ಬತ್ತಿದ ಶರಾವತಿ ಹಿನ್ನೀರು! ಸಿಗಂದೂರು ಚೌಡೇಶ್ವರಿಯ ಮೂಲ ಸ್ಥಳದ ದರ್ಶನದ ಪಡೆದ ಯೋಗೇಂದ್ರ ಶ್ರೀಗಳು!

Sharavathi backwaters withered! Yogendra Sri got a darshan of the original place of siganduru Chowdeshwari

ಬತ್ತಿದ ಶರಾವತಿ ಹಿನ್ನೀರು! ಸಿಗಂದೂರು ಚೌಡೇಶ್ವರಿಯ ಮೂಲ ಸ್ಥಳದ ದರ್ಶನದ ಪಡೆದ ಯೋಗೇಂದ್ರ ಶ್ರೀಗಳು!

KARNATAKA NEWS/ ONLINE / Malenadu today/ Jun 13, 2023 SHIVAMOGGA NEWS

ಶರಾವತಿ/ ಹಿನ್ನೀರು ತಗ್ಗಿರುವುದು ಒಂದು ಕಡೆ ಆತಂಕ ಉಂಟು ಮಾಡಿದರೆ, ಮತ್ತೊಂದು ಕಡೆಯಲ್ಲಿ ಶರಾವತಿ ಸಂತ್ರಸ್ತರನ್ನ ತನ್ನತ್ತ ಸೆಳೆಯುತ್ತಿದೆ. ಅದರಲ್ಲಿಯು ವಿಶೇಷವಾಗಿ ಸಿಗಂದೂರು ಚೌಡೇಶ್ವರಿ ದೇವಿ ಮೂಲ ಸ್ಥಳವೂ ಹಿನ್ನೀರು ತಗ್ಗಿರುವುದರಿಂದ ಸ್ಪಷ್ಟವಾಗಿ ಕಾಣ ಸಿಗುತ್ತಿದೆ. 

ಈ ಹಿನ್ನೆಲೆಯಲ್ಲಿ ಮೂಲ ಚೌಡಶ್ವರಿ ದೇವಿಯ ಕಟ್ಟೆಗೆ ಭೇಟಿಕೊಟ್ಟ ಶ್ರೀ ಕ್ಷೇತ್ರ ಕಾರ್ತಿಕೇಯ ಪೀಠದ ಯೋಗೇಂದ್ರ ಶ್ರೀಗಳು, ಅಲ್ಲಿ ಚೌಡೇಶ್ವರಿಗೆ ಅಮ್ಮನವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. 

ಪ್ರತಿ ವರ್ಷ ಶ್ರೀ ದೇವಿಯ ಜಾತ್ರಾ ಮಹೋತ್ಸವದ ದಿನ ಈ  ಮೂಲ ಸ್ಥಾನದಿಂದಲೇ ಜ್ಯೋತಿ ರೂಪದಲ್ಲಿ  ದೀಪವನ್ನು ಈಗಿನ  ಕ್ಷೇತ್ರಕ್ಕೆ ತರಲಾಗುತ್ತದೆ.  ಚೌಡೇಶ್ವರಿ ಅಮ್ಮನವರ ಮಹಿಮೆಯ ಕಥೆಗಳು ಮೂಲ ದೇವಿಕಟ್ಟೆಯಿಂದಲೇ ಆರಂಭವಾಗುತ್ತದೆ.  ಸದ್ಯ ಕಾಣಸಿಕ್ಕಿರುವ ಮೂಲಸ್ಥಳದಲ್ಲಿ ಯೋಗೇಂದ್ರ ಗುರುಗಳು ಹಾಗೂ ಸಿಗಂದೂರು ಚೌಡೇಶ್ವರಿ ದೇವಾಲಯದ ಧರ್ಮದರ್ಶಿ ರಾಮಪ್ಪರವರು, ಪೂಜೆ ಸಲ್ಲಿಸಿದ್ದಾರೆ. 


ಸಾಗರ ಬಸ್​ ನಿಲ್ದಾಣದಲ್ಲಿ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಂದ ದಿಢೀರ್​ ಪ್ರತಿಭಟನೆ ! ಮಕ್ಕಳ ಬಳಿ ಕಷ್ಟ ಹೇಳಿಕೊಂಡ ಡಿಪೊ ಮ್ಯಾನೇಜರ್​!


ಸಾಗರ  ತಾಲ್ಲೂಕಿನ ಆನಂದಪುರಂನಿಂದ ಸಾಗರದ ವಿವಿಧ ಕಾಲೇಜುಗಳಿಗೆ ವಿದ್ಯಾರ್ಥಿಗಳು ಬರಲು ಹೆಚ್ಚುವರಿ ಬಸ್ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಇವತ್ತು ಸಾಗರದ ಕೆಎಸ್​ಆರ್​ಟಿಸಿ (KSRTC) ಬಸ್ ನಿಲ್ದಾಣದ ಎದುರು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ರು. 

ಸಮಸ್ಯೆಯೇನು?

ಆನಂದಪುರಂನಿಂದ ಸಾಗರದ ಇಂದಿರಾಗಾಂಧಿ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಜ್ಯೂನಿಯರ್ ಕಾಲೇಜಿಗೆ ಬರಲು ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಬಸ್​ ಸಿಗುತ್ತಿಲ್ಲ ಎಂಬುದು ವಿದ್ಯಾರ್ಥಿಗಳ ದೂರು.  ಕಳೆದ ಎರಡಮೂರು ದಿನಗಳಿಂದ ವಿದ್ಯಾರ್ಥಿಗಳು ಬಸ್ ಇಲ್ಲದೆ ಕಾಲೇಜಿಗೆ ಹಾಜರಾಗಲು ಆಗುತ್ತಿಲ್ಲ ಎಂದು ವಿದ್ಯಾರ್ಥಿಗಳು ತಮ್ಮ ಸಮಸ್ಯೆಯನ್ನ ಹೇಳಿಕೊಂಡರು. ಇನ್ನೂ  ನಿಲ್ದಾಣದ ಅಧಿಕಾರಿಗಳಿಗೆ ಈ ಹಿಂದಿನಿಂದಲೂ ಸಮಸ್ಯೆ ಹೇಳಿಕೊಂಡು ಬಂದಿದ್ದೇವೆ ಆದರೂ ಸಮಸ್ಯೆ ಬಗೆಹರಿದಿಲ್ಲವಂತೆ. ಹೀಗಾಗಿ ಹೆಚ್ಚುವರಿ ಬಸ್ ನ್ನ ಆನಂದಪುರಂನಿಂದ ಬಿಡಬೇಕು ಎಂದು ಪ್ರತಿಭಟನೆ ನಡೆಸಿದ್ರು. 

ಡಿಪೋ ಮ್ಯಾನೇಜರ್ ಹೇಳಿದ್ದೇನು?

ವಿದ್ಯಾರ್ಥಿಗಳ ಅಹವಾಲು ಸ್ವೀಕರಿಸಿ ಮಾತನಾಡಿದ ಡಿಪೋ ಮ್ಯಾನೇಜರ್ ರಾಜಪ್ಪ, ವಿದ್ಯಾರ್ಥಿಗಳಿಗೆ ಆಗುತ್ತಿರುವ ಸಮಸ್ಯೆಯನ್ನು ಇನ್ನು ಒಂದೆರಡು ದಿನಗಳಲ್ಲಿ ಬಗೆಹರಿಸುತ್ತೇವೆ ಎಂದಿದ್ಧಾರೆ.  ಹೆಚ್ಚುವರಿ ಬಸ್ ಕಲ್ಪಿಸುವ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ನಡೆಸಲಾಗುತ್ತದೆ ಎಂದರು 

ಅಳಲು ತೋಡಿಕೊಂಡ ಡಿಪೋ ಮ್ಯಾನೇಜರ್

ಇನ್ನೂ ವಿದ್ಯಾರ್ಥಿಗಳ ಬಳಿಯಲ್ಲಿ ಮಾತನಾಡ್ತ, ತಮ್ಮ ಬಳಿಯಲ್ಲಿ ಬಸ್ ಇಲ್ಲ, ಡ್ರೈವರ್ ಇಲ್ಲ, ಕಂಡಕ್ಟರ್ಗಳಿಲ್ಲ ಎಂದು ಅಳಲು ತೋಡಿಕೊಂಡರು. ಉಚಿತ ಟಿಕೆಟ್ ಶಕ್ತಿಯೋಜನೆ ಜಾರಿಯಾದ ಬೆನ್ನಲ್ಲೆ ಹೆಚ್ಚುವರಿಯಾಗಿ ಮಹಿಳಾ ಪ್ರಯಾಣಿಕರು ಕೆಎಸ್​ಆರ್​ಟಿಸಿಯತ್ತ ಮುಖ ಮಾಡಿದ್ಧಾರೆ. ಗಾರ್ಮೆಂಟ್ಸ್​ಗೆ ಹೋಗುವ ಮಹಿಳಾ ಸಿಬ್ಬಂದಿ ಸೇರಿದಂತೆ , ಪರ್ಯಾಯ ಸಾರಿಗೆ ವ್ಯವಸ್ಥೆ ಬಳಸುತ್ತಿದ್ದವರು ಕೆಎಸ್​ಆರ್​ಟಿಸಿಯಲ್ಲಿ ಓಡಾಡುತ್ತಿದ್ದಾರೆ. ಇದರಿಂದ ಸ್ವಲ್ಪ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಹೆಚ್ಚುವರಿ ಬಸ್​ಗಳನ್ನ ಬಿಡುವ ವ್ಯವಸ್ಥೆಯನ್ನು ಕಲಿಸ್ಪಲಾಗುವುದು ಎಂದಿದ್ಧಾರೆ.