ಉಗ್ರ ನರಸಿಂಹನ ಬಳಿಕ ಇದೀಗ ಶಿವಮೊಗ್ಗ ಗಾಂಧಿ ಬಜಾರ್​ಗೆ ಬರ್ತಾಳೆ ಚಾಮುಂಡಿ! ಸರ್​ಪ್ರೈಸ್​!?

After Ugra Narasimha, Chamundi came to Shivamogga Gandhi Bazaar! Surprise!? ಕೋಟೆ ಮಾರಿಕಾಂಬಾ ಜಾತ್ರೆ, kote Marikamba jatre

ಉಗ್ರ ನರಸಿಂಹನ ಬಳಿಕ ಇದೀಗ  ಶಿವಮೊಗ್ಗ ಗಾಂಧಿ ಬಜಾರ್​ಗೆ ಬರ್ತಾಳೆ ಚಾಮುಂಡಿ! ಸರ್​ಪ್ರೈಸ್​!?
Ugra Narasimha, Chamundi , Gandhi Bazaar, ಕೋಟೆ ಮಾರಿಕಾಂಬಾ ಜಾತ್ರೆ, kote Marikamba jatre

Shivamogga Mar 9, 2024 ಶಿವಮೊಗ್ಗ ಮಾರಿ ಜಾತ್ರೆಗೆ ಸಿದ್ದವಾಗುತ್ತಿದೆ. ಅದಾಗಲೇ ಖರೀದಿಗಳು ಜೋರಾಗಿದ್ದು, ಮಾರಿಕಾಂಬೆಯ ಸ್ವಾಗತಕ್ಕೆ ಜನರು ಸಹ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಅಂದಹಾಗೆ ಈ ಸಲ ಶಿವಮೊಗ್ಗದ ಕೋಟೆ ಮಾರಿಕಾಂಬೆ ಜಾತ್ರೆ ಹಿಂದಿನಂತಿರುವುದಿಲ್ಲ. ಹಿಂದೆಂದಿಗಿಂತಲೂ ಅದ್ದೂರಿಯಾಗಿರಲಿದೆ. ಇದಕ್ಕೆ ಸಾಕ್ಷಿಯಾಗಿದೆ  ಕೋಟೆ ಮಾರಿಕಾಂಬಾ ಜಾತ್ರೆ ಅಂಗವಾಗಿ ಸುಮಾರು 18ಕ್ಕೂ ಹೆಚ್ಚು ಉಪಸಮಿತಿಗಳನ್ನು ರಚಿಸಲಾಗಿದೆ. ಹಳೇ ಶಿವಮೊಗ್ಗ,  ಹಳೇ ಮಂಡ್ಲಿಯಿಂದ ಹಿಡಿದು, ಪೊಲೀಸ್ ಚೌಕಿವರೆಗೂ ದಸರಾ ಮಾದರಿಯಲ್ಲೇ ಲೈಟಿಂಗ್ ವ್ಯವಸ್ಥೆ ಮಾಡಲಾಗುತ್ತಿದೆ  

ಎಲ್ಲದಕ್ಕಿಂತ ವಿಶೇಷ ಅಂದರೆ ಗಣಪತಿ ಹಬ್ಬದ ಸಂದರ್ಭದಲ್ಲಿ ಗಾಂಧಿಬಜಾರ್​ನ ಮುಖ್ಯಧ್ವಾರದಲ್ಲಿ ಪ್ರತಿಕೃತಿಗಳನ್ನ ನಿಲ್ಲಿಸಲಾಗುತ್ತದೆ. ಇದು ಪ್ರತಿವರ್ಷದ ಆಕರ್ಷಣೆಯಾಗಿರುತ್ತಿತ್ತು. ಇದೇ ಮೊದಲ ಸಲ ಕೋಟೆ ಮಾರಿಕಾಂಬೆ ಜಾತ್ರೆ ನಿಮಿತ್ತ ಗಾಂಧಿ ಬಜಾರ್​ನ ಮುಖ್ಯಧ್ವಾರದಲ್ಲಿ ಚಾಮುಂಡಿಯ ವಿಗ್ರಹವನ್ನ ನಿರ್ಮಿಸಲಾಗುತ್ತಿದೆ.  

ಗಾಂಧಿಬಜಾರಿನ ಮುಖ್ಯದ್ವಾರದಲ್ಲಿ ಸುಮಾರು 43 ಅಡಿ ಎತ್ತರದಲ್ಲಿ ಚಾಮುಂಡಿ ವಿಗ್ರಹವನ್ನು ನಿರ್ಮಿಸಲಾಗುತ್ತದೆ. ಕಳೇದ ವರ್ಷ ಉಗ್ರ ನರಸಿಂಹ ಮೂರ್ತಿಯುನ್ನ ಚಲನೆಯ ರೂಪದಲ್ಲಿ ನಿರ್ಮಿಸಲಾಗಿತ್ತು. ಅದೇ ರೀತಿಯಲ್ಲಿ ಚಾಮುಂಡಿಯ ಪ್ರತಿಕೃತಿಯನ್ನು ಇಲ್ಲಿ ನಿರ್ಮಿಸಲಾಗುತ್ತಿದೆ. ಈಗಾಗಲೇ ಪತ್ರಿಕೃತಿ ಅಂತಿಮ ಹಂತಕ್ಕೆ ಬಂದಿದ್ದು ಸೋಶಿಯಲ್ ಮೀಡಿಯಾದಲ್ಲಿ ಅದರ ವಿಡಿಯೋಗಳು ವೈರಲ್ ಆಗುತ್ತಿದೆ. ಪ್ರತ್ವಿಗೌಡ ಎಂಬವರು ಈ ದೃಶ್ಯವನ್ನು ತಮ್ಮ ಟ್ವಿಟ್ಟರ್​ ಅಕೌಂಟ್​ನಲ್ಲಿ ಹಾಕಿಕೊಂಡಿದ್ದಾರೆ. ಮೂಲಗಳ ಪ್ರಕಾರ ನಾಳೆಯಿಂದ ಗಾಂಧಿ ಬಜಾರ್​ನ ಮುಖ್ಯಧ್ವಾರದಲ್ಲಿ ಚಾಮುಂಡಿಯನ್ನು ಕೂರಿಸುವ ಕೆಲಸಗಳು ಆರಂಭವಾಗುವ ಸಾಧ್ಯತೆ ಇದೆ. 

ಫೋಟೋ ವಿಡಿಯೋ ಕೃಫೆ : @pruthvi_gowda_p