆರಳಿ ಪ್ಯಾಕೇಜ್-1 ಕಾಮಗಾರಿಗಳ ಪರಿಶೀಲನೆ ನಡೆಸಿ ಅಧಿಕಾರಿಗಳೊಂದಿಗೆ ಚರ್ಚಿಸಲಿದ್ದಾರೆ. ಮಧ್ಯಾಹ್ನ 12:15ಕ್ಕೆ ಮುತ್ತಿನಕೊಪ್ಪ ರಸ್ತೆಯಿಂದ ಹೊರಟು ತರೀಕೆರೆ ಮಾರ್ಗ ಮಧ್ಯದಲ್ಲಿ ಭದ್ರಾ ಜಲಾಶಯ ಮತ್ತು ಭದ್ರಾ ಮೇಲ್ದಂಡೆ ಯೋಜನೆ ಇನ್‌ಟೇಕ್ ಕಾಮಗಾರಿ ಪರಿಶೀಲಿಸಲಿದ್ದಾರೆ. ಮಧ್ಯಾಹ್ನ 01:30ಕ್ಕೆ ತರೀಕೆರೆ-ಕಡೂರು ಕೆರೆ ತುಂಬಿಸುವ ಯೋಜನೆಯ ಪಂಪ್‌ಹೌಸ್-2 ಕಾಮಗಾರಿಯ ವೀಕ್ಷಣೆ ಮುಗಿಸಿ, ಮಧ್ಯಾಹ್ನ 02:00 ಗಂಟೆಗೆ ಕಡೂರು ಪಂಪ್‌ಹೌಸ್ ರಸ್ತೆ ಮೂಲಕ ಅಜ್ಜಂಪುರಕ್ಕೆ ಪ್ರಯಾಣಿಸಲಿದ್ದಾರೆ.

ಅಜ್ಜಂಪುರಕ್ಕೆ ಮಧ್ಯಾಹ್ನ 02:30ಕ್ಕೆ ತಲುಪಲಿರುವ ಸಚಿವರು, ಭದ್ರಾ ಮೇಲ್ದಂಡೆ ಯೋಜನೆ ಮುಖ್ಯ ಕಾಲುವೆಯ ವೈ-ಜಂಕ್ಷನ್ ಮತ್ತು ಚಿತ್ರದುರ್ಗ ಶಾಖಾ ಕಾಲುವೆ ಪ್ಯಾಕೇಜ್-4ರ ಬಾಟಲ್‌ನೆಕ್ಸ್ ಕಾಮಗಾರಿ ಪರಿಶೀಲನೆ ನಡೆಸಲಿದ್ದಾರೆ. ಬಳಿಕ ಮಧ್ಯಾಹ್ನ 03:30ಕ್ಕೆ ಚಿತ್ರದುರ್ಗ ಶಾಖಾ ಕಾಲುವೆ ಹೊಸದುರ್ಗ ಮಾರ್ಗವಾಗಿ ಸಂಜೆ 04:30ಕ್ಕೆ ಗೋನೂರು ಅಕ್ವಿಡಕ್ಟ್‌ಗೆ ಆಗಮಿಸಿ, ಚಿತ್ರದುರ್ಗ ಶಾಖಾ ಕಾಲುವೆಯ ಪ್ಯಾಕೇಜ್-11ರ ಕಾಮಗಾರಿ ವೀಕ್ಷಣೆ ಮಾಡಲಿದ್ದಾರೆ. ಅಂತಿಮವಾಗಿ ಸಂಜೆ 05:30ಕ್ಕೆ ಚಿತ್ರದುರ್ಗದ ಭದ್ರಾ ಮೇಲ್ದಂಡೆ ಯೋಜನೆ ವಲಯ ಕಚೇರಿ ಸಭಾಂಗಣದಲ್ಲಿ ಉನ್ನತ ಅಧಿಕಾರಿಗಳೊಂದಿಗೆ ಮಹತ್ವದ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಸಭೆಯ ನಂತರ ಮರಳಿ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.

Minister Ramalinga Reddy to Visit Shimoga

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.