ಅತ್ತಿಗೆ ಜೊತೆ ಅಸಹ್ಯ ವರ್ತನೆ/ ತಮ್ಮನನ್ನೆ ಕೊಂದ ಅಣ್ಣ/ ವಿಚಿತ್ರ ಕೊಲೆ ಕೇಸ್​

ದಿನಾಂಕಃ-18-12-2022 ರಂದು ಬೆಳಗ್ಗೆ ಅದೇ ಗ್ರಾಮದ ಹಳ್ಳವೊಂದರ ಪಕ್ಕದ ಪೊದೆಯಲ್ಲಿ ಸಲೀಂ ನ ಮೃತ ದೇಹವು ಪತ್ತೆಯಾಗಿತ್ತು.

ಅತ್ತಿಗೆ ಜೊತೆ ಅಸಹ್ಯ ವರ್ತನೆ/ ತಮ್ಮನನ್ನೆ ಕೊಂದ ಅಣ್ಣ/ ವಿಚಿತ್ರ ಕೊಲೆ ಕೇಸ್​

ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕು ಆನವಟ್ಟಿ ಪೊಲೀಸ್ ಸ್ಟೇಷನ್ (Anavatti Police Station)​ ವ್ಯಾಪ್ತಿಯಲ್ಲಿ ಬರುವ ತುಡಿನೀರು ಎಂಬಲ್ಲಿ ಕಳೆದ 18 ನೇ ತಾರೀಖಿನಂದು ಮೃತದೇಹವೊಂದು ಪತ್ತೆಯಾಗಿತ್ತು. ಈ ಘಟನೆಯ ಹಿಂದಿನ ರಹಸ್ಯವನ್ನು ಪೊಲೀಸರು ಇದೀಗ ಭೇದಿಸಿದ್ದಾರೆ. 

ಸಾರ್ವಜನಿಕರ ಗಮನಕ್ಕೆ ಸಾರ್ವಜನಿಕರ ಅನುಕೂಲಕ್ಕಾಗಿ/ ಈ ಎರಡು ದಿನ ಮೈಸೂರು-ತಾಳಗಪ್ಪ ಟ್ರೈನ್​ನಲ್ಲಿ ಈ ವ್ಯವಸ್ಥೆಯಿದೆ/ ವಿವರ ಇಲ್ಲಿದೆ

ತುಡಿನೀರಿನಲ್ಲಿ ಪತ್ತೆಯಾಗಿತ್ತು ಮೃತದೇಹ

ತುಡಿನೀರು ಗ್ರಾಮದ ವಾಸಿಯಾದ ಸಲೀಂ ಎಂಬ 25 ವರ್ಷದ ಯುವಕ ದಿನಾಂಕಃ- 15-12-2022  ರಂದು ರಾತ್ರಿ ಜಮೀನಿಗೆ ಮಲಗಲು ಹೋಗಿದ್ದ. ಆದರೆ ಮರುದಿನ ವಾಪಾಸ್ ಮನೆಗೆ ಹಿಂದಿರುಗಿ ಬಂದಿರಲಿಲ್ಲ.  ಆನಂತರ ಆತನಿಗಾಗಿ ಎಲ್ಲೆಡೆ ಹುಡುಕಲಾಗಿತ್ತು. ಬಳಿಕ  ದಿನಾಂಕಃ-18-12-2022 ರಂದು ಬೆಳಗ್ಗೆ ಅದೇ ಗ್ರಾಮದ ಹಳ್ಳವೊಂದರ ಪಕ್ಕದ ಪೊದೆಯಲ್ಲಿ ಸಲೀಂ ನ ಮೃತ ದೇಹವು ಪತ್ತೆಯಾಗಿತ್ತು.

ಮಲೆನಾಡು ಟುಡೆ ಮಾಹಿತಿ : ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ಗುಡ್​ ನ್ಯೂಸ್ / ದಾವಣಗೆರೆ, ಆನವೇರಿ, ಮಲೆಬೆನ್ನೂರು, ಹರಿಹರ ಕೃಷಿಕರಿಗೆ ಅನುಕೂಲ

ಕೊಲೆ...

ಮೇಲ್ನೋಟಕ್ಕೆ ಅದೊಂದು ಮರ್ಡರ್ ಎಂಬುದು ಗೊತ್ತಾಗಿತ್ತು. ತಲೆ ಮತ್ತು ಎಡಗಾಲಿನ ಹತ್ತಿರ ಹಲ್ಲೆ ಮಾಡಿದ ಗುರುತುಗಳಿದ್ದವು. ಈ ಸಂಬಂಧ  ಮೃತನ ಸಹೋದರ ನೀಡಿದ ದೂರಿನ ಮೇರೆಗೆ ಎಫ್​ಐಆರ್​  0186/2022 ಕಲಂ: 302, 201 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. 

ಇದನ್ನು ಓದಿ : ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ/ ಎನಾಯ್ತು? ಹೇಗಾಯ್ತು? ವಿವರ ಓದಿ

ಸ್ವಂತ ಅಣ್ಣನೇ ಆರೋಪಿ

ಸದ್ಯ ಪ್ರಕರಣವನ್ನು ಆನವಟ್ಟಿ ಪೊಲೀಸರು ಭೇಧಿಸಿದ್ದು,  ಕಳೆದ 23-12-2022 ರಂದು ಪ್ರಕರಣದ 1ನೇ ಆರೋಪಿ ರಫೀಕ್ ನನ್ನ ಬಂಧಿಸಿದ್ದಾರೆ.  35 ವರ್ಷದ ರಫೀಕ್​ ತುಡಿನೀರು ಗ್ರಾಮದ ನಿವಾಸಿಯಾಗಿದ್ದು, ಮೃತ ಸಲೀಂನ ಸಹೋದರನನೇ ಆಗಿದ್ಧಾನೆ. ಇನ್ನ ಪ್ರಕರಣ ಸಂಬಂಧ  24-12-2022  ರಂದು ಪ್ರಕರಣದ 2ನೇ ಆರೋಪಿ ಸಂತೋಷ್, 24 ವರ್ಷ, ತುಡಿನೀರು ಗ್ರಾಮ, ಸೊರಬ ತಾಲ್ಲೂಕು ರವರನ್ನು ದಸ್ತಗಿರಿ ಮಾಡಲಾಗಿದೆ. 

ಇದನ್ನು ಓದಿ : ಎರಡು ಲಾರಿಗಳ ನಡುವೆ ಮುಖಾಮುಖಿ ಡಿಕ್ಕಿ/ ಎನಾಯ್ತು? ಹೇಗಾಯ್ತು? ವಿವರ ಓದಿ

ನಡೆದಿದ್ದು ಏನು ? 

ಆರೋಪಿ ರಫೀಕ್​ ಮೃತ ಸಲೀಂನ ಅಣ್ಣ, ಇವರಿಬ್ಬರ ನಡುವೆಯು ಜಮೀನಿನ ವಿಚಾರದಲ್ಲಿ ಆಗಾಗ್ಗೆ ಜಗಳವಾಗುತ್ತಿತ್ತಂತೆ. ಅಲ್ಲದೆ ಸಲೀಂ ರಫೀಕ್​ನ ಹೆಂಡತಿಯ ಜೊತೆ ಅಸಭ್ಯವಾಗಿ ನಡೆದುಕೊಳ್ತಿದ್ದನಂತೆ. ಇದರಿಂದ ರಫೀಕ್​ ಸಲೀಂನನ್ನು ಮುಗಿಸುವ ಯೋಚನೆ ಮಾಡಿದ್ದ, ಈ ಕಾರಣಕ್ಕೆ ಸಂತೋಷನ ಸಹಾಯ ಪಡೆದು, ಕಳೆದ 16 ನೇ ತಾರೀಖು ಜಮೀನಿನಲ್ಲಿ ಮಲಗಿದ್ದ ಸಲೀಂನ ಮೇಲೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾರೆ. ಬಳಿಕ ಆತನ ಶವವನ್ನು ಸಮೀಪದಲ್ಲಿ ಹರಿಯುವ ಬದನಿಕಟ್ಟೆ ಹಳ್ಳಕ್ಕೆ ಎಸೆದಿದ್ದಾರೆ. 

 ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್​ಗೆ ಕ್ಲಿಕ್ ಮಾಡಿ  : Whatsapp link

ಆನವಟ್ಟಿ ಠಾಣೆಯಲ್ಲಿ ವರದಿಯಾದ ಸಲೀಂ ಎಂಬಾತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ DySP ಶಿಕಾರಿಪುರ, CPI ಸೊರಬ ವೃತ್ತ, PSI ಆನವಟ್ಟಿ & ಸಿಬ್ಬಂದಿಗಳ ತಂಡವು ಇಬ್ಬರು ಆರೋಪಿತರನ್ನು ದಸ್ತಗಿರಿ ಮಾಡಿರುತ್ತಾರೆ. ಸದರಿ ತನಿಖಾ ತಂಡದ ಉತ್ತಮ ಕಾರ್ಯವನ್ನು ಪ್ರಶಂಸಿಸಿ ಅಭಿನಂದಿಸಿದೆ @DgpKarnataka@alokkumar6994 @mithunkumargk pic.twitter.com/xdwklToB7y — SP Shivamogga (@Shivamogga_SP) December 24, 2022