ಸ್ವಂತ ಅಣ್ಣ ರಫೀಕ್​ ಮೇಲೆ ಕಾರು ಹತ್ತಿಸಿ ಕೊಲೆ! ಮೊಬೈಲ್​ನಲ್ಲಿ ಸೆರೆಯಾದ ಭೀಕರ ದೃಶ್ಯ!

His own brother was killed by a car! A horrific scene captured on a mobile phone!

ಸ್ವಂತ ಅಣ್ಣ ರಫೀಕ್​ ಮೇಲೆ ಕಾರು ಹತ್ತಿಸಿ ಕೊಲೆ! ಮೊಬೈಲ್​ನಲ್ಲಿ ಸೆರೆಯಾದ ಭೀಕರ ದೃಶ್ಯ!
Anandpur,Anavatti Rafeeq

Shivamogga Mar 8, 2024    ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಆನಂದಪುರ ಪೊಲೀಸ್ ಸ್ಟೇಷನ್ ಲಿಮಿಟ್ಸ್​​ ನಲ್ಲಿ ಕಳೆದ ಮಾರ್ಚ್ 1 ರ ಹಿಂದಿನ ದಿನ ವ್ಯಕ್ತಿಯೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಬಳಿಕ ಆತನ ಮೇಲೆ ಕಾರು ಹತ್ತಿಸಿ ಕೊಲೆ ಮಾಡಲಾಗಿತ್ತು. ಈ ದೃಶ್ಯ ಅಲ್ಲಿ ಘಟನೆಗೆ ಸಾಕ್ಷಿಯಾಗಿದ್ದವರ ಮೊಬೈಲ್​ವೊಂದರಲ್ಲಿ ಸೆರೆಯಾಗಿದ್ದು, ಅದರ ದೃಶ್ಯ ಇದೀಗ ಲಭ್ಯವಾಗಿಗದೆ.. 

ಏನಾಗಿತ್ತು ಅಂದು ಅಂದು ಮೃತಪಟ್ಟಿದ್ದು ರಫೀಕ್ ಎಂಬವರು. ವಯಸ್ಸು 38, ಮೂಲತ ಆನವಟ್ಟಿಯವರು. ಅವರನ್ನ ಕಾರಿನಲ್ಲಿ ಕರೆತಂದು ಆನಂದಪುರದ ಸಮೀಪ ನೆದರವಳ್ಳಿ ಬಳಿ ಕೆಳಕ್ಕೆ ಬೀಳಿಸಿ ಆನಂತರ ಕಾರು ಹತ್ತಿಸಲಾಗಿತ್ತು. ಈ ಸಂಬಂಧ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದರು. ಹತ್ಯೆಯಲ್ಲಿ ಭಾಗಿಯಾದವನು ರಫೀಕ್​ನ ತಮ್ಮನೇ ಆಗಿದ್ದ, ರಫೀಕ್ ಹಿಂದೆ ತನ್ನ ಎರಡನೇ ತಮ್ಮನನ್ನು ಆಸ್ತಿ ವಿಚಾರಕ್ಕೆ ಕೊಲೆ ಮಾಡಿದ್ದ, ಅದೇ ಆಸ್ತಿ ವಿಚಾರಕ್ಕೆ ರಫೀಕ್​ನನ್ನ ಮೂರನೇಯ ತಮ್ಮ ಕೊಲೆ ಮಾಡಿದ್ದ . ಈ ಬಗ್ಗೆ ಮಲೆನಾಡು ಟುಡೆ ಆನಂದಪುರದಲ್ಲಿ ತಲೆ ಮೇಲೆ ಕಾರು ಹತ್ತಿಸಿ ಕೊಲೆ! ಆನವಟ್ಟಿ ರಫೀಕ್ ಸಾವಿಗೆ ಕಾರಣವೇನು? ತಮ್ಮ ತಮ್ಮಂದಿರಲ್ಲಿ? JP ಬರೆಯುತ್ತಾರೆ ಎಂಬ ಹೆಸರಿನಲ್ಲಿ ವರದಿ ಮಾಡಿತ್ತು. ಪೂರ್ತಿ ವರದಿ ಓದಲು ಲಿಂಕ್ ಕ್ಲಿಕ್ ಮಾಡಿ

ಇದೀಗ ಕ್ಯಾಮರಾದಲ್ಲಿ ಸೆರೆಯಾದ ಅಂದಿನ ದಿನದ ದೃಶ್ಯ ಹೊರಬಿದ್ದಿದ್ದೆ, ವಾಹನಗಳು ಓಡಾಡುವ ಸಂದರ್ಭದಲ್ಲಿ ಕಾರೊಂದು ಅದಾಗಲೇ ಹಲ್ಲೆಗೊಳಗಾಗಿ ರೋಡ್​ ಸೈಡ್​ನಲ್ಲಿ ಬಿದ್ದಿದ್ದ ರಫೀಕ್ ಮೇಲೆ ಹತ್ತಿಕೊಂಡು ಹೋಗುವ ದೃಶ್ಯ ಎಲ್ಲೆಡೆ ಹರಿದಾಡುತ್ತಿದೆ.