ಅರಣ್ಯ ಭೂಮಿ ಒತ್ತುವರಿ ! ಶಿವಮೊಗ್ಗ ರಾಜ್ಯದಲ್ಲಿಯೇ ನಂಬರ್! ಏಷ್ಟಾಗಿದೆ ಕಾಡು ಕಬಳಿಕೆ ಗೊತ್ತಾ?

Shivamogga district has the highest number of forest land encroached upon in the state

ಅರಣ್ಯ ಭೂಮಿ ಒತ್ತುವರಿ ! ಶಿವಮೊಗ್ಗ ರಾಜ್ಯದಲ್ಲಿಯೇ ನಂಬರ್! ಏಷ್ಟಾಗಿದೆ ಕಾಡು ಕಬಳಿಕೆ ಗೊತ್ತಾ?
Shivamogga district has the highest number of forest land encroached upon in the state

SHIVAMOGGA  |  Dec 22, 2023  |  ಕಾಡು ಕಡಿಬೇಡಿ ಅಂತಾ ಹೇಳುತ್ತಿದ್ದರೂ, ಕಾಡು ಕಡಿದು ಹೊಲ ಊಳುವ ಪ್ರವೃತ್ತಿ ಏನೂ ಕಡಿಮೆಯಾಗುತ್ತಿಲ್ಲ ಈಗ ವಿಷಯ ಏನಂದ್ರೆ,. ಅರಣ್ಯ ಇಲಾಖೆಯೇ ಹೇಳುವ ಪ್ರಕಾರ,  ಶಿವಮೊಗ್ಗ ಜಿಲ್ಲೆಯಲ್ಲಿ,  ಇಡೀ ರಾಜ್ಯದಲ್ಲೆ ಅತಿಹೆಚ್ಚು ಅರಣ್ಯ ಭೂಮಿ ಒತ್ತುವರಿಯಾಗಿದೆ ಎಂಬ ಮಾಹಿತಿಯೊಂದು ಮಲೆನಾಡು ಟುಡೆಗೆ ಲಭ್ಯವಾಗಿದೆ. 

ಮಾಹಿತಿ ಹಕ್ಕು ಅಧಿನಿಯಮದ ಅಡಿಯಲ್ಲಿ ಪಡೆದ ದಾಖಲೆಯೊಂದರಲ್ಲಿ  ಅರಣ್ಯ ಇಲಾಖೆ ಯಾವ ಜಿಲ್ಲೆ ಯಲ್ಲಿ ಎಷ್ಟೆಷ್ಟು ಅರಣ್ಯ ಭೂಮಿ ಒತ್ತುವರಿಯಾಗಿದೆ ಎಂಬ ವಿವರ ನೀಡಿದೆ. 

READ :ತೀರ್ಥಹಳ್ಳಿ ತಾಲ್ಲೂಕು ನಲ್ಲಿ ಕೆರೆಗೆ ಕಾಲುಜಾರಿ ಬಿದ್ದು ಯುವಕ ದುರ್ಮರಣ!



ಈ ವಿವರವನ್ನು ವಿವರವಾಗಿ ನೋಡುವುದಾದರೆ, ಶಿವಮೊಗ್ಗದಲ್ಲಿ 81502.44 ಎಕೆರೆ ಅರಣ್ಯ ಭೂಮಿ ಒತ್ತುವರಿಯಾಗಿದೆ ಎಂದು ಹೇಳಲಾಗಿದೆ. ಇನ್ನೂ ಚಿಕ್ಕಮಗಳೂರು ಜಿಲ್ಲೆಯಲ್ಲಿ 30641.11 ಎಕೆರೆ ಭೂಮಿ ಒತ್ತುವರಿಯಾಗಿದ್ದರೇ, ಉತ್ತರ ಕನ್ನಡ ಜಿಲ್ಲೆಯಲ್ಲಿ 28344.212 ಎಕೆರೆ ಭೂಮಿ ಒತ್ತುವರಿಯಾಗಿದೆ ಎಂದು ತಿಳಿಸಲಾಗಿದೆ. 

ಒಟ್ಟಾರೆ 204229.762 ಎಕೆರೆಯಷ್ಟು ಅರಣ್ಯ ಭೂಮಿ ರಾಜ್ಯದಲ್ಲಿ ಒತ್ತುವರಿಯಾಗಿದೆ ಅರಣ್ಯ ಇಲಾಖೆಯ ಮಾಹಿತಿ ಹೇಳುತ್ತಿದೆ. ಹಿಂದೊಮ್ಮೆ ಇಂಗ್ಲೀಷ್ ಪತ್ರಿಕೆಯೊಂದರ ವರದಿಯಲ್ಲಿ ಉಲ್ಲೇಖವಾದಂತೆ ಶಿವಮೊಗ್ಗ ವೃತ್ತದಲ್ಲಿ ಮೂರು ಎಕರೆಗಿಂತ ಕಡಿಮೆ ಇರುವ ಅರಣ್ಯ ಭೂಮಿ (50,579.53 ಎಕರೆ) ಒತ್ತುವರಿ ಕುರಿತು 38,012 ಪ್ರಕರಣಗಳು ದಾಖಲಾಗಿದ್ದವು ಎಂದು ಹೇಳಲಾಗಿದೆ. ಅಲ್ಲದೆ  ಮೂರು ಎಕರೆಗಿಂತ ಹೆಚ್ಚಿನ ಒತ್ತುವರಿಗೆ ಸಂಬಂಧಿಸಿದಂತೆ ಶಿವಮೊಗ್ಗ ವೃತ್ತದಲ್ಲಿ 27,918.06 ಎಕರೆ ಒತ್ತುವರಿಯಾಗಿದ್ದರ ಬಗ್ಗೆ ಉಲ್ಲೇಖವಾಗಿತ್ತು,