BREAKING NEWS | ತೀರ್ಥಹಳ್ಳಿ ಪೊಲೀಸ್ ಸ್ಟೇಷನ್ನಲ್ಲಿ 25 ಕ್ಕೂ ಹೆಚ್ಚು ಮಂದಿ ವಿರುದ್ದ 307 (ಕೊಲೆಯತ್ನ) ಕೇಸ್! ಕುರುವಳ್ಳಿಯಲ್ಲಿ ನಡೆದಿದ್ದೇನು?
BREAKING NEWS | 307 attempt to murder case registered against more than 25 people at Thirthahalli police station What happened on the road to Puthige Mutt?
Shivamogga Mar 8, 2024 ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ತೀರ್ಥಹಳ್ಳಿ ಪೊಲೀಸ್ ಸ್ಟೇಷನ್ ನಲ್ಲಿ ಆರನೇ ತಾರೀಕು ರಾತ್ರಿ ಏಳುವರೆ ಸುಮಾರಿಗೆ ನಡೆದ ನೈತಿಕ ಪೊಲೀಸ್ ಗಿರಿಯಂತಹ ಘಟನೆಯೊಂದರ ಸಂಬಂಧ ಸುಮಾರು 25 ಮಂದಿ ವಿರುದ್ಧ IPC 1860 (U/s-427,506,341,504, 143, 144, 145, 147, 149,307,323,324) ಅಡಿಯಲ್ಲಿ ಕೇಸ್ ದಾಖಲಾಗಿದೆ.
ತೀರ್ಥಹಳ್ಳಿ ಪೊಲೀಸ್ ಸ್ಟೇಷನ್
ಮಲೆನಾಡು ಟುಡೆಗೆ ಲಭ್ಯವಾದ ಮಾಹಿತಿ ಪ್ರಕಾರ ಪ್ರಕರಣದ ವಿವರ ನೋಡುವುದಾದರೆ, ತೀರ್ಥಹಳ್ಳಿ ಕುರುವಳ್ಳಿ ಯ ಪುತ್ತಿಗೆ ಮಠದ ರಸ್ತೆಯಲ್ಲಿ ಆರನೇ ತಾರೀಖು ರಾತ್ರಿ ಏಳುವರೆ ಸುಮಾರಿಗೆ ಅಶೋಕ ಲೈಲಾಂಡ್ ಗಾಡಿಯೊಂದನ್ನ ಅಡ್ಡಗಟ್ಟಿ ಅದರಲ್ಲಿದ್ದ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ.ದನಗಳನ್ನು ಅಕ್ರಮವಾಗಿ ಸಾಗಿಸ್ತಿದ್ದರು ಎಂಬ ಆರೋಪದ ಅಡಿಯಲ್ಲಿ ಗಾಡಿಯನ್ನು ಅಡ್ಡಗಟ್ಟಿ ಅದರಲ್ಲಿದ್ದವರ ಮೇಲೆ ಹಲ್ಲೆ ನಡೆಸಲಾಗಿದೆ. ಗಾಡಿಯಲ್ಲಿದ್ದ ಇಬ್ಬರ ಮುಸುಡಿಗೆ ಗುದ್ದಿ, ದೊಣ್ಣೆಗಳಿಂದ ಹೊಡೆದು, ಮರಕ್ಕೆ ಕಟ್ಟಿ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಘಟನೆಯಲ್ಲಿ ಓರ್ವರು ಸೀರಿಯಸ್ ಆಗಿದ್ದು ಅವರನ್ನ ಶಿವಮೊಗ್ಗದ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಇನ್ನೊಬ್ಬರಿಗೂ ಗಂಭೀರ ಗಾಯಗಳಾಗಿವೆ.
ದೂರುದಾರರು ಸಲ್ಲಿಸಿರುವ ದೂರಿನ ಪ್ರಕಾರ ಸ್ಥಳೀಯ ನಿವಾಸಿಯೊಬ್ಬರ ಬಳಿ ಆಕಳುಗಳನ್ನ ಸಾಕಲು ಹಾಗೂ ಅದರ ಸಗಣಿಯಿಂದ ವ್ಯಾಪಾರ ಮಾಡುವ ಸಲುವಾಗಿ 8 ದನಗಳನ್ನ ಖರೀದಿಸಿ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ಈ ವೇಳೆ 25 ಕ್ಕೂ ಹೆಚ್ಚು ಮಂದಿ ಪುತ್ತಿಗೆ ಮಠದ ರಸ್ತೆಯಲ್ಲಿ ಲೈಲ್ಯಾಂಡ್ ಗಾಡಿಯನ್ನು ಅಡ್ಡಗಟ್ಟಿ ಹಲ್ಲೆ ಮಾಡಿದ್ದಾರೆ ಎಂದು ದೂರಲಾಗಿದೆ. ಇದರ ದೃಶ್ಯಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಇನ್ನೂ ಇಬ್ಬರು ಗಾಯಾಳುಗಳ ಪೈಕಿ ಓರ್ವರ ಹೇಳಿಕೆ ಆಧರಿಸಿ 25 ಕ್ಕೂ ಹೆಚ್ಚು ಮಂದಿ ವಿರುದ್ದ ತೀರ್ಥಹಳ್ಳಿ ಪೊಲೀಸ್ ಸ್ಟೇಷನ್ನಲ್ಲಿ ಸಾಲುದ್ದ ಸೆಕ್ಷನ್ಗಳ ಅಡಿಯಲ್ಲಿ ಕೇಸ್ ದಾಖಲಾಗಿದೆ. ವ್ಯಕ್ತಿಯನ್ನ ಅಕ್ರಮವಾಗಿ ಬಂಧನದಲ್ಲಿ ಇರಿಸುವುದು, ದುರ್ವರ್ತನೆ ತೋರಿ ವ್ಯಕ್ತು ನುಕ್ಸಾನು ಮಾಡುವುದು, ಅಪರಾಧ ಮಾಡುದ ಉದ್ದೇಶದಿಂದಲೇ ಕೃತ್ಯವೆಸುಗುವುದು, ಉದ್ದೇಶಪೂರ್ವಕ ನಿಂದನೆ ಹಾಗೂ ಶಾಂತಿಭಂಗ, ಕಾನೂನ ಬಾಹಿರವಾಗಿ ಜಮಾವಣೆ ಗೊಳ್ಳುವುದು, ಕಾನೂನು ಬಾಹಿರವೊಂದು ಗೊತ್ತಿದ್ದು, ಮಾರಾಕಾಸ್ತ್ರಗಳೊಂದಿಗೆ ಜಮಾವಣೆ ಗೊಂಡು ಗಲಭೆ ಸೃಷ್ಟಿಸುವುದು, ಕೊಲೆಗೆ ಯತ್ನಿಸುವುದು, ಉದ್ದೇಶಪೂರ್ವಕವಾಗಿ ಮಾರಕಾಸ್ತ್ರದಿಂದ ಹಲ್ಲೆ ನಡೆಸುವುದು ಹೀಗೆ ಮೇಲ್ಕಂಡ ಐಪಿಸಿ ಸೆಕ್ಷನ್ಗಳ ಅಡಿಯಲ್ಲಿ ಕೇಸ್ ದಾಖಲಾಗಿದೆ.