ಶಿವಮೊಗ್ಗ ಲಯನ್ಸ್ ಪುರುಷರ ಟೀಂಗೆ ಮಹಿಳಾ ಕೋಚ್​ ನೇಮಕ! ದೇಶದಲ್ಲಿಯೇ ಇದು ಫಸ್ಟ್​

Vanitha VR takes on a thrilling new challenge as the Head Coach of men's team, Shivamogga Lions for the Maharaja Trophy KSCA T20

ಶಿವಮೊಗ್ಗ ಲಯನ್ಸ್ ಪುರುಷರ ಟೀಂಗೆ ಮಹಿಳಾ ಕೋಚ್​ ನೇಮಕ! ದೇಶದಲ್ಲಿಯೇ ಇದು ಫಸ್ಟ್​

KARNATAKA NEWS/ ONLINE / Malenadu today/ Jul 25, 2023 SHIVAMOGGA NEWS  

ಶಿವಮೊಗ್ಗ ಲಯನ್ಸ್​ ಟೀಂಗೆ ಇದೇ ಮೊದಲ ಬಾರಿಗೆ ಮಹಿಳಾ ಕೋಚ್​ ನೇಮಕವಾಗಿದ್ದಾರೆ. ಪುರುಷರ ತಂಡವೊಂದಕ್ಕೆ ಮಹಿಳಾ ಕೋಚ್ ನೇಮಕ ಕ್ರಿಕೆಟ್ ಇತಿಹಾಸದಲ್ಲಿ ಇದೆ ಮೊದಲು ಎನ್ನಲಾಗುತ್ತಿದೆ.   ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಆಯೋಜನೆಯ ಮಹಾರಾಜ ಟ್ರೋಫಿ, ಟಿ20 ಪಂದ್ಯಾವಳಿಯ ಹರಾಜಿನಲ್ಲಿ ಶಿವಮೊಗ್ಗ ಲಯನ್ಸ್ ತಂಡದ ಪರವಾಗಿ ವಿ.ಆರ್ ವನಿತಾ ಕಾಣಿಸಿಕೊಂಡಿದ್ದಾರೆ.  ಶಿವಮೊಗ್ಗ ಫ್ರಾಂಚೈಸಿಯ ಮುಖ್ಯ ಕೋಚ್ ಆಗಿ ಅವರು ನೇಮಕಗೊಂಡಿದ್ದಾರೆ. ಇದೊಂದು ಹೊಸ ಅನುಭವವಾಗಿದ್ದು, ಪುರುಷರ ಕ್ರಿಕೆಟ್‌ ಗೆ ತರಬೇತಿ ನೀಡಬೇಕು ಮತ್ತು ಅಲ್ಲಿನ ಡೈನಾಮಿಕ್ಸ್ ಅನ್ನು ಅರ್ಥಮಾಡಿಕೊಳ್ಳಬೇಕು ಎಂಬುದು ಮನಸ್ಸಲ್ಲಿತ್ತು. ನನ್ನ ಮೇಲೆ ವಿಶ್ವಾಸ ತೋರಿಸಿದ್ದಕ್ಕಾಗಿ ಧನ್ಯವಾದಗಳು ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ಧಾರೆ.  ಇದಕ್ಕೂ ಮೊದಲು ವುಮೆನ್ ಪ್ರೀಮಿಯರ್ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಟೀಂ ನ ಭಾಗವಾಗಿದ್ದ  ವಿ.ಆರ್​ . ವನಿತಾ ಇದೀಗ ಶಿವಮೊಗ್ಗ ಲಯನ್ಸ್ ತಂಡಕ್ಕೆ ಮುಖ್ಯ ಕೋಚ್​ ಆಗಿದ್ದು, ಅವರ ಈ ಎಂಟ್ರಿ, ಮಹಿಳಾ ಕ್ರಿಕೆಟ್ ವಲಯದಲ್ಲಿ ಸಂಚಲನ ಮೂಡಿಸ್ತಿದೆ.

 


ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ವಿಚಾರ!? ಶಿಕ್ಷಣ ಇಲಾಖೆ ಹೊರಡಿಸಿರುವ ಸೂಚನೆ ಇಲ್ಲಿದೆ

ಶಿವಮೊಗ್ಗ ಜಿಲ್ಲೆಯಲ್ಲಿ ನಿನ್ನೆ ವಿಪರೀತ ಮಳೆ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ರಜೆ ನೀಡಲಾಗಿತ್ತು. ಇವತ್ತು ಸಹ ರಜೆ ನೀಡುವ ಬಗ್ಗೆ ಉಪನಿರ್ದೆಶಕರ ಕಛೇರಿ, ಶಾಲಾ ಶಿಕ್ಷಣ ಇಲಾಖೆ, ಶಿವಮೊಗ್ಗ ಜಿಲ್ಲೆಯಿಂದ ಪ್ರಕಟಣೆಯೊಂದನ್ನ ಹೊರಡಿಸಲಾಗಿದೆ. ಪ್ರಕಟಣೆಯಲ್ಲಿ ಶಾಲೆಗಳಿಗೆ ರಜೆ ನೀಡುವ ವಿಚಾರವನ್ನು ಆಯಾ ಶಾಲೆಯ ಎಸ್​ಡಿಎಂಸಿಯ ತೀರ್ಮಾನಕ್ಕೆ ಬಿಡಲಾಗಿದೆ. ಈ ಆದೇಶ ಹೊಸನಗರ , ತೀರ್ಥಹಳ್ಳಿ ಹಾಗೂ ಸಾಗರ ತಾಲ್ಲೂಕಿಗೆ ಮಾತ್ರ ಅನ್ವಯವಾಗಲಿದೆ. 

ಜಿಲ್ಲಾಧಿಕಾರಿಗಳು  ಉಲ್ಲೇಖಿಸಿದಂತೆ ಪ್ರಕಟಣೆಯನ್ನಹೊರಡಿಸಲಾಗಿದ್ದು, ಪ್ರಕಟಣೆಯ ವಿವರ ಹೀಗಿದೆ.  

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ಮತ್ತು ಸಾಗರ ತಾಲ್ಲೂಕು ವ್ಯಾಪ್ತಿಯಲ್ಲಿ ಅತೀ ಹೆಚ್ಚು ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಮಾನ್ಯ ಜಿಲ್ಲಾಧಿಕಾರಿಗಳು, ಶಿವಮೊಗ್ಗ ಜಿಲ್ಲೆ. ರವರ ಸೂಚನೆಯನ್ವಯ ಮೇಲ್ಕಂಡ ಮೂರು ತಾಲ್ಲೂಕುಗಳ ಶಾಲಾ ಎಸ್‌.ಡಿ.ಎಂ.ಸಿ.ಯವರು ಮಳೆಯ ತೀವ್ರತೆಗೆ ಅನುಸಾರವಾಗಿ ವಿದ್ಯಾರ್ಥಿಗಳ ಸುರಕ್ಷತೆ ದೃಷ್ಠಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳೊಂದಿಗೆ ಚರ್ಚಿಸಿ ದಿನಾಂಕ:25/07/2023 ರಂದು ಅಗತ್ಯವಿರುವ ಪ್ರಾಥಮಿಕ / ಪ್ರೌಢ ಶಾಲೆಗಳಿಗೆ ಮಾತ್ರ ಅನ್ವಯವಾಗುವಂತೆ ರಜೆ ಘೋಷಿಸಲು ಕ್ರಮವಹಿಸುವಂತೆ ಹಾಗೂ ಸದರಿ ರಜೆಯನ್ನು ಮುಂದಿನ ರಜಾ ದಿನದಲ್ಲಿ ತರಗತಿ ನಡೆಸುವ ಮೂಲಕ ಶಾಲಾ ದಿನಗಳನ್ನು ಮರು ಹೊಂದಾಣಿಕೆ ಮಾಡಿಕೊಳ್ಳುವಂತೆ ಶಾಲಾ ಮುಖ್ಯ ಶಿಕ್ಷಕರಿಗೆ ಅಗತ್ಯ ಸೂಚನೆ ನೀಡಲು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದೆ.

 

ಭದ್ರಾವತಿ ಮರ್ಡರ್ ಕೇಸ್! ರೌಡಿ ಮುಜ್ಜು ಹತ್ಯೆ ಪ್ರಕರಣದ ರಹಸ್ಯ ಭೇದಿಸಿದ ಶಿವಮೊಗ್ಗ ಪೊಲೀಸ್ ! ನಡೆದಿದ್ದೇನು? 



ನಡುರಸ್ತೆಯಲ್ಲಿ ಮಹಿಳೆಯ ಕೊಲೆ! ಸಾಬೀತಾಯ್ತು ಅಪರಾಧ! ಶಿಕಾರಿಪುರ ಗ್ರಾಮಾಂತರ ಠಾಣೆಯ ಕೇಸ್​ನಲ್ಲಿ ಕೋರ್ಟ್ ತೀರ್ಪು!

ಮಾಜಿ ಸಿಎಂ ಬಿಎಸ್​ವೈ ಇನ್ಮುಂದೆ ಡಾ.ಬಿಎಸ್​ ಯಡಿಯೂರಪ್ಪ! ಅಭಿಮಾನಿಗಳಿಗೂ ಅವಕಾಶ ನೀಡಿದ BYR

ಮಗ ಬೈಕ್​ ಓಡಿಸಿದ ತಪ್ಪಿಗೆ 25 ಸಾವಿರ ರೂಪಾಯಿ ದಂಡ ಕಟ್ಟಿದ ತಂದೆ! ಕಾರಣವೇನು ಗೊತ್ತಾ?

ವೈದ್ಯರೊಬ್ಬರ ಸಮಯ ಪ್ರಜ್ಞೆಯಿಂದ ಬಯಲಾಯ್ತು ದುಷ್ಕೃತ್ಯ! ಶಿವಮೊಗ್ಗ ಜಿಲ್ಲೆಯಲ್ಲಿ ದಾಖಲಾಯ್ತು ಮತ್ತೊಂದು ಪೋಕ್ಶೋ ಕೇಸ್!

 ​