ಗೂಳಿಯಿಂದ ಬಾಲಕನನ್ನ ರಕ್ಷಿಸಿದ ಹುಡುಗ!/ ಈತನ ಧೈರ್ಯವನ್ನ ಮೆಚ್ಚಲೇಬೇಕು
A boy was rescued from a bull in Sagar taluk by another boy.
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ , ಕಳೆದ ಬಾನುವಾರ ನಡೆದ ಘಟನೆಯೊಂದು ಎಲ್ಲೆಡೆ ವೈರಲ್ ಆಗುತ್ತಿದೆ. ಗೂಳಿ ಗುದ್ದಿತು ಬಾಲಕನಿಗೆ ಎಂದು ವಿಡಿಯೋ ಹರಿದಾಡುತ್ತಿದ್ದು, ಈ ವಿಡಿಯೋದಲ್ಲಿ ಬಾಲಕನನ್ನ , ಆತನಿಗಿಂತ ದೊಡ್ಡ ವಯಸ್ಸಿನ ಹುಡುಗ ಜೀವದ ಹಂಗು ತೊರೆದು ಕಾಪಾಡಿರುವ ವಿಚಾರವೂ ಸೆರೆಯಾಗಿದೆ.
ನಡೆದಿದ್ದೇನು?
ಸಾಗರದ ನೆಹರು ನಗರದಲ್ಲಿ, ಮಕ್ಕಳು ಸರ್ಕಲ್ನಲ್ಲಿ ಸೈಕಲ್ ಹೊಡೆಯುತ್ತಿದ್ದರು. ಈ ವೇಳೆ ಅಲ್ಲಿಗೆ ಗೂಳಿಯೊಂದು ಬಂದಿದೆ. ಅದೆ ಹೊತ್ತಿಗೆ ಆರು ವರ್ಷದ ಬಾಲಕನು ಅಲ್ಲಿ ಬಂದು ದೊಡ್ಡ ಹುಡುಗರು ಸೈಕಲ್ ಹೊಡೆಯುವುದನ್ನ ನೋಡುತ್ತಾ ನಿಂತಿದ್ದ. ಅದೇ ಹಾದಿಯಲ್ಲಿ ಬರುತ್ತಿದ್ದ ಗೂಳಿ ಇದ್ದಕ್ಕಿದ್ದ ಹಾಗೆ, ಆ ಬಾಲಕನನ್ನ ತನ್ನ ಕೊಂಬಿನಿಂದ ಎತ್ತಿ ಪಲ್ಟಿ ಹೊಡೆಸಿತ್ತು.
ಘಟನೆಯನ್ನು ಯಾರು ಗಮನಿಸಿದರೋ ಬಿಟ್ಟಿದ್ದರೋ ಎಂಬುದು ಅರಿವಿಗೆ ಬರುವಷ್ಟರಲ್ಲಿ ರಸ್ತೆಯ ಇನ್ನೊಂದು ಭಾಗದಲ್ಲಿದ್ದ ಹುಡುಗ, ಹಿಂದೂ ಮುಂದು ನೋಡದೇ ಓಡಿ ಬಂದು ಗೂಳಿಯಿಂದ ಬಾಲಕನನ್ನ ರಕ್ಷಿಸಿದ್ದಾನೆ. ಕೈಲೇನು ಇರದಿದ್ದರೂ ಏನೋ ನೆಲದಿಂದ ಹೆಕ್ಕಿ ಓಡಿಸುವಾಗೆ ಗೂಳಿಯನ್ನು ಹೆದರಿಸಿ ಓಡಿಸ್ತಾನೆ. ಬಳಿಕ ಬಾಲಕನಿಗೆ ಏನೂ ಆಗಿಲ್ಲವಲ್ಲ ಎಂದು ಹಣೆ, ಮೈ ಸಾವರಿಸಿ ನೋಡುತ್ತಾನೆ. ಅಲ್ಲಿವರೆಗೂ ಆ ದೃಶ್ಯದಲ್ಲಿ ಕಾಣದ ಹುಡುಗ, ಬಾಲಕ ಬೀಳುತ್ತಲೇ, ರಸ್ತೆದಾಟಿ ಹಾರಿಕೊಂಡು ಬರುತ್ತಿರುವ ದೃಶ್ಯ ನಿಜಕ್ಕೂ ಆತ ತೋರಿದ ಧೈರ್ಯಕ್ಕೆ ಸಾಕ್ಷಿ ಹೇಳುತ್ತಿದೆ.
Read /ಸೊರಬ ತಾಲ್ಲೂಕಿನಲ್ಲಿ ಕಳ್ಳಭಟ್ಟಿ ತಯಾರಿಸುವ ವೇಳೆ ಅಬಕಾರಿ ಇಲಾಖೆ ಅಧಿಕಾರಿಗಳ ದಾಳಿ
Read /McGANN / ಮೆಗ್ಗಾನ್ನಲ್ಲಿ ನಾಯಿ ಕಚ್ಚಿಕೊಂಡು ಹೋಯ್ತು ಎಳೆ ಮಗುವನ್ನ
Read / ಬರ್ತಿದೆ ಮುಚ್ಚಿಟ್ಟಿದ್ದೆಲ್ಲಾ ಹೊರಗೆ!? ದೊಡ್ಡಪೇಟೆಯಲ್ಲಿ ದೊಡ್ಡಬೇಟೆ, ಆಗುಂಬೆಯಲ್ಲಿ ಲಾರಿಗಟ್ಲೇ ಅಕ್ಕಿ, ರಗ್ಗು, ಜಮಖಾನ ಜಪ್ತಿ! ಕುಂಸಿಯಲ್ಲಿ ಸಿಕ್ತು ಕ್ಯಾಶು
Read / ಗೋಡೆ ಸಂದಿಯಲ್ಲಿ ಸಿಕ್ಕಿದ್ದವು 10 ನಾಗರ ಹಾವಿನ ಮರಿಗಳು!
Read / ಪೆಟ್ರೋಲಿಂಗ್ ವೇಳೆ ಸಿಕ್ತು ಅರ್ಧ ಕೆ.ಜಿ ಒಣ ಗಾಂಜಾ
Read / ಮೊಬೈಲ್ ಕಳೆದು ಹೋದರೆ ಹುಡುಕುವುದು ಈಗ ಸುಲಭ/ ಆದರೆ ಹೇಗೆ? ಫುಲ್ ಡಿಟೇಲ್ ಇಲ್ಲಿದೆ ನೋಡಿ! ಇಲ್ಲಿ ನೀವು ಸೇಫ್! ಮೊಬೈಲ್ ಸಹ ಸೇಫ್
Read / ಸೊರಬ ತಾಲ್ಲೂಕಿನಲ್ಲಿ ಕಳ್ಳಭಟ್ಟಿ ತಯಾರಿಸುವ ವೇಳೆ ಅಬಕಾರಿ ಇಲಾಖೆ ಅಧಿಕಾರಿಗಳ ದಾಳಿ
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
MALENADUTODAY.COM/ SHIVAMOGGA / KARNATAKA WEB NEWS
HASTAGS/ Shivamogga today, shivamogga news, shivamogga live, justshviamogga, firstnewsshivamogga, shivamoggavarte , shivamogga times news, shivamogga pepar news daily , shivamogga report , shivamogga police news, shivamogga malnad news, shivamogga today report, shivamogga accident , shivamogga place , shivamogga-shimoga , shivamogga latest news,shivamogga airport,shivamogga dc office,shivamogga today news,shivamogga live,shivamogga elections,shivamogga news today, bhadravati,bhadravati city,bhadravati town,bhadravati karnataka Sagar Rural Police Station, #Shivamogga #ShivamoggaNews #Shimoga #MalnadNews #LocalNews #KannadaNewsWebsite #LatestNewsKannada #ಮಲೆನಾಡು_ಸುದ್ಧಿ #ಶಿವಮೊಗ್ಗ_ನ್ಯೂಸ್ #Kannada_News #KannadaWebsite #malnadtoday #malenadutoday #shivamoggaliveinfo #firstnewsshivamogga