SHIVAMOGGA | Jan 1, 2024 | shimoga covid cases/ ಮಲೆನಾಡು ಟುಡೆಯ ಜೊತೆಗಾರರಿಗೆಲ್ಲರಿಗೂ ಹೊಸ ವರ್ಷ ಶುಭಾಶಯಗಳು. ಈ ವರ್ಷ ಮಲೆನಾಡು ಟುಡೆಯಲ್ಲಿ ಇನ್ನಷ್ಟು ವಿಶೇಷಗಳನ್ನ ಓದುಗರು ಕಾಣ ಬಹುದು ಎಂದು ವಿಶ್ವಾಸವನ್ನು ವ್ಯಕ್ತಪಡಿಸುತ್ತಾ ವರ್ಷದ ಮೊದಲ ಸುದ್ದಿಯನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.
ಶಿವಮೊಗ್ಗ ಕೋವಿಡ್ ಪ್ರಕರಣ/ shimoga covid cases
ನಿನ್ನೆ ಅಂದರೆ ವರ್ಷದ ಕೊನೆ ದಿನವೂ ಶಿವಮೊಗ್ಗದಲ್ಲಿ ಕೋವಿಡ್ -19 ಪಾಸಿಟಿವ್ ಸಂಖ್ಯೆಗಳ ಬಗ್ಗೆ ವರದಿಯಾಗಿದೆ. ಜಿಲ್ಲೆಯಲ್ಲಿ ಕೊರೊನಾ ಹೆಚ್ಚಾಗುತ್ತಿದ್ದು ನಿನ್ನೆ ಒಂದೇ ದಿನ ನಾಲ್ಕು ಮಂದಿಯಲ್ಲಿ ಕೊರೊನಾ ಪಾಸಿಟಿವ್ ವರದಿಯಾಗಿದೆ..
ಮೂರ ಐದು ಸ್ಯಾಂಪಲ್ಗಳ ಪೈಕಿ ನಾಲ್ವರಲ್ಲಿ ಪಾಸಿಟಿವ್ ಕಾಣಿಸಿದೆ. ಇವರೆಲ್ಲರೂ ಶಿಕಾರಿಪುರದವರು ಎಂದು ಹೇಳಲಾಗಿದೆ. ಇನ್ನೂ ಇಲ್ಲಿವರೆಗಿನ 28 ಆಕ್ಟೀವ್ ಕೇಸ್ಗಳ ಪೈಕಿ 27 ಮಂದಿ ಹೋಮ್ ಐಸೋಲೇಷನ್ನಲ್ಲಿದ್ದು ಓರ್ವರನ್ನ ಮಾತ್ರ ಕೋವಿಡ್ -19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.