Shivamogga airport ಸೇರಿದಂತೆ ರಾಜ್ಯದ ವಿಮಾನ ನಿಲ್ದಾಣಗಳ ಬಗ್ಗೆ ರಾಜ್ಯ ಸರ್ಕಾರದ ಮಹತ್ವದ ಕ್ರಮ!

A significant step by the state government on airports in the state, including the Shivamogga airport!

Shivamogga airport  ಸೇರಿದಂತೆ ರಾಜ್ಯದ ವಿಮಾನ ನಿಲ್ದಾಣಗಳ ಬಗ್ಗೆ ರಾಜ್ಯ ಸರ್ಕಾರದ ಮಹತ್ವದ ಕ್ರಮ!

KARNATAKA NEWS/ ONLINE / Malenadu today/ Jun 14, 2023 SHIVAMOGGA NEWS

ಬೆಂಗಳೂರು/ ರಾಜ್ಯದಲ್ಲಿನ ವಿಮಾನನಿಲ್ದಾಣಗಳ ನಿರ್ವಹಣೆ ಮೂಲಕ ಆದಾಯ ಗಳಿಸುವ  ನಿಟ್ಟಿನಲ್ಲಿ ನೂತನ ಕಾಂಗ್ರೆಸ್​ ಸರ್ಕಾರ ಮುಂದಾಗಿದ್ದು, ಈ ಸಂಬಂಧ ಶಿವಮೊಗ್ಗ ವಿಮಾನ ನಿಲ್ದಾಣ(Shivamogga Airport) ನಿಂದಲೇ ಮೊದಲ ಹೆಜ್ಜೆ ಇಡಲು ತೀರ್ಮಾನಿಸಿದೆ. 

ರಾಜ್ಯ ಸರ್ಕಾರದ ಅನುದಾನದ ಮೂಲಕ ವಿವಿಧ ಜಿಲ್ಲೆಗಳಲ್ಲಿ ವಿಮಾನ ನಿಲ್ದಾಣಗಳು ನಿರ್ಮಾಣವಾಗುತ್ತವೆ. ಹೀಗೆ ನಿರ್ಮಾಣವಾಗುವ ವಿಮಾನ ನಿಲ್ದಾಣಗಳನ್ನು ನಂತರ ರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ವಹಿಸಲಾಗುತ್ತದೆ. ಇದರಿಂದ ರಾಜ್ಯ ಸರ್ಕಾರಗಳಿಗೆ ನಷ್ಟವಾಗ್ತಿದೆ. ಹೀಗಾಗಿ,  ವಿಮಾನನಿಲ್ದಾಣಗಳ ನಿರ್ಮಾಣದ ಜತೆಗೆ ಅವುಗಳ ನಿರ್ವಹಣೆಯ ಹೊಣೆಯನ್ನೂ ತಾನೇ ತೆಗೆದುಕೊಳ್ಳಲು ಚಿಂತಿಸಿದೆ. 

ಈ ಸಂಬಂಧ ಪ್ರತಿಕ್ರಿಯೆ ನೀಡಿರುವ  ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ರಾಜ್ಯದಲ್ಲಿ ನಿರ್ಮಿಸಿರುವ ವಿಮಾನ ನಿಲ್ದಾಣಗಳ ವೈಮಾನಿಕ ಸೇವೆ ಮತ್ತು ನಿರ್ವಹಣೆಯನ್ನು ರಾಜ್ಯ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಮೂಲಕ ಮಾಡಲು ಚಿಂತಿಸಿದ್ದು, ತತ್ಸಂಬಂಧ  ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗುವುದು. ಎಂದಿದ್ದಾರೆ. 

ಮಹಾರಾಷ್ಟ್ರದಲ್ಲಿನ ಶಿರಡಿ ವಿಮಾನ ನಿಲ್ದಾಣದ ನಿರ್ವಹಣೆಯನ್ನು ಅಲ್ಲಿನ ಸರ್ಕಾರ ಮಾಡುತ್ತಿದೆ. ಅದೇ ರೀತಿಯಲ್ಲಿ  ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಚರ್ಚಿಸಲಾಗುವುದು ಎಂದಿದ್ದಾರೆ. ಅಲ್ಲದೆ  ಶಿವಮೊಗ್ಗ ವಿಮಾನ ನಿಲ್ದಾಣ ಕಾರ್ಯಾಚರಣೆಗೆ ಸಿದ್ಧವಾಗಿದ್ದು, ಅದರ ನಿರ್ವಹಣೆಯನ್ನು ರಾಜ್ಯ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಮೂಲಕ ಮಾಡಲು ಕೇಂದ್ರ ನಾಗರಿಕ ವಿಮಾನಯಾನ ನಿರ್ದೇಶನಾಲಯ ಒಪ್ಪಿಗೆ ನೀಡಿದೆ ಎಂದ ಎಂಬಿ ಪಾಟೀಲ್​,  ರಾಯಚೂರು, ವಿಜಯಪುರ ಮತ್ತು ಹಾಸನ: ವಿಮಾನ ನಿಲ್ದಾಣಗಳನ್ನೂ ರಾಜ್ಯ ಕೈಗಾರಿಕಾ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಮೂಲಕ ನಿರ್ವ ಹಣೆ ಮಾಡುವುದಕ್ಕೆ ಅನುಮತಿ ಕೋರಲಾಗುವುದು ಎಂದರು. 


ಸಿಎಂ ಸಿದ್ದರಾಮಯ್ಯರನ್ನ ಭೇಟಿಯಾದ ಶಿವಣ್ಣ ದಂಪತಿ! ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗ್ತಾರಾ?

 ಬೆಂಗಳೂರು :   ಕರುನಾಡ ಚಕ್ರವರ್ತಿ  ಶಿವರಾಜ್ ಕುಮಾರ್  ತಮ್ಮ ಪತ್ನಿ ಗೀತಾ ಅವರೊಂದಿಗೆ  ನಿನ್ನೆ  ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು.

ಸದ್ಯ ಇವರ ಈ ಮಾತುಕತೆ ಕುತೂಹಲ ಮೂಡಿಸಿದ್ದು ಮುಂದಿನ ಸಂಸತ್ ಚುನಾವಣೆಯಲ್ಲಿ ಶಿವಮೊಗ್ಗ ಅಭ್ಯರ್ಥಿಯ ಚರ್ಚೆ ಮಾತುಕತೆಯಲ್ಲಿ ನಡೆಯಿತೇ ಎಂಬ ಪ್ರಶ್ನೆಗಳು ಮೂಡುತ್ತಿವೆ. 

ಅಮಿರ್​ ಅಹಮದ್ ಸರ್ಕಲ್​ನಲ್ಲಿ ಹಲ್ಲೆ/ ಬಸ್​ಗೆ ಲಾರಿ ಡಿಕ್ಕಿ/ ನಾಯಿಗೆ ಗುದ್ದಿದ್ದಕ್ಕೆ ಮಾಲೀಕನ ಕಿರಿಕ್!/ ಎದುರುಮನೆಯವನ ಕಾಟ! ಶಿವಮೊಗ್ಗ TODAY CRIME @ NEWS

ಸಿದ್ದರಾಮಯ್ಯ ಅವರು ಮತ್ತೆ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಶಿವಣ್ಣ ದಂಪತಿ ಅವರನ್ನ ಭೇಟಿಯಾಗಿದ್ಧಾರೆ. ಈ ಭೇಟಿಯ ವೇಳೆಯಲ್ಲಿ ಸಿಎಂರಿಗೆ ಶಿವಣ್ಣ ದಂಪತಿ ಅಭಿನಂದನೆ ಸಲ್ಲಿಸಿದ್ರು. ಇನ್ನೂ ಇದೇ ಸಂದರ್ಭದಲ್ಲಿ  ಸೂರಬ ಶಾಸಕ ಮಧು ಬಂಗಾರಪ್ಪರವರು ಹಾಜರಿದ್ದರು. ಶಿವಣ್ಣರವರು ಮಧು ಬಂಗಾರಪ್ಪರವರಿಗೆ ಸಚಿವ ಸ್ಥಾನ ನೀಡಿದ್ದಕ್ಕೆ ಸಿದ್ದರಾಮಯ್ಯರಿಗೆ ಧನ್ಯವಾದ ತಿಳಿಸಿದರು. 

ಲೋಕಸಭೆಗೆ ಶಿವಣ್ಣನಾ? ಗೀತಾ ಶಿವರಾಜ್​ ಕುಮಾರ್​?

ಮೇಲ್ನೋಟಕ್ಕೆ ಇದೊಂದು ಸೌಹಾರ್ಧ ಭೇಟಿಯಾದರೂ ಸಹ ಮುಂದಿನ ಸಂಸತ್ ಚುನಾವಣೆಗೆ ಸಂಬಂದಿಸಿದಂತೆ ಮಾತುಕತೆ ನಡೆದಿದೆ ಎನ್ನಲಾಗುತ್ತಿದೆ.  ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಪುತ್ರಿಯಾದ ಗೀತಾ ಅವರು ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್‌ ಸೇರಿದ್ದರು. ಇದೀಗ ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. 

ಮದುವೆಯಾಗುವ ಹುಡುಗಿಯ ಜೊತೆ ಸಾಯುವ ಮಾತು! ಸ್ಮಶಾನದ ವಿಚಾರ ಹೇಳಿದ ಹುಡುಗ! ಮಾತುಕತೆ ಮುರಿದಿದ್ದಕ್ಕೆ ನಡೀತು ಹಲ್​ಚಲ್​!

2014ರಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನುಭವಿಸಿದ್ದ ಅವರು ಮತ್ತೊಮ್ಮೆ ಅದೇ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿಚುನಾವಣೆ ಎದುರಿಸುತ್ತಾರಾ? ಅದಕ್ಕೆ ಕಾಂಗ್ರೆಸ್ ಅವಕಾಶ ಮಾಡಿಕೊಡುತ್ತದಾ ಎಂಬುದು ಸದ್ಯ ಕುತೂಹಲ ಮೂಡಿಸಿದೆ. ಇನ್ನೂಂದೆಡೆ ಕಾಂಗ್ರೆಸ್​ ವಲಯದಲ್ಲಿ ಶಿವಣ್ಣರನ್ನೆ ರಾಜಕಾರಣಕ್ಕೆ ಕರೆತರುವ ಮಾತುಗಳು ಸಹ ಕೇಳಿಬರುತ್ತಿದ್ದು, ಅವರನ್ನ ಶಿವಮೊಗ್ಗದಿಂದ ಲೋಕಸಭೆಗೆ ಕಳುಹಿಸುವ ಬಗ್ಗೆಯು ಸುದ್ದಿಯಾಗುತ್ತಿದೆ.