ವಾಣಿಜ್ಯ ವಿಮಾನ ಹಾರಾಟ ಆರಂಭದ ಬೆನ್ನಲ್ಲೆ ಕುವೆಂಪು ವಿಮಾನ ನಿಲ್ದಾಣದ ಬಗ್ಗೆ ವಿವಾದ! ಏನಿದು ?

Malenadu Today

KARNATAKA NEWS/ ONLINE / Malenadu today/ Sep 1, 2023 SHIVAMOGGA NEWS

ನಿನ್ನೆಯಷ್ಟೆ  ಬೆಂಗಳೂರಿನಿಂದ ತನ್ನ ಮೊದಲ ಪ್ಯಾಸೆಂಜರ್​ ವಿಮಾನ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಬಂದಿಳಿದು ಐತಿಹಾಸಿಕ ಕ್ಷಣಕ್ಕೆ  ಸಾಕ್ಷಿಯಾಯಿತು. ಆದಾಗ್ಯೂ, ವಿಮಾನ ನಿಲ್ದಾಣದಲ್ಲಿ ಪ್ರದರ್ಶಿಸಲಾದ ಹಿಂದಿ ಭಾಷೆಯ ಪ್ರಕಟಣೆ ಮೊದಲ ದಿನವೇ ವಿವಾದಕ್ಕೂ ಕಾರಣವಾಯ್ತು. 

ಏರ್​ಪೋರ್ಟ್​ನಲ್ಲಿ ಹಿಂದಿ ಪ್ರಕಟಣೆಯ ಬಗ್ಗೆ  ನೆಟ್ಟಿಗರು ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿದರು.ಅಲ್ಲದೆ ಈ ಸಂಬಂಧ ಸಾಮಾಜಿಕ ಮಾಧ್ಯಮಗಳ ಮೂಲಕ ಹಲವರು ತಮ್ಮದೇ ಅಭಿಪ್ರಾಯಗಳನ್ನ ಮಂಡಿಸಿದರು. ಅದರಲ್ಲಿಯು ರೂಪೇಶ್ ರಂಜಣ್ಣ ಎಂಬವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಕಳವಳವನ್ನು ವ್ಯಕ್ತಪಡಿಸಿ, ರಾಜ್ಯ ಸರ್ಕಾರ ನಡೆಸುವ ವಿಮಾನ ನಿಲ್ದಾಣದಲ್ಲಿ ಹಿಂದಿ ಹೇರಿಕೆ ಏಕೆ ಎಂದು ಪ್ರಶ್ನಿಸಿದ್ರು. 

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಹಿಂದಿ ಘೋಷಣೆಯನ್ನು ಪ್ರದರ್ಶಿಸುವ ಡಿಜಿಟಲ್ ನೋಟಿಸ್ ಬೋರ್ಡ್ನ ಸ್ನ್ಯಾಪ್​ ಶಾಟ್​ನ್ನ ಹಂಚಿಕೊಂಡಿದ್ದ ಅವರು, . “ಇದು ಹಿಂದಿ ರಾಜ್ಯವಲ್ಲ, ಇದು ಕರ್ನಾಟಕ. ಇಲ್ಲಿ ಹಿಂದಿ ಅಗತ್ಯವಿಲ್ಲ. ಇದನ್ನು ತೆಗೆದುಹಾಕಿ ಕನ್ನಡದಲ್ಲಿ ಹಾಕಿ ಎಂದು ಬರೆದುಕೊಂಡಿದ್ದರು. 

ಇನ್ನೂ ಈ ಟ್ವೀಟ್ಗೆ ಪ್ರತಿಕ್ರಿಯಿಸಿರುವ ಕೈಗಾರಿಕಾ ಮತ್ತು ವಾಣಿಜ್ಯ ಸಚಿವ ಎಂ.ಬಿ.ಪಾಟೀಲ್, ಕನ್ನಡ ಮತ್ತು ಇಂಗ್ಲಿಷ್ಗೆ ಮಾತ್ರ ಆದ್ಯತೆ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಇದು ನನ್ನ ಗಮನಕ್ಕೆ ಬಂದಿಲ್ಲ, ನಾನು ಖಂಡಿತವಾಗಿಯೂ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ! ಕನ್ನಡ ಮತ್ತು ಇಂಗ್ಲಿಷ್ ಭಾಷೆಗೆ ಆದ್ಯತೆ ನೀಡಲಾಗುವುದು ಎಂದಿದ್ದಾರೆ ಅಲ್ಲದೆ, ಕನ್ನಡ ಕರ್ನಾಟಕ ಎಂಬ ಹ್ಯಾಶ್ ಟ್ಯಾಗ್ ಬಳಸಿದ್ದಾರೆ. 


ಇನ್ನಷ್ಟು ಸುದ್ದಿಗಳು 


 

 

Share This Article