ಚಿನ್ನದ ಮುಖದಲ್ಲಿ ಕೋಟೆ ಮಾರಿಕಾಂಬೆಯ ದರ್ಶನ! ಹೇಗಿತ್ತು ಪೂಜಾ ಕಾರ್ಯಕ್ರಮ!

ಹಂಚಿಕೊಳ್ಳಿ
WhatsApp Facebook X Telegram
Gold Mask and Silver Door Offered to Sri Marikamba Devi in Shivamogga
Gold Mask and Silver Door Offered to Sri Marikamba Devi in Shivamogga

Sri Marikamba Devi in Shivamogga |ಮಲೆನಾಡು ಟುಡೆ | ಶಿವಮೊಗ್ಗ |ನಗರದ ಕಾವಲು ತಾಯಿ ಕೋಟೆ ಮಾರಿಕಾಂಬೆ ಭಕ್ತರಿಗೆ ಇವತ್ತು ಶುಭ ಸಂಭ್ರಮದ ದಿನ. ಮಾರಿಕಾಂಬೆಗೆ ಇವತ್ತು ಚಿನ್ನದ ಮುಖ, ಬೆಳ್ಳಿ ಬಾಗಿಲನ್ನು ಅರ್ಪಿಸಲಾಗಿದೆ. ಈ ಕಾರ್ಯಕ್ರಮವೂ ಶಾಸ್ತ್ರೋಕ್ತವಾಗಿ ನಡೆದಿದೆ.

ಶಿವಮೊಗ್ಗದ ಇತಿಹಾಸ ಪ್ರಸಿದ್ಧ ಕೋಟೆ ಶ್ರೀ ಮಾರಿಕಾಂಬಾ ದೇವಸ್ಥಾನದಲ್ಲಿನ ಮೂಲ ಮೂರ್ತಿಗೆ ಚಿನ್ನದ ಮುಖ ಹಾಗೂ ಬೆಳ್ಳಿ ಬಾಗಿಲು ಅರ್ಪಿಸಲಾಗುತ್ತದೆ ಎಂದು ಇತ್ತೀಚೆಗೆ ಮಲೆನಾಡು ಟುಡೆ ಸುದ್ದಿ ಮಾಡಿತ್ತು. ಇವತ್ತು ಅದರ ಕಾರ್ಯಕ್ರಮ ನಡೆಯಿತು. ವಿಶೇಕ್ಷ ಸಂದರ್ಭದಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ದೇವಸ್ಥಾನದ ಆವರಣ ಭಕ್ತರಿಂದ ತುಂಬಿತ್ತು. ಭಕ್ತಿಯ ಸಂಭ್ರಮ ವಾತಾವರಣ ಹಬ್ಬದಂತಿತ್ತು.

ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮದರ್ಶಿ ಡಾ. ಜಿ. ಭೀಮೇಶ್ವರ ಜೋಷಿ ಅವರ ದಿವ್ಯ ಸಾನಿಧ್ಯ ದಲ್ಲಿ ದೇವಿಗಾಗಿ ತಯಾರಿಸಲಾದ ಸ್ವರ್ಣ ಮುಖ ಕವಚ ಮತ್ತು ಬೆಳ್ಳಿಯ ದ್ವಾರವನ್ನು ದೇವಸ್ಥಾನಕ್ಕೆ ಸಮರ್ಪಿಸಲಾಯಿತು. ಡಾ. ಜಿ. ಭೀಮೇಶ್ವರ ಜೋಷಿಯವರು ಖುದ್ದಾಗಿ ಸ್ವರ್ಣ ಮುಖವನ್ನು ದೇವಿಗೆ ಸಮರ್ಪಿಸಿದ್ರು.

ಇನ್ನೂ ಕಾರ್ಯಕ್ರಮದ ಭಾಗವಾಗಿ ದೇವಸ್ಥಾನದಲ್ಲಿ ಬೆಳಗಿನ ಜಾವದಿಂದಲೇ ವಿವಿಧ ಧಾರ್ಮಿಕ ವಿಧಿವಿಧಾನ, ಗಣ ಹೋಮ, ಪುಣ್ಯಾಹ ವಾಚನ ಸೇರಿದಂತೆ ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆದವು, ದೇವಾಲಯದಲ್ಲಿ ನೆರದಿದ್ದ ಮಹಿಳೆಯರು ಸಾಮೂಹಿಕ ಲಲಿತಾ ಹೋಮವನ್ನು ನೆರವೇರಿಸಿದರು.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor