ಸಹಕಾರಿ ಕ್ಷೇತ್ರದ ಧುರೀಣ ಮಾಜಿ ಶಾಸಕ ಎಲ್,ಟಿ ತಿಮ್ಮಪ್ಪ ಹೆಗಡೆ ನಿಧನ

ಮಾಜಿ ಶಾಸಕರು ಹಾಗೂ ಸಹಕಾರಿ ಕ್ಷೇತ್ರದ ಅಗ್ರಗಣ್ಯರಾಗಿ ಗುರುತಿಸಿಕೊಂಡಿದ್ದ ಎಲ್,ಟಿ ತಿಮ್ಮಪ್ಪ ಹೆಗಡೆ (94) ವಯೋಸಹಜ ಕಾರಣಗಳಿಂದ ಸಾವನ್ನಪ್ಪಿದ್ದಾರೆ.

ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ತಿಮ್ಮಪ್ಪ ಹೆಗಡೆಯವರು ಸಾಗರ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡುವ ಮೂಲಕ ಜನಮನವನ್ನ ಗೆದ್ದಿದ್ದರು, 1978 ಹಾಗೂ 1983 ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ತಿಮ್ಮಪ್ಪ ಹೆಗಡೆಯವರು ಕೇಂದ್ರ ಸಾಂಬಾರು ಮಂಡಳಿಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. 

ಇನ್ನು ಸಾಗರದಲ್ಲಿ ಆಪ್ಸ್ ಕೋಸ್, ತೋಟಗಾರ್ಸ್ , ಅಡಕೆ ಬೆಳಗಾರರ ಸಂಘಗಳ ಸಂಸ್ಥಾಪಕ ಅಧ್ಯಕ್ಷರಾಗಿದ್ದ  ತಿಮ್ಮಪ್ಪ ಹೆಗಡೆಯವರು ಕ್ಯಾಂಪ್ಕೊ ಸಂಸ್ಥೆಯನ್ನು ಹುಟ್ಟುಹಾಕಿ ಸಂಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದ್ದರು. 

ಶಿಕ್ಷಣ ಕ್ಷೇತ್ರದಲ್ಲೂ  ತಿಮ್ಮಪ್ಪ ಹೆಗಡೆಯವರು ತಮ್ಮ ಛಾಪನ್ನೂ ಮೂಡಿಸಿದ್ದ ಅವರು ಮಲೆನಾಡು ಅಭಿವೃದ್ದಿ ಪ್ರತಿಷ್ಠಾನದ ಎಲ್.ಬಿ ಕಾಲೇಜು, ಪ್ರಗತಿ ಸಂಯುಕ್ತ ಶಾಲೆ ಸೇರಿದಂತ ಹಲವು ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಪ್ರಮುಖ ಪಾತ್ರವಹಿಸಿ ಹಲವು ವರ್ಷಗಳ ಕಾಲ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು,

ಇನ್ನು ಎಲ್ ಟಿ ತಿಮ್ಮಪ್ಪ ಹೆಗಡೆಯವರ ನಿಧನಕ್ಕೆ ಸಾಗರ ಕ್ಷೇತ್ರದ ಶಾಸಕ ಹರತಾಳ ಹಾಲಪ್ಪನವರು ಸಂತಾಪ ಸೂಚಿಸಿದ್ದಾರೆ. ಎಲ್,ಟಿ, ತಿಮ್ಮಪ್ಪ ಹೆಗಡೆಯವರ ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು, ಯುವ ಪೀಳಿಗೆಗೆ ಅದರ್ಶ ಪ್ರಾಯರಾಗಿದ್ದ ಅವರ ನಿಧನ ಸಮಾಜಕ್ಕೆ ತುಂಬಲಾರದ ನಷ್ಟ, ಅವರ ಕುಟುಂಬಕ್ಕೆ ದೇವರು ದುಖಃ ಭರಿಸುವ ಶಕ್ತಿ ನೀಡಲಿ ಹೇಳಿದ್ದಾರೆ. ಕಾಂಗ್ರೇಸ್ ನ ಹಿರಿಯ ಮುತ್ಸದ್ಧಿ ಕಾಗೋಡು ತಿಮ್ಮಪ್ಪ ಹಾಗು ಕುಮಾರ್ ಬಂಗಾರಪ್ಪ, ಮಧು ಬಂಗಾರಪ್ಪ ಬೇಳೂರು ಗೋಪಾಲಕೃಷ್ಣ ಸೇರಿದಂತೆ ಜಿಲ್ಲಾ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ