ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಎಸ್.ಷಡಕ್ಷರಿ ಯಾವ ಪಕ್ಷ ಎಂದು ಘೋಷಣೆ ಮಾಡಿಕೊಂಡ್ರೆ ಒಳ್ಳೆದು ಅಂತಾ ಕುಮಾರ್ ಬಂಗಾರಪ್ಪ ಹೇಳಿದ್ದೇಕೆ..

ಸೊರಬ ತಹಶೀಲ್ದಾರ್ ಸರಣಿ ವರ್ಗಾವಣೆ ಸೊರಬ ತಾಲೂಕಿನಲ್ಲಿ ಹತ್ತು ಹಲವು ಚರ್ಚೆಗಳನ್ನು ಹುಟ್ಟು ಹಾಕಿದೆ. ಕೇವಲ ಐದು ವರ್ಷಗಳಲ್ಲಿ 15 ತಹಸಿಲ್ದಾರ್ ವರ್ಗಾವಣೆಯಾಗಿರುವುದು ರಾಜ್ಯದಲ್ಲಿಯೇ ಮೊದಲ ಬಾರಿಯಾಗಿದೆ.

ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಎಸ್.ಷಡಕ್ಷರಿ ಯಾವ ಪಕ್ಷ ಎಂದು ಘೋಷಣೆ ಮಾಡಿಕೊಂಡ್ರೆ ಒಳ್ಳೆದು ಅಂತಾ ಕುಮಾರ್ ಬಂಗಾರಪ್ಪ ಹೇಳಿದ್ದೇಕೆ..
kumar Bangsrsppa akrosha, Kumar Bangarappa,
ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಎಸ್.ಷಡಕ್ಷರಿ ಯಾವ ಪಕ್ಷ ಎಂದು ಘೋಷಣೆ ಮಾಡಿಕೊಂಡ್ರೆ ಒಳ್ಳೆದು ಅಂತಾ ಕುಮಾರ್ ಬಂಗಾರಪ್ಪ ಹೇಳಿದ್ದೇಕೆ..

ಸೊರಬ ತಹಶೀಲ್ದಾರ್ ಸರಣಿ ವರ್ಗಾವಣೆ ಸೊರಬ ತಾಲೂಕಿನಲ್ಲಿ ಹತ್ತು ಹಲವು ಚರ್ಚೆಗಳನ್ನು ಹುಟ್ಟು ಹಾಕಿದೆ. ಕೇವಲ ಐದು ವರ್ಷಗಳಲ್ಲಿ 15 ತಹಸಿಲ್ದಾರ್ ವರ್ಗಾವಣೆಯಾಗಿರುವುದು ರಾಜ್ಯದಲ್ಲಿಯೇ ಮೊದಲ ಬಾರಿಯಾಗಿದೆ. ತಹಶೀಲ್ದಾರ್ ವರ್ಗಾವಣೆಗೆ ಸೊರಬ ಶಾಸಕ ಕುಮಾರ್ ಬಂಗಾರಪ್ಪರೇ ಕಾರಣ ಎಂದು ಷಢಕ್ಷರಿಯವರು ಸಾಗರದ ಕಾರ್ಯಕ್ರಮದಲ್ಲಿ ಹೆಸರು ಹೇಳದೆ ಪ್ರಸ್ಥಾಪಿಸಿದ್ರು. ಷಡಕ್ಷರಿಯವರ ಆರೋಪಕ್ಕೆ ಕುಮಾರ್ ಬಂಗಾರಪ್ಪ ತಮ್ಮದೇ ಧಾಟಿಯಲ್ಲಿ ಉತ್ತರಿಸಿದ್ದಾರೆ.

ಭಾಷಣದಲ್ಲಿ ಷಡಕ್ಷರಿ ಏನಂದ್ರು.?

ಸಾಗರ ನಗರಸಭೆ ಆವರಣದ ಗಾಂಧಿ ಮೈದಾನದಲ್ಲಿ ದಿನಾಂಕ 12/01/2023 ರಂದು ನೆಡೆದ ಕರ್ನಾಟಕ ರಾಜ್ಯ ನೌಕರರ ಸಮಾರಂಭದಲ್ಲಿ, ರಾಜ್ಯಾಧ್ಯಕ್ಷ ಷಡಕ್ಷರಿ ಮಾಡಿದ ಭಾಷಣ ಸೊರಬ ಶಾಸಕರ ಅಸಮಧಾನಕ್ಕೆ ಕಾರಣವಾಗಿದೆ.

ಎಸ್ ಷಡಕ್ಷರಿಯವರು ಸರ್ಕಾರಿ ನೌಕರರು ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಎದುರಿಸುತ್ತಿರುವ ಸನ್ನಿವೇಶಗಳ ಬಗ್ಗೆ ಭಾಷಣ ಮಾಡುವಾಗ ನಮ್ಮ ಅಕ್ಕಪಕ್ಕದ ಕೆಲವು ಶಾಸಕರಿದ್ದಾರೆ. ಏನು ಇಲ್ಲಾರಿ.., ಕೇವಲ  ಐದು ವರ್ಷಗಳ ಅವಧಿಯಲ್ಲಿ  15 ತಹಸೀಲ್ದಾರ್ ಬದಲಾವಣೆ ಮಾಡಿದ್ದಾರೆ ಹೆಂಗೆ.., ಹೀಗಾಗಿ ಬಿಟ್ರೆ. ನೌಕರರು ಕೆಲಸ ಮಾಡೋದಕ್ಕೆ ಆಗುತ್ತಾ..,ನೋಡ್ರಿ ಕಾರ್ಯಾಂಗ ವ್ಯವಸ್ಥೆಯನ್ನ ಸರಿಯಾಗಿ ಇಟ್ಟಿಕೊಳ್ಳದೆ ಹೋದ್ರೆ.ಬಹುಷಃ .ಫಲಿತಾಂಶದ ಸಂದರ್ಭದಲ್ಲೂ ಅವರಿಗೆ ನೌಕರು ಸರಿಯಾದ ಉತ್ತರ ಕೊಡ್ತಾರೆ ಎಂದು ಹೇಳಿದ್ರು. ಇದು ಸೋಷಿಯಲ್ ಮೀಡಿಯಾದಲ್ಲಿ ಪರ ವಿರೋಧದ ಚರ್ಚೆಗೆ ಗ್ರಾಸವಾಗಿತ್ತು.

ಕುಮಾರ್ ಬಂಗಾರಪ್ಪ ಹೇಳಿದ್ದೇನು?

ಈ ಬಗ್ಗೆ ಪ್ರತಿಕ್ರೀಯೆ ನೀಡಿರುವ ಸೊರಬ ಶಾಸಕರಾದ ಕುಮಾರ್ ಬಂಗಾರಪ್ಪ ತಮ್ಮದೇ ಧಾಟಿಯಲ್ಲಿ ಪ್ರತಿಕ್ರೀಯಿಸಿದ್ದಾರೆ. ಸೊರಬ ತಾಲೂಕು ಪಂಚಾಯಿತಿ ಕಛೇರಿಯ ಸಭೆಯಲ್ಲಿ ಮಾತನಾಡಿದ ಕುಮಾರ್ ಬಂಗಾರಪ್ಪ, ಷಡಕ್ಷರಿಯವರು ಸಾಗರದಲ್ಲಿ ಮಾಡಿದ ಭಾಷಣ ನೀವು ಕೇಳಿಸಿಕೊಂಡ್ರಾ..ಇಲ್ವಾ,,ಕೇಳಿಸಿಕೊಂಡಿದ್ರೆ ತಕ್ಷಣ ಅಲ್ಲೇ ಪ್ರತಿಕ್ರೀಯೆ ಕೊಡಬೇಕಿತ್ತು ಎಂದು ಸೊರಬ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಿಗೆ ತಾಕೀತು ಮಾಡಿದ್ರು. ಷಡಕ್ಷರಿಯವರು ಪಕ್ಕದ ತಾಲೂಕಿನಲ್ಲಿ  16 ಜನ ತಹಶೀಲ್ದಾರ್ ಗಳ ವರ್ಗಾವಣೆ ಎಂದು ಹೇಳಿದ್ದಾರೆ.ರಾಜ್ಯಾಧ್ಯಕ್ಷರಾಗಿ ಅವರು ಸರಿಯಾಗಿ ಮಾತನಾಡಬೇಕು. ಆಡಳಿತಾತ್ಮಕ ವಿಚಾರದಲ್ಲಿ ಆಗುವ ವಿಚಾರಗಳನ್ನು ಅವರು ಮುಖ್ಯಮಂತ್ರಿಗಳ ಬಳಿ ಕೇಳಬೇಕು. ಅಡ್ಮಿನಿಷ್ಟ್ರೇಷನ್ ನ್ನು ಕೊನೆಯವರು ಕಂಟ್ರೋಲ್ ಮಾಡೋದು ಸಿಎಂ. ವಿರೋಧ ಪಕ್ಷದವರು ರಸ್ತೆಯಲ್ಲಿ ಮಾತಾಡೋ ರೀತಿಯಲ್ಲಿ ರಾಜ್ಯಾಧ್ಯಕ್ಷರು ಮಾತನಾಡಬಾರದು. ಮಾತನಾಡಕೂಡದು, ಅವರು ಮಾಡಿರುವುದು ಅಕ್ಷಮ್ಯ ಅಪರಾಧ. ಅದನ್ನು ಅವರು ಸರಿ ಮಾಡಿಕೊಂಡು ಹೋಗಬೇಕು. ನಾಲಿಗೆಯನ್ನು ಹಿಡಿತದಲ್ಲಿಟ್ಟುಕೊಂಡು ಮಾತನಾಡಬೇಕು. ಇಲ್ಲಾ ಅಂದ್ರೆ ಅವರಿಗೆ ಎಲ್ಲಿ ಉತ್ತರ ಕೊಡಬೇಕು ಕೊಡುತ್ತೇವೆ. ಕ್ಲಾರಿಫಿಕೇಷನ್ ಇಲ್ಲದೆ ಸಾರ್ವಜನಿಕ ಸಭೆಯಲ್ಲಿ ಮಾತನಾಡಿರುವುದು ಸೂಕ್ತವಲ್ಲ. ತಾಲೂಕಿಗೆ ತಹಶೀಲ್ದಾರ್ ಕರೆದುಕೊಂಡು ಬರುವುದೇ ಕಷ್ಟವಾಗಿದೆ. ಇನ್ನು ತಹಶೀಲ್ದಾರ್ ಗಳ ವರ್ಗಾವಣೆ ಮಾಡುವುದೆಲ್ಲಿ ಬಂತು. ಸೊರಬದಲ್ಲಿ ಕರಪ್ಷನ್ ಬಹಳ ಕಡಿಮೆ ಇದೆ. ಇಲ್ಲಿ ಆದಾಯವಿದೆ ಎಂದು ಬಂದವರಿಗೆ ಇಲ್ಲಿರೋದು ಸಹಜವಾಗಿ ಸಾಧ್ಯವಾಗೋದಿಲ್ಲ. ನಮ್ಮ ತಾಲೂಕಿಗೆ ಬಂದ ಯಾವ ತಹಶೀಲ್ದಾರ್ ಗಳು ದುಡ್ಡಿಗಾಗಿ ಬಂದವರಲ್ಲ. ಷಡಕ್ಷರಿಯವರು ಸೊರಬ ಸರ್ಕಾರಿ ನೌಕರರ ಭವನವನ್ನು ವಿತ್ ಔಟ್ ಅವರ್  ಇಂಟರ್ ಪಿಯರೆನ್ಸ್ ಇಲ್ಲದೆ ಕಟ್ಟುತ್ತಿರುವುದಕ್ಕೆ ಅವರು ಪ್ರಶಂಸೆ ವ್ಯಕ್ತಪಡಿಸಿ ಮಾತನಾಡಬೇಕಿತ್ತು.

ಷಡಕ್ಷರಿಯವರು ಯಾವ ಪಾರ್ಟಿಯಲ್ಲಿದ್ದಾರೆ ಎಂದು ಘೋಷಣೆ ಮಾಡಿಕೊಂಡ್ರೆ ಒಳ್ಳೆಯದು

ನಾನು ಯಾರೊಂದಿಗೂ ಡೀಲ್ ಮಾಡಿಲ್ಲ. ಇಲ್ಲ ಅಂದ್ರೆ ಷಡಕ್ಷರಿಯವರು ಯಾವ ಪಾರ್ಟಿಯಲ್ಲಿದ್ದಾರೆ ಎಂದು ಘೋಷಣೆ ಮಾಡಿಕೊಂಡ್ರೆ ಒಳ್ಳೆಯದು.ಯಾಕೆಂದ್ರೆ ಯಾವುದೇ ಪಾರ್ಟಿಯವರಂತೆ ಮಾತನಾಡುವಾಗ ಅವರು ಬಹಿರಂಗವಾಗಿ ಹೇಳಿದ್ರೆ ಒಳ್ಳೆಯದು. ಖಾಸಗಿಯಾಗಿ ಮಾತನಾಡಿದ್ರೆ. ತೊಂದರೆಯಿರಲಿಲ್ಲ. ಸಾರ್ವಜನಿಕವಾಗಿ ಮಾತನಾಡಿದಾಗ ನಾನು ಕೂಡ ಸಾರ್ವಜನಿಕವಾಗಿಯೇ ಬರಬೇಕಾಗುತ್ತೆ. ಇದನ್ನು ಅವರಿಗೆ ತಿಳಿಸಿಬಿಡಿ ಎಂದು ಸೊರಬ ತಾಲೂಕಿನ ಅಧ್ಯಕ್ಷರಿಗೆ ತಾಕೀತು ಮಾಡಿದ್ರು. ಇಲ್ಲಾ ಅಂದ್ರೆ ಅವರು ತಮ್ಮ ಹೇಳಿಕೆಯನ್ನು ಹಿಂಪಡೆಯುವುದಾಗಿ ಹೇಳಲಿ..ಇಲ್ಲಾ ಅಂದ್ರೆ ಕ್ಷಮೆಯಾಚಿಸುವುದಾಗಿ ಪ್ರೆಸ್ ಗೆ ಹೇಳಲಿ ಎಂದು ಕುಮಾರ್ ಬಂಗಾರಪ್ಪ ಹೇಳಿದ್ದಾರೆ.

ಒಟ್ಟಿನಲ್ಲಿ ಎಸ್ ಷಡಕ್ಷರಿಯವರು ಸಾರ್ವಜನಿಕವಾಗಿ ಸಿಡಿಸಿರುವ ಬಾಂಬ್, ಕುಮಾರ್ ಬಂಗಾರಪ್ಪರ ಪಿತ್ತ ನೆತ್ತಿಗೇರುವಂತೆ ಮಾಡಿದೆ. ಸೊರಬ ನೌಕರರ ಸಂಘದ ಅಧ್ಯಕ್ಷರ ಹೆಗಲಿಗೆ ಬಂದೂಕನ್ನಿಟ್ಟು ಷಡಕ್ಷರಿ ವಿರುದ್ಧ ಗುರಿ ನೆಟ್ಟಿರುವ ಕುಮಾರ್ ಗೆ ಇದು ಪ್ಲಸ್ ಪಾಯಿಂಟ್ ಆಗುತ್ತಾ..ಕಾದು ನೋಡಬೇಕಿದೆ.