ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟಕ್ಕೆ ಮುಹೂರ್ತ ಫಿಕ್ಸ್! ಯಾವಾಗಿನಿಂದ ಶುರು ಪ್ಲೈಟ್​! ವಿವರ ಇಲ್ಲಿದೆ ಓದಿ

Shimoga airport flight to be operated soon

ಶಿವಮೊಗ್ಗ ವಿಮಾನ ನಿಲ್ದಾಣದಿಂದ ವಿಮಾನ ಹಾರಾಟಕ್ಕೆ ಮುಹೂರ್ತ ಫಿಕ್ಸ್! ಯಾವಾಗಿನಿಂದ ಶುರು ಪ್ಲೈಟ್​! ವಿವರ ಇಲ್ಲಿದೆ ಓದಿ

KARNATAKA NEWS/ ONLINE / Malenadu today/ Jun 11, 2023 SHIVAMOGGA NEWS

ಶಿವಮೊಗ್ಗ: ವಿಮಾನ ನಿಲ್ದಾಣದಿಂದ ವಿಮಾನ ಹಾರಾಟಕ್ಕೆ ಕೊನೆಗೂ ಡೇಟ್ ಫಿಕ್ಸ್ ಆಗಿದೆ. ಇದೇ  ಆಗಸ್ಟ್ 11ರಂದು ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣದಿಂದ ಇಂಡಿಗೋ ಸಂಸ್ಥೆಯ ಮೊದಲ ವಿಮಾನ ಬೆಂಗಳೂರಿಗೆ ಹಾರಾಟ ನಡೆಸಲಿದೆ. ಅಂದಿನಿಂದ ಶಿವಮೊಗ್ಗ–ಬೆಂಗಳೂರು ನಡುವೆ ಅಧಿಕೃತವಾಗಿ ವಿಮಾನ ಹಾರಾಟ ಶುರುವಾಗಲಿದೆ ಎಂದು ರಾಜ್ಯಮಟ್ಟದ ಪ್ರತ್ರಿಕೆಯೊಂದು ವರದಿ ಮಾಡಿದೆ. ಈ ಸಂಬಂಧ ಇಂಡಿಗೋ ಸಂಸ್ಥೆಯ ಅಧಿಕಾರಿಗಳು ಮಾಹಿತಿ ನೀಡಿದ್ಧಾರೆ ಎನ್ನಲಾಗಿದೆ

ಪ್ರತಿದಿನ ಬೆಳಿಗ್ಗೆ 9ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾರಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡಲಿರುವ ವಿಮಾನ, ಶಿವಮೊಗ್ಗಕ್ಕೆ ಬೆಳಗ್ಗೆ 10.30 ಕ್ಕೆ ಬರಲಿದೆಯಂತೆ.  ಬಳಿಕ ಮಧ್ಯಾಹ್ನ 12 ಕ್ಕೆ ವಾಪಸ್ ಹೊರಟು, 1.30 ಕ್ಕೆ ಬೆಂಗಳೂರಿಗೆ ತಲುಪಲಿದೆಯಂತೆ. ಈ ಬಗ್ಗೆ ಜೂನ್​ ಅಂತ್ಯದಲ್ಲಿ ಅಧಿಕೃತ ಪ್ರಕಟಣೆ ಹೊರಬೀಳಲಿದೆ ಎಂದು ಹೇಳಲಾಗುತ್ತಿದೆ. 


ಶಿವಮೊಗ್ಗದಲ್ಲಿ ತೀವ್ರಗೊಂಡ Area Domination ಗಸ್ತು! ಒಂದೆ ದಿನ 11 ಕೇಸ್ ದಾಖಲು!

ಸದ್ಯ ಶಿವಮೊಗ್ಗ ನಗರದಲ್ಲಿ ಪೊಲೀಸ್ ಇಲಾಖೆ, ಏರಿಯಾ ಡಾಮಿನೇಷನ್​ಗಾಗಿ ಡ್ರೋಣ್ ಕ್ಯಾಮರಾ ಬಳಸಿಕೊಳ್ಳುತ್ತಿದೆ. ಸಂಜೆ ಹೊತ್ತಿನಲ್ಲಿ ಎಲ್ಲೆಂದರಲ್ಲಿ ಪಬ್ಲಿಕ್ ನ್ಯೂಸೆನ್ಸ್ ಕ್ರಿಯೇಟ್ ಮಾಡುವ ಅಥವಾ ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್ ಸೇದುವೆ, ನಿರ್ಜನ ಪ್ರದೇಶಗಳಲ್ಲಿ ಕಾನೂನು ಬಾಹಿರ ಚಟುವಟಿಕೆ ಮಾಡುವವರನ್ನ ಡ್ರೋಣ್ ಕ್ಯಾಮರಾದ ಮೂಲಕ ಸರ್ವೆಲೆನ್ಸ್​ ಮಾಡಿ, ಅದನ್ನ ಆಧರಿಸಿ ಪೊಲೀಸರು ಆರೋಪಿಗಳನ್ನ ಹಿಡಿಯುತ್ತಿದ್ದಾರೆ. 

ಇದಕ್ಕೆ ಪೂರಕ ಎಂಬಂತೆ ನಿನ್ನೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್​ ಸ್ಟೇಷನ್​ ಪೊಲೀಸರು ಕಾರ್ಯಾಚರಣೆ ನಡೆಸಿ 11 ಪಿಟ್ಟಿ ಕೇಸ್ ದಾಖಲಿಸಿದ್ದಾರೆ. 

ಇನ್​ಸ್ಪೆಕ್ಟರ್​ ಅಭಯ್ ಪ್ರಕಾಶ್ ಸೋಮನಾಳ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಶಿವಮೊಗ್ಗದ ರಾಗಿಗುಡ್ಡ, ಕುವೆಂಪು ನಗರ, ಚನ್ನಾಮುಂಬಾಪುರ ಮತ್ತು ಜೆ.ಎನ್.ಎನ್ ಕಾಲೇಜಿನ ಹೊರವಲಯ ಮತ್ತು ಖಾಲಿ ಸ್ಥಳಗಳಲ್ಲಿ Area Domination ವಿಶೇಷ ಗಸ್ತು ಮಾಡಿ Public Nuisance ಮಾಡುವ ಮತ್ತು ಅನುಮಾನಸ್ಪಾದ ವ್ಯಕ್ತಿಗಳ ವಿರುದ್ದ 11 ಲಘು ಪ್ರಕರಣಗಳನ್ನು ಮತ್ತು 1 ಐಎಂವಿ ಪ್ರಕರಣವನ್ನ ದಾಖಲಿಸಲಾಗಿದೆ. 


ಬಿಜೆಪಿ ತಾಲೂಕು ಮಂಡಲ ಕಾರ್ಯದರ್ಶಿ ಕವಿತಾ ಸುರೇಶ್ ನಿಧನ

ಭದ್ರಾವತಿ ತಾಲೂಕು ಬಿಜೆಪಿ ಮಂಡಲ ಕಾರ್ಯದರ್ಶಿ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಕವಿತಾ ಸುರೇಶ್(೪೦)  ನಿನ್ನೆ ಬೆಳಿಗ್ಗೆ ನಿಧನ ಹೊಂದಿದ್ಧಾರೆ. 

ಅವರು,  ಪತಿ ಛಾಯಾಗ್ರಾಹಕ ಸುರೇಶ್ ಹಾಗು ಒಂದು ಗಂಡು, ಒಂದು ಹೆಣ್ಣು ಮಗಳನ್ನ ಅಗಲಿದ್ದಾರೆ.  ಏಕಾಏಕಿ ಅನಾರೋಗ್ಯಕ್ಕೆ ಒಳಗಾಗಿದ್ದ ಇವರನ್ನು ಶಿವಮೊಗ್ಗ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ನಗರದ ಬಿ.ಎಚ್ ರಸ್ತೆ ಪದ್ಮನಿಲಯ ಹೋಟೆಲ್ ಬಳಿ ವಾಸವಾಗಿದ್ದರು. ಬಿಜೆಪಿ ಪಕ್ಷದ ಸಕ್ರಿಯ ಕಾರ್ಯಕರ್ತೆಯಾಗಿ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದರು. ಸ್ನೇಹ ಮಿಲನ ಮಹಿಳಾ ಸಂಘಟನೆ ಅಧ್ಯಕ್ಷರಾಗಿದ್ದರು. ಅಲ್ಲದೆ ವೀರಶೈವ ಲಿಂಗಾಯತ ಸಮಾಜ ಸೇರಿದಂತೆ ವಿವಿಧ ಸಂಘಟನೆಗಳಲ್ಲೂ ಸಕ್ರಿಯವಾಗಿ ಗುರುತಿಸಿಕೊಂಡಿದ್ದರು.


ಬೆಂಗಳೂರಿನಲ್ಲಿಯೇ ಠಿಕಾಣಿ ಹೂಡಿರುವ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್​!ಕುತೂಹಲ ಮೂಡಿಸಿದ ನಡೆ

ಭದ್ರಾವತಿ/ ಸಚಿವಸ್ಥಾನಕ್ಕಾಗಿ ರಾಜ್ಯರಾಜಧಾನಿ ಬೆಂಗಳೂರಲ್ಲಿಯೇ ಇದ್ದು ಶತ ಪ್ರಯತ್ನ ನಡೆಸಿದ್ದ ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್​  ಸಚಿವಸ್ಥಾನ ಸಿಗದಿದ್ದರೂ ಸಹ ಬೆಂಗಳೂರಿನಲ್ಲಿಯೇ ಕಳೆ 26 ದಿನಗಳಿಂದ ಠಿಕಾಣಿ ಹೂಡಿದ್ದಾರೆ. ಇದಕ್ಕೆ ಕಾರಣವೇ ಕುತೂಹಲವಾಗಿದೆ. ಭದ್ರಾವತಿಯ ಜನರು ಸಂಘಟನೆಗಳು ಶಾಸಕರ ದಾರಿ ಕಾಯುತ್ತಿದ್ದಾರೆ. ಆದರೆ ಸಂಗಮೇಶ್ವರ್​ ಬೆಂಗಳೂರಿನಲ್ಲಿಯೇ ತಮ್ಮ ಕ್ಷೇತ್ರದ ಜನರನ್ನ ಭೇಟಿಯಾಗುತ್ತಿದ್ದಾರೆ. 

ಮೇ.13ರಂದು ಫಲಿತಾಂಶ ಹೊರಬಿದ್ದ ನಂತರ ಬೆಂಗಳೂರಿಗೆ ತೆರಳಿದ್ದ ಸಂಗಮೇಶ್ವರ್​ ಮತ್ತೆ, ಪುನಃ ಕ್ಷೇತ್ರಕ್ಕೆ ಹಿಂದಿರುಗಿಲ್ಲ. ಸರ್ಕಾರ ರಚನೆ ಆರಂಭದಲ್ಲಿಯೇ ಸಚಿವ ಸ್ಥಾನಕ್ಕಾಗಿ ಸಂಗಮೇಶ್ವರ್ ತೀವ್ರ ಪೈಪೋಟಿ ನಡೆಸಿದ್ದರು. ಆನಂತರ  ಸಂಪುಟ ವಿಸ್ತರಣೆ ಸಂದರ್ಭದಲ್ಲೂ ಸಹ ತೀವ್ರ ಪೈಪೋಟಿಗೆ ಮುಂದಾಗಿದ್ದರು. ಆದರೆ ಸಚಿವ ಸ್ಥಾನ ಅವರಿಗೆ ಸಿಗಲಿಲ್ಲ.  ಇದೀಗ ಯಾವುದಾದರೂ ಪ್ರತಿಷ್ಠಿತ ನಿಗಮ ಮಂಡಳಿಗೆ ಅಧ್ಯಕ್ಷರನ್ನಾಗಿ ನೇಮಿಸುವಂತೆ  ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನ ಸಂಗಮೇಶ್​ ಒತ್ತಾಯಿಸುತ್ತಿದ್ದಾರಂತೆ. ಈ ಬಗ್ಗೆ ಖಾತರಿ ಮಾಡಿಕೊಂಡೇ ಕ್ಷೇತ್ರಕ್ಕೆ ವಾಪಸ್ ಆಗಲಿದ್ದಾರೆ ಎನ್ನುತ್ತಿದೆ ಸ್ಥಳೀಯ ಮಾಧ್ಯಮಗಳು..