ಗೌರಿ-ಗಣೇಶನ ಆಗಮನ, ರೇಟು ಜಾಸ್ತಿ, ಚೌಕಾಸಿ ಇಲ್ರಿ! ಗಾಂಧಿಬಜಾರು, ವ್ಯಾಪಾರ ಬಲೇ ಜೋರು!

Preparations for Gauri Ganesha festival in Shimoga have been completed and business is going on in full swingಶಿವಮೊಗ್ಗದಲ್ಲಿ ಗೌರಿ ಗಣೇಶನ ಹಬ್ಬಕ್ಕೆ ಸಿದ್ದತೆಗಳು ಪೂರ್ಣಗೊಂಡಿದ್ದು ವ್ಯಾಪಾರ ವಹಿವಾಟು ಜೋರಾಗಿ ನಡೆಯುತ್ತಿದೆ

ಗೌರಿ-ಗಣೇಶನ ಆಗಮನ,  ರೇಟು ಜಾಸ್ತಿ, ಚೌಕಾಸಿ ಇಲ್ರಿ! ಗಾಂಧಿಬಜಾರು, ವ್ಯಾಪಾರ ಬಲೇ ಜೋರು!

KARNATAKA NEWS/ ONLINE / Malenadu today/ Sep 18, 2023 SHIVAMOGGA NEWS

ಪ್ರಿಯ ಓದುಗರಿಗೆ ಗೌರಿ-ಗಣೇಶ ಹಬ್ಬದ ಶುಭಾಶಯಗಳು…

ಮೆರವಣಿಗೆಗಳ ಗೊಂದಲ ನಿವಾರಣೆಯೊಂದಿಗೆ ಶಿವಮೊಗ್ಗದಲ್ಲಿ ಇಂದು ಗೌರಿ-ಗಣೇಶನ ಆಗಮನವಾಗುತ್ತಿದೆ. ಶಿವಮೊಗ್ಗದಲ್ಲಿ ಹಬ್ಬದ ಆಚರಣೆಯ ಸಂಭ್ರಮ ನಿನ್ನೆಯಿಂದಲೇ ಜೋರಾಗಿ ನಗರವೂ ಸೇರಿದಂತೆ ಜಿಲ್ಲೆಯೆಲ್ಲೆಡೆ ಗಣೇಶೋತ್ಸವದ ಭರಾಟೆ ವಿಶೇಷವಾಗಿತ್ತು. ಹಬ್ಬದ ಖರೀದಿ, ಗಣಪತಿ ಖರೀದಿಗಳು ಭರದಿಂದ ಸಾಗಿದವರು. 300 ರೂಪಾಯಿಂದ ಹಿಡಿದು 15 ಸಾವಿರಕ್ಕೂ ಹೆಚ್ಚಿನ ಮೌಲ್ಯದ ಗಣಪತಿಗಳು ಬಿಕರಿಯಾದವು. ಮಣ್ಣಿನ ಗಣಪತಿಗಳನ್ನೆ ಜನರು ಆಯ್ಕೆ ಮಾಡಿಕೊಂಡಿದ್ದರು. ಪ್ಲಾಸ್ಟರ್ ಆಫ್​ ಪ್ಯಾರಿಸ್ ನ ಗಣಪತಿಗೆ ಆಡಳಿತ ವ್ಯವಸ್ಥೆ ನಿರ್ಬಂದ ಹೇರಿದೆ. 

ಶಿವಮೊಗ್ಗದ ಸೈನ್ಸ್​ ಮೈದಾನ, ಪಾರಂಪರಿಕವಾಗಿ ಗಣಪತಿಗಳನ್ನು ಮಾರುತ್ತಿರುವ ಮನೆಗಳಿಗೆ ದೌಡಾಯಿಸಿದ ಜನರು ಗಣಪತಿಯನ್ನು ಖರೀದಿಸಿ ಮನೆಗೆ ತರುತ್ತಿದ್ದಾರೆ. ಗೌರಿ-ಗಣೇಶರ ಆಗಮನಕ್ಕೆ ಈ ಸಲ ಮಳೆಯ ಕೊರತೆ ಚೂರು ಸಮಸ್ಯೆ ಮಾಡುತ್ತಿದೆ. ಮುಂಗಾರಿಲ್ಲದ ಬೇಸರದ ಜೊತೆಗೆ ಗಣೇಶನ ಉತ್ಸವಕ್ಕೆ ಮಲೆನಾಡು ಸಜ್ಜಾಗಿದ್ದು, ನಾಳೆಯಿರುವ ಸರ್ಕಾರಿ ರಜೆ ಇವತ್ತು ನೀಡಲಾಗಿದೆ ಎಂಬ ಮಾಹಿತಿಯಿದೆ. 

ಮಲೆನಾಡು ಗಿಜಿಗುಡುವ ಕಳೆ ಕಾಣುವುದು  ಬಿ.ಎಚ್.ರಸ್ತೆ, ಗಾಂಧಿಬಜಾರ್, ನೆಹರು ರಸ್ತೆ, ದುರ್ಗಿಗುಡಿ, ಸವಳಂಗ ರಸ್ತೆ , ಅಮೀರ್ ಅಹಮದ್ ಸರ್ಕಲ್​ಗಳಲ್ಲಿ. ಕಳೆದ ಎರಡು ದಿನಗಳಲ್ಲಿ ಈ ಪ್ರದೇಶಗಳಲ್ಲಿ ಜೋರು ಓಡಾಟ, ವಾಹನ ಸಂಚಾರ ಕಂಡುಬಂದಿದೆ. ವ್ಯಾಪಾರ ವಹಿವಾಟು ಜೋರಾಗಿತ್ತು.  

ಯಥಾಪ್ರಕಾರ, ಹೂವು ಹಣ್ಣು, ತರಕಾರಿ, ಪೂಜೆ ಸಾಮಗ್ರಿ, ಅಲಂಕಾರದ ಐಟಮ್​ಗಳ ದರ ಮುಗಿಲುಮುಟ್ಟಿದೆ. ಜನರು ಅಂಗಡಿಗಳಲ್ಲಿ ನಿಂತು ಇಷ್ಟೊಂದು ಖರೀದಿಯಾಗಿದೆ, ಸ್ವಲ್ಪ ಕಮ್ಮಿ ಮಾಡ್ಕೊಳ್ಳಿ ಎಂದು ಚೌಕಾಸಿ ಕೇಳುತ್ತಿದ್ದರೇ, ಅಂಗಡಿ ಮಾಲೀಕರು ತಲೆಯಲ್ಲಾಡಿಸುತ್ತಾ, ಏನೂ ಸಿಗಲ್ಲ ಕಮ್ಮಿನೇ ಹಾಕಿದ್ದೇನೆ ಎನ್ನುವ ದೃಶ್ಯಗಳು ಗಾಂಧಿ ಬಜಾರ್​ನಲ್ಲಿ ಕಾಣಸಿಗುತ್ತಿವೆ.

ಶಿವಮೊಗ್ಗ ಪೊಲೀಸ್ ಇಲಾಖೆ, ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಗಣೇಶೋತ್ಸವ ವಿಶೇಷ ಸಿದ್ದತೆಗಳನ್ನು ಮಾಡಿಕೊಂಡಿದ್ದು ವಿಸರ್ಜನೆಗೆ ಸಂಚಾರಿ ಟ್ಯಾಂಕ್​ಗಳನ್ನು ರೋಡಿಗಿಳಿಸಿದೆ. ಇನ್ನೊಂದೆಡೆ ಶಾಂತಿಯುತ ಆಚರಣೆಗೆ ಪೊಲೀಸ್ ಇಲಾಖೆ ನಗರದೆಲ್ಲೆಡೆ ಹದ್ದಿನ ಕಣ್ಣಿದೆ. ಜಿಲ್ಲಾಡಳಿತ, ಮೇಲುಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದು, ಈಗಾಗಲೇ ಪ್ರಮುಖ ಗಣಪತಿಗಳ ವಿಸರ್ಜನೆಯ ದಿನಾಂಕವೂ ತೀರ್ಮಾನಿಸಲಾಗಿದ್ದು ಹಬ್ಬವನ್ನು ಸಡಗರದಿಂದ ಸಂಭ್ರಮದಿಂದ ಆಚರಿಸಲು ಶಿವಮೊಗ್ಗ ಸಿದ್ಧವವಾಗಿದೆ 


ಇನ್ನಷ್ಟು ಸುದ್ದಿಗಳು