ಸಿಎಂ ಸಿದ್ದರಾಮಯ್ಯರನ್ನ ಭೇಟಿಯಾದ ಶಿವಣ್ಣ ದಂಪತಿ! ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗ್ತಾರಾ?

KARNATAKA NEWS/ ONLINE / Malenadu today/ Jun 14, 2023 SHIVAMOGGA NEWS

 ಬೆಂಗಳೂರು :   ಕರುನಾಡ ಚಕ್ರವರ್ತಿ  ಶಿವರಾಜ್ ಕುಮಾರ್  ತಮ್ಮ ಪತ್ನಿ ಗೀತಾ ಅವರೊಂದಿಗೆ  ನಿನ್ನೆ  ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು.

ಸದ್ಯ ಇವರ ಈ ಮಾತುಕತೆ ಕುತೂಹಲ ಮೂಡಿಸಿದ್ದು ಮುಂದಿನ ಸಂಸತ್ ಚುನಾವಣೆಯಲ್ಲಿ ಶಿವಮೊಗ್ಗ ಅಭ್ಯರ್ಥಿಯ ಚರ್ಚೆ ಮಾತುಕತೆಯಲ್ಲಿ ನಡೆಯಿತೇ ಎಂಬ ಪ್ರಶ್ನೆಗಳು ಮೂಡುತ್ತಿವೆ. 

Shivamogga Malenadu Today

ಅಮಿರ್​ ಅಹಮದ್ ಸರ್ಕಲ್​ನಲ್ಲಿ ಹಲ್ಲೆ/ ಬಸ್​ಗೆ ಲಾರಿ ಡಿಕ್ಕಿ/ ನಾಯಿಗೆ ಗುದ್ದಿದ್ದಕ್ಕೆ ಮಾಲೀಕನ ಕಿರಿಕ್!/ ಎದುರುಮನೆಯವನ ಕಾಟ! ಶಿವಮೊಗ್ಗ TODAY CRIME @ NEWS

ಸಿದ್ದರಾಮಯ್ಯ ಅವರು ಮತ್ತೆ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಶಿವಣ್ಣ ದಂಪತಿ ಅವರನ್ನ ಭೇಟಿಯಾಗಿದ್ಧಾರೆ. ಈ ಭೇಟಿಯ ವೇಳೆಯಲ್ಲಿ ಸಿಎಂರಿಗೆ ಶಿವಣ್ಣ ದಂಪತಿ ಅಭಿನಂದನೆ ಸಲ್ಲಿಸಿದ್ರು. ಇನ್ನೂ ಇದೇ ಸಂದರ್ಭದಲ್ಲಿ  ಸೂರಬ ಶಾಸಕ ಮಧು ಬಂಗಾರಪ್ಪರವರು ಹಾಜರಿದ್ದರು. ಶಿವಣ್ಣರವರು ಮಧು ಬಂಗಾರಪ್ಪರವರಿಗೆ ಸಚಿವ ಸ್ಥಾನ ನೀಡಿದ್ದಕ್ಕೆ ಸಿದ್ದರಾಮಯ್ಯರಿಗೆ ಧನ್ಯವಾದ ತಿಳಿಸಿದರು. 

ಲೋಕಸಭೆಗೆ ಶಿವಣ್ಣನಾ? ಗೀತಾ ಶಿವರಾಜ್​ ಕುಮಾರ್​?

Shivamogga Malenadu Today

ಮೇಲ್ನೋಟಕ್ಕೆ ಇದೊಂದು ಸೌಹಾರ್ಧ ಭೇಟಿಯಾದರೂ ಸಹ ಮುಂದಿನ ಸಂಸತ್ ಚುನಾವಣೆಗೆ ಸಂಬಂದಿಸಿದಂತೆ ಮಾತುಕತೆ ನಡೆದಿದೆ ಎನ್ನಲಾಗುತ್ತಿದೆ.  ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ಪುತ್ರಿಯಾದ ಗೀತಾ ಅವರು ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಜೆಡಿಎಸ್ ತೊರೆದು ಕಾಂಗ್ರೆಸ್‌ ಸೇರಿದ್ದರು. ಇದೀಗ ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. 

ಮದುವೆಯಾಗುವ ಹುಡುಗಿಯ ಜೊತೆ ಸಾಯುವ ಮಾತು! ಸ್ಮಶಾನದ ವಿಚಾರ ಹೇಳಿದ ಹುಡುಗ! ಮಾತುಕತೆ ಮುರಿದಿದ್ದಕ್ಕೆ ನಡೀತು ಹಲ್​ಚಲ್​!

2014ರಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನುಭವಿಸಿದ್ದ ಅವರು ಮತ್ತೊಮ್ಮೆ ಅದೇ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿಚುನಾವಣೆ ಎದುರಿಸುತ್ತಾರಾ? ಅದಕ್ಕೆ ಕಾಂಗ್ರೆಸ್ ಅವಕಾಶ ಮಾಡಿಕೊಡುತ್ತದಾ ಎಂಬುದು ಸದ್ಯ ಕುತೂಹಲ ಮೂಡಿಸಿದೆ. ಇನ್ನೂಂದೆಡೆ ಕಾಂಗ್ರೆಸ್​ ವಲಯದಲ್ಲಿ ಶಿವಣ್ಣರನ್ನೆ ರಾಜಕಾರಣಕ್ಕೆ ಕರೆತರುವ ಮಾತುಗಳು ಸಹ ಕೇಳಿಬರುತ್ತಿದ್ದು, ಅವರನ್ನ ಶಿವಮೊಗ್ಗದಿಂದ ಲೋಕಸಭೆಗೆ ಕಳುಹಿಸುವ ಬಗ್ಗೆಯು ಸುದ್ದಿಯಾಗುತ್ತಿದೆ. 


 

Leave a Comment