ಲವ್ ಮ್ಯಾಟರ್​ಗೆ ಯುವಕನನ್ನ ಕೊಂದು ಕಾರಿನಲ್ಲಿಯೇ ಸುಟ್ಟು ಹಾಕಲಾಯ್ತಾ? ತೋಗರ್ಸಿಯಲ್ಲಿ ನಡೆದಿದ್ದೇನು?

shivamogga Mar 16, 2024   ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಶಿರಾಳಕೊಪ್ಪದ ತೋಗರ್ಸಿಯಲ್ಲಿ ಶಿವಮೊಗ್ಗ ನಗರ ಗಾಡಿಕೊಪ್ಪದ ಯುವಕನೊಬ್ಬನ ಕಗ್ಗೊಲೆಯಾಗಿದೆ. ಈತನನ್ನ ಕೊಂದು ಇನ್ನೋವಾ ವಾಹನದಲ್ಲಿ ಆತನ ದೇಹವನ್ನ ಸುಟ್ಟು ಹಾಕಲಾಗಿದೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. 

https://malenadutoday.com/

 

ಮಲೆನಾಡು ಟುಡೆಗೆ ಲಭ್ಯವಾದ ಮಾಹಿತಿ ಪ್ರಕಾರ ಕೊಲೆಯಾದ ಯುವಕ ಗಾಡಿಕೊಪ್ಪದ ನಿವಾಸಿ ವೀರೇಶ್​, ವಯಸ್ಸು 27. ಈತ ನಿನ್ನೆ ಶುಕ್ರವಾರ ರಾತ್ರಿ ತೋಗರ್ಸಿ ಸಮೀಪದ ಊರೊಂದಕ್ಕೆ ತೆರಳಿರುವುದಾಗಿ ಗೊತ್ತಾಗಿದೆ. ಇವತ್ತು ಬೆಳಗ್ಗೆಯಾದರೂ ಈತ ಮನೆಗೆ ವಾಪಸ್ ಬರದ ಹಿನ್ನೆಲೆಯಲ್ಲಿ ಮನೆಯವರು ಗಾಬರಿಗೊಂಡಿದ್ದಾರೆ.

https://malenadutoday.com/

ಇದೇ ಸಂದರ್ಭದಲ್ಲಿ ತೋಗರ್ಸಿಯಿಂದ ಮಂಚಿ ಕಡೆಗೆ ಹೋಗುವ ಮಾರ್ಗದ ಸಮೀಪ ಇರುವ ಅರಣ್ಯ ಪ್ರದೇಶದಲ್ಲಿ ಸುಟ್ಟ ಸ್ಥಿತಿಯಲ್ಲಿದ್ದ ಕಾರೊಂದು ಅಲ್ಲಿ ಬೆಳಗ್ಗೆ ಓಡಾಡುವವರಿಗೆ ಕಾಣಿಸಿದೆ. ಸ್ಥಳೀಯರು ಅನುಮಾನದಿಂದ ಹತ್ತಿರ ಹೋಗಿ ಗಮನಿಸಿದಾಗ ವಾಹದ ಡಿಕ್ಕಿ ಭಾಗದಲ್ಲಿ ಶವವೊಂದು ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ತಕ್ಷಣವೇ ಅನುಮಾನಗೊಂಡು ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. 

https://malenadutoday.com/

 

ಇನ್ನೂ ವಾಹನದ ನಂಬರ್ ಹಾಗೂ ಕಾರಿನ ಗುರುತನ್ನ ಆಧರಿಸಿದ ಪೊಲೀಸರಿಗೆ ಕೊಲೆಯಾಗಿರುವುದು ಶಿವಮೊಗ್ಗದ ವೀರೇಶ್ ಎಂದು ಗೊತ್ತಾಗಿದೆ. ಪ್ರಕರಣ ದಾಖಲಿಸಿಕೊಂಡ ಶಿರಾಳಕೊಪ್ಪ ಪೊಲೀಸ್ ಸ್ಟೇಷನ್​ನ ಪೊಲೀಸರು ಸ್ಥಳ ಮಹಜರ್ ನಡೆಸಿ ತನಿಖೆ ಆರಂಭಿಸಿದ್ದಾರೆ. ಸ್ಥಳಕ್ಕೆ ಡಿವೈಎಸ್​ಪಿ ಕೇಶವ್ ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ. 

https://malenadutoday.com/

 

ಪ್ರಾಥಮಿಕ ಹಂತದಲ್ಲಿ ವೀರೇಶ್ ಯುವತಿಯೊಬ್ಬಳನ್ನ ಪ್ರೀತಿಸುತ್ತಿದ್ದು ಇದೇ ವಿಚಾರದಲ್ಲಿ ಆತನ ಹತ್ಯೆಯಾಗಿರಬಹುದು ಎಂದು ಶಂಕಿಸಲಾಗಿದೆ. ಪ್ರಕರಣದ ಸಂಬಂಧ  ಪೊಲೀಸರು ತನಿಖೆ ಆರಂಭಿಸಿದ್ದು, ಜಿಲ್ಲೆಯಲ್ಲಿ ಕೇಸ್ ಕುತೂಹಲ ಹಾಗೂ ಆತಂಕ ಮೂಡಿಸಿದೆ. 

 https://malenadutoday.com/

ಕೊಲೆಯಾದ ಸ್ಥಳ

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು