ಭದ್ರಾವತಿಯಲ್ಲಿ ಡಾ.ವಿಷ್ಣುವರ್ದನ್​ ಪ್ರಶಸ್ತಿ/ ಎಣ್ಣೆ ಏಟು, ದಾರಿ ತಪ್ಪಿದ ಆಟೋ/ ಮನೆ ಮೇಲೆ ಬಿದ್ದ ಪಿಕಪ್​/ ಚಾರ್ತುಮಾಸ್ಯದಲ್ಲಿ ಮಾಜಿ ಕ್ರಿಕೆಟಿಗ! TODAY@NEWS

Malenadu Today

KARNATAKA NEWS/ ONLINE / Malenadu today/ Jul 15, 2023 SHIVAMOGGA NEWS

ಭದ್ರಾವತಿಯಲ್ಲಿ ಡಾ. ವಿಷ್ಣುವರ್ದನ್​ ಪ್ರಶಸ್ತಿ

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನಲ್ಲಿ  ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾಯೋಜಕತ್ವದೊಂದಿಗೆ, ಅಪೇಕ್ಷ ನೃತ್ಯ ಕಲಾವೃಂದದಿಂದ ಇದೇ  ಜುಲೈ 16ರಂದು ಡಾ. ವಿಷ್ಣುವರ್ಧನ್ Dr. Vishnuvardhan ಪ್ರಶಸ್ತಿ ಹಾಗೂ ಅಪೇಕ್ಷ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಸಿದ್ದಾರೂಢನಗರದ ಬಸವೇಶ್ವರ ಸಭಾಭವನದಲ್ಲಿಈ ಕಾರ್ಯಕ್ರಮ ನಡೆಯಲಿದೆ 

ಎಣ್ಣೆ ನಶೆಯಲ್ಲಿ ಚಾಲಕ! ಉರುಳಿದ ಆಟೋ

ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಚಂಡಗೋಡು ಬಳಿಯಲ್ಲಿ ಆಟೋ ಚಾಲಕನೊಬ್ಬ ಎಣ್ಣೆ ನಶೆಯಲ್ಲಿ ರಸ್ತೆಯಲ್ಲಿ ಅಡ್ಡಾದಿಡ್ಡಿ ಆಟೋ ಚಲಾಯಿಸಿದ ದೃಶ್ಯ ಹಿಂಬದಿಯಲ್ಲಿ ಬರುತ್ತಿದ್ದ ವಾಹನದಲ್ಲಿದ್ದವರು ಚಿತ್ರೀಕರಿಸಿದ್ಧಾರೆ. ನಿಯಂತ್ರಣವಿಲ್ಲದೆ ಆಟೋವನ್ನು ಚಲಾಯಿಸುತ್ತಿದ್ದ ಚಾಲಕ, ರಸ್ತೆಯ ಗುಂಡಿಗೆ ಆಟೋ ಇಳಿಸಿದ್ದಾನೆ. ಪರಿಣಾಮ ಆಟೋದಿಂದ ಆತ ಕೆಳಕ್ಕೆ ಬಿದ್ದಿದ್ದಾನೆ. ಇನ್ನೊಂದೆಡೆ ಚಾಲನೆಯಲ್ಲಿಯೇ ಇದ್ದ ಆಟೋ ರಸ್ತೆಯ ಬದಿಯಲ್ಲಿದ್ದ ಕಂದಕಕ್ಕೆ ಉರುಳಿದೆ.  

ಮನೆ ಮೇಲೆ ಬಿದ್ದ ಪಿಕಪ್​ ವಾಹನ

ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಪರಿಯಲ್ತಡ್ಕ-ಸರಡ್ಕ ರಸ್ತೆಯಲ್ಲಿ ಪಿಕಪ್ ವಾಹನವೊಂದು ಮನೆಯೊಂದರ ಮೇಲೆ ಬಿದ್ದ ಘಟನೆ ಸಂಭವಿಸಿದೆ. ಘಟನೆಯಲ್ಲಿ ಮನೆಯೊಳಗಿದ್ದ ಮಹಿಳೆಗೆ ಗಾಯವಾಗಿದೆ. ಘಟನೆ ಬೆನ್ನಲ್ಲೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಕ್ರೇನ್ ಬಳಸಿ ವಾಹನವನ್ನು ಮೇಲಕ್ಕೆತ್ತಿ, ಒಳಗಿದ್ದ ಮಹಿಳೆಯನ್ನು ರಕ್ಷಿಸಿದ್ದಾರೆ. 

Malenadu Today

ಚಾತುರ್ಮಾಸ್ಯದಲ್ಲಿ ಪಾಲ್ಗೊಂಡ ಮಾಜಿ ಕ್ರಿಕೆಟಿಗ 

ಹೊಳೆಹೊನ್ನೂರಿನ ಶ್ರೀ ಸತ್ಯಧರ್ಮ ತೀರ್ಥ ಮಠದಲ್ಲಿ 28ನೇ ಚಾತುರ್ಮಾಸ್ಯದ (Chaturmasya) ಅಂಗವಾಗಿ ವಿದ್ವತ್ ಸಭೆ ನಡೆಯಿತು , ಈ ಸಭೆಯಲ್ಲಿ ಉತ್ತರಾದಿ ಮಠದ ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರು ಶ್ರೀ ಸತ್ಯಧರ್ಮರ ಭಾಗವತ ದಶಮ ಸ್ಕಂದ ವ್ಯಾಖ್ಯಾನಾಧಾರಿತ ಸಂದೇಶ ನೀಡಿದರು.ಟೀ ಇಂಡಿಯಾ ಮಾಜಿ ಆಲ್‌ರೌಂಡರ್‌ ವಿಜಯ ಭಾರದ್ವಾಜ್‌ ಸಹ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Malenadu Today

ಗೃಹಜ್ಯೋತಿ ಅರ್ಜಿಗೆ ಇನ್ನಷ್ಟು ಸಮಯ

ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಪ್ರೀ ವಿದ್ಯುತ್ ಯೋಜನೆ ಗೃಹಜ್ಯೋತಿಗೆ ಈ ತಿಂಗಳಿನ ಬಿಲ್​ನಿಂದಲೇ ಸೌಲಭ್ಯ ಪಡೆದುಕೊಳ್ಳಲು ಜುಲೈ 25 ರೊಳಗೆ ಅರ್ಜಿ ಸಲ್ಲಿಸಲು ತಿಳಿಸಲಾಗಿತ್ತು . ಅವರಿಗೆ ಆಗಸ್ಟ್​ 1 ರಿಂದಲೇ ಶೂನ್ಯ ಬಿಲ್ ಲಭ್ಯವಾಗುತ್ತದೆ ಎಂದು ತಿಳಿಸಲಾಗಿದೆ. ಈ ಸಂಬಂಧ ಎರಡು ದಿನಗಳ ಕಾಲಾವಕಾಶವನ್ನು ಹೆಚ್ಚಿಗೆ ನೀಡಲಾಗಿದೆ. ಒಟ್ಟಾರೆ ಅರ್ಜಿ ಸಲ್ಲಿಸಲು ಯಾವುದೇ ಡೆಡ್ ಲೈನ್ ಇರುವುದಿಲ್ಲ,  ಸೇವಾಸಿಂಧು ಪೋರ್ಟಲ್, ಬೆಂಗಳೂರು ಒನ್, ಗ್ರಾಮ್ ಒನ್ ಮತ್ತು ಕರ್ನಾಟಕ ಒನ್ ಕೇಂದ್ರ ಅಥವಾ ಯಾವುದೇ ವಿದ್ಯುತ್ ಕಛೇರಿಗಳಲ್ಲಿಯೂ ಸಹ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

 ಸದ್ಯ ಇಂಧನ ಇಲಾಖೆ ಗೃಹಜ್ಯೋತಿ ಯೋಜನೆ ಸರ್ಜಿ ಸಲ್ಲಿಕೆಗೆ ನಿಗದಿಪಡಿಸಿದ್ದ ಅವಧಿಯನ್ನು ಜುಲೈ 25 ರಿಂದ 27ಕ್ಕೆ ವಿಸ್ತರಿಸಿದೆ. ಒಟ್ಟಾರೆ ಗೃಹಜ್ಯೋತಿಗೆ ಅರ್ಜಿ ಸಲ್ಲಿಸಲು ಯಾವುದೇ ಡೆಡ್ ಲೈನ್ ಇಲ್ಲ ಎಂದಿದ್ದಾರೆ.


ಶಿವಮೊಗ್ಗ ಸಿಟಿಯಲ್ಲಿ ವೀಲಿಂಗ್! ಕಾಲೇಜುಗಳ ಬಳಿಯಲ್ಲಿ ಬೈಕ್​ ಸ್ಟಂಟ್ ಮಾಡ್ತಿದ್ದ ಯುವಕರಿಗೆ ಪೊಲೀಸರು ನೀಡಿದ್ರು ಶಾಕ್

ಸಾಗರ ತಾಲ್ಲೂಕಿನ ಐಗಿನಬೈಲ್​ನಲ್ಲಿ ಅಪಘಾತಕ್ಕೀಡಾಡ ಖಾಸಗಿ ಬಸ್​! ಅನುಮಾನಕ್ಕೂ ಕಾರಣವಾಯ್ತು ಮಾಂಸದ ಮೂಟೆ!

ಅಧಿಕಾರಿಗಳ ಆಟ, ಜನಪ್ರತಿನಿಧಿಗಳಿಗೆ ಜೀವ ಸಂಕಟ! ಹೊಸನಗರದಲ್ಲಿ ಇದೆಂಥಾ ಅವಸ್ಥೆ ಮಾರಾಯ್ರೆ

!ಶಿವಮೊಗ್ಗಕ್ಕೂ ಬಂದ ಕೃತಕ ಸುಂದರಿ! ವಿದ್ಯಾರ್ಥಿಗಳ ಪ್ರಯತ್ನದಲ್ಲಿ ಸೃಷ್ಟಿಯಾದ ಗೀತಾ? ಯಾರಿವಳು ಸಹ್ಯಾದ್ರಿ ನ್ಯೂಸ್ ಆ್ಯಂಕರ್​ ಗೊತ್ತಾ?

 

 

Share This Article