BREAKING/ ಸಂಘರ್ಷ ಪೀಡಿತ ಸುಡಾನ್​ನಿಂದ 362 ಮಂದಿ ವಾಪಸ್ ! ಶಿವಮೊಗ್ಗದ 50 ಮಂದಿ ಸೇರಿ ರಾಜ್ಯದ 114 ಕನ್ನಡಿಗರು ತವರಿಗೆ ವಾಪಸ್ !

Breaking/ 362 people returned from conflict-torn Sudan 114 Kannadigas, including 50 from Shivamogga, have returned home.

BREAKING/  ಸಂಘರ್ಷ ಪೀಡಿತ ಸುಡಾನ್​ನಿಂದ 362 ಮಂದಿ ವಾಪಸ್ ! ಶಿವಮೊಗ್ಗದ  50 ಮಂದಿ ಸೇರಿ ರಾಜ್ಯದ 114  ಕನ್ನಡಿಗರು  ತವರಿಗೆ ವಾಪಸ್ !

KARNATAKA NEWS/ ONLINE / Malenadu today/ Apr 27, 2023 GOOGLE NEWS


ನ್ಯೂ ದೆಹಲಿಭಾರತೀಯ ವಾಯುಪಡೆ ನಡೆಸಿದ ಆಪರೇಷನ್​ ಕಾವೇರಿ ಯಶಸ್ವಿಯಾಗಿದ್ದು , 362  ಮಂದಿಯನ್ನು ಸುರಕ್ಷಿತವಾಗಿ ಭಾರತಕ್ಕೆ ಕರತರಲಾಗಿದೆ. 

ಸಿ -130 ಜೆ 'ಸೂಪರ್ ಹರ್ಕ್ಯುಲಸ್' ವಿಮಾನವು ಸುಡಾನ್ ನ  ಸೈದ್ನಾ ವಿಮಾನ ನಿಲ್ದಾಣದಿಂದ 121 ಭಾರತೀಯರನ್ನು ರಕ್ಷಿಸಿದೆ.  ಇನ್ನೂ ಸೌದಿ ಅರಬೆಯಿನ್​ ಏರ್​ಲೈನ್ಸ್​ ಮೂಲಕ ಒಟ್ಟು 362 ಮಂದಿ ಬೆಂಗಳೂರು ಅಂತಾರಾಷ್ಟ್ರಿಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾre. 

ಇದನ್ನೂ ಓದಿ / ಒಂದೇ ದಿನ 90 ಲಕ್ಷದ ಎಣ್ಣೆ ಜಪ್ತಿ/ ಶಿಕಾರಿಪುರದಲ್ಲಿ ಭರ್ಜರಿ ಹಣ ಪತ್ತೆ/  ಒಂದೇ ರಾತ್ರಿ 19 ಪಿಟ್ಟಿಕೇಸ್/ ಎ.ಎ. ಸರ್ಕಲ್​ ನಲ್ಲಿ ರೂಟ್ ಮಾರ್ಚ್​! ಪೊಲೀಸ್ ನ್ಯೂಸ್​ 



ಈ ಪೈಕಿ ಕರ್ನಾಟಕದವರು 114 , ತಮಿಳುನಾಡಿನ 34 ಆಂಧ್ರಪ್ರದೇಶದ 33 ಮತ್ತು ಕೇರಳ 32 , ತೆಲಂಗಾಣ 22 ಮಹಾರಾಷ್ಟ್ರದ 30  ಮಂದಿ ವಾಪಸ್ ಆಗಿದ್ದಾರೆ. 



ಇದನ್ನ ಓದಿ/ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಶಿವಮೊಗ್ಗ ಕೋರ್ಟ್​ ನೀಡಿತು ಭಾರೀ ಶಿಕ್ಷೆ 



ಇನ್ನೂ ಇದರಲ್ಲಿ ಶಿವಮೊಗ್ಗದ 50 ಮಂದಿ ಕೂಡ ತವರಿಗೆ ವಾಪಸ್ ಆಗಿದ್ದು ರಾಜ್ಯ ಸರ್ಕಾರ ಕೆಎಸ್​ಆರ್​ಸಿ ಬಸ್​ಗಳ ಮೂಲಕ ಸಂತ್ರಸ್ತರನ್ನು ಅವರವರ ಊರಿಗೆ ರವಾನಿಸಿದೆ. ಕರ್ನಾಟಕದವರ ಪೈಕಿ ಮೈಸೂರಿನ 45 ಬೆಂಗಳೂರಿನ 9, ಕಲಬುರಗಿಯ 4 ಉಡುಪಿಯ ಇಬ್ಬರು, ದಾವಣಗೆರೆಯ 1 ರಾಮನಗರ 2, ಹಾಸನ ಒಬ್ಬರನ್ನು ಅವರ ತವರಿಗೆ ಸುರಕ್ಷಿತವಾಗ ಕಳಹಿಸಿಕೊಡಲಾಗಿದೆ. 



ಸಂಘರ್ಷ ಪೀಡಿತ ಸುಡಾನ್ ನಿಂದ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ನಡೆಯುತ್ತಿರುವ ಆಪರೇಷನ್ ಕಾವೇರಿಯ ಭಾಗವಾಗಿ ಈ ಕಾರ್ಯಾಚರಣೆ ನಡೆದಿದೆ. 



Malenadutoday.com Social media