ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಕಲ್ಮನೆಯ ಕಾಡಲ್ಲಿ ಮೃತದೇಹ ಪತ್ತೆ! ನಡೆದಿದ್ದೇನು?

 MALENADUTODAY.COM | SHIVAMOGGA  | #KANNADANEWSWEB

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಕಲ್ಮನೆಯಲ್ಲಿ ಕಾಣಸಿಗುವ ಪ್ಲಾಂಟೇಶನ್ ಕಾಡಿನ್ಲಲಿ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ.  ರಾಮಪ್ಪ ಸುಧಾಕರ್  ಎಂಬ  50 ವರ್ಷದ ವ್ಯಕ್ತಿ ಮೃತರು ಎಂದು ಗುರುತಿಸಲಾಗಿದೆ.  ಲಕ್ಕುಂದ ಮೂಲದ ರಾಮಪ್ಪ ಕಲ್ಮನೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಇವರಿಗೆ ಇಬ್ಬರು ಮಕ್ಕಳು ಇದ್ದಾರೆ.  ಹೊಸನಗರದಲ್ಲಿ ನಡೆಯಲಿರುವ ತಮ್ಮನ ಮನೆ ಗೃಹ ಪ್ರವೇಶಕ್ಕೆ ಹೋಗಲು ಸಿದ್ದತೆ ನಡೆಸಿದ್ದ ಇವರು, ತೀರ್ಥಹಳ್ಳಿ ಪೇಟೆಯಿಂದ ಬಟ್ಟೆ, ಚಪ್ಪಲಿ ಸೇರಿದಂತೆ ಹಲವು ವಸ್ತುಗಳನ್ನು ಸಹ ಖರೀದಿಸಿ ತಂದಿದ್ದರು. ಪೇಟೆಯಿಂದ ಬಂದು ಪ್ಲಾಂಟೇಶನ್​ ಕಾಡಿನಲ್ಲಿ ಮೃತರಾಗಿದ್ದಾರೆ. 

READ | *ಮದುವೆಯಾಗದ ಬ್ರಹ್ಮಚಾರಿಗಳಿಂದ ಮಾದಪ್ಪನ ಬೆಟ್ಟಕ್ಕೆ ಪಾದಯಾತ್ರೆ! ಡಾಲಿ ಧನಂಜಯ್​ರಿಂದಲೇ ಆರಂಭ! ಏನಿದು ವಿಶೇಷ?*

ಇನ್ನೂ ಘಟನೆಯನ್ನ ಆತ್ಮಹತ್ಯೆ ಎನ್ನಲಾಗುತ್ತಿದ್ದು, ಸಾಲಭಾದೆಗೆ ಹೀಗೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಆಗುಂಬೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ಧಾರೆ. 

 ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು  ಕ್ಲಿಕ್ ಮಾಡಿ

Leave a Comment