ಶ್ರೀ ಸಿಗಂದೂರು ಚೌಡೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ವಿಶೇಷ! ಭಕ್ತಾದಿಗಳಿಗಾಗಿ ಈ ಮಾಹಿತಿ

Malenadu Today

KARNATAKA NEWS/ ONLINE / Malenadu today/ Oct 12, 2023 SHIVAMOGGA NEWS

 

ನಾಡಿನ ಪ್ರಸಿದ್ಧ ಶಕ್ತಿ ದೇವತೆ ಸಾಗರ ತಾಲ್ಲೂಕಿನ ಸಿಗಂದೂರು ಚೌಡಮ್ಮ ದೇವಸ್ಥಾನದಲ್ಲಿ ಅಕ್ಟೋಬರ್ 15 ರಿಂದ 24 ರ ವರೆಗೆ ನವರಾತ್ರಿ ಉತ್ಸವ ನೆಡೆಯಲಿದೆ ಎಂದು ದೇವಳ ಆಡಳಿತ ಮಂಡಳಿ ತಿಳಿಸಿದೆ.

ಈ ವರ್ಷದ ನವರಾತ್ರಿ ಉತ್ಸವಕ್ಕೆ ಚೆನೈ ಆದಾಯ ತೆರಿಗೆ ಮೇಲ್ಮನವಿ ಮಂಡಳಿ ಸದಸ್ಯ, ಜಿ ಮಂಜುನಾಥ ಚಾಲನೆ ನೀಡಲಿದ್ದಾರೆ. ಸೋಲೂರು ಈಡೀಗ ಮಹಾ ಸಂಸ್ಥಾನದ ವಿಖ್ಯಾತಾನಂದ ಸ್ವಾಮೀಜಿ, ಶಿವಮೊಗ್ಗ ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮಿಜಿ, ಸಾರಗನಜಡ್ಡು ಯೋಗೇಂದ್ರ ಸ್ವಾಮೀಜಿಗಳು ದಿವ್ಯ ಸಾನಿಧ್ಯ ವಹಿಸಿ ಅಶಿರ್ವಚನ ನೀಡಲಿದ್ದಾರೆ. 

ನವರಾತ್ರಿ ಉತ್ಸವದ ಪ್ರಯುಕ್ತ ದೇವಿಗೆ ಪ್ರತಿನಿತ್ಯ ತೈಲಾಭಿಷೇಕ, ಅಲಂಕಾರ ಪೂಜೆ, ಮಹಾ ಪೂಜೆ, ಗಣಹೋಮ, ಚಂಡಿಕಾ ಹವನ ನೆಡೆಯಲಿದ್ದು ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಅನುವಂಶಿಕ ಧರ್ಮಾಧಿಕಾರಿ ಎಸ್ ರಾಮಪ್ಪನವರ ನೇತೃತ್ವದಲ್ಲಿ ನಡೆಯಲಿದೆ. 

ಪ್ರತಿನಿತ್ಯ ಸಂಜೆ 5 ರಿಂದ ದೀಪೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದ್ದು. ನವರಾತ್ರಿ ಸಂದರ್ಭದಲ್ಲಿ ಭಕ್ತಾದಿಗಳಿಗೆ ವಸತಿ, ದರ್ಶನ, ನಿತ್ಯ ಪೂಜೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ದೇವಸ್ಥಾನದ  ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಎಚ್ ಆರ್  ತಿಳಿಸಿದ್ದಾರೆ.


ಇನ್ನಷ್ಟು ಸುದ್ದಿಗಳು 

  1. ಅಭಯ್ ಪ್ರಕಾಶ್ ಸಸ್ಪೆಂಡ್ ಪೊಲೀಸ್ ಇಲಾಖೆಯ ವೈಫಲ್ಯವೇ? ಹೀಗೆ ಮಾಡುವುದಾದರೆ ಹಲವರು ಅಮಾನತ್ತಲ್ಲಿರಬೇಕಿತ್ತಲ್ಲವೇ? ಯಾವ ತಪ್ಪಿಗೆ ಈ ಶಿಕ್ಷೆ? JP ಬರೆಯುತ್ತಾರೆ

  2. FACEBOOK , INSTAGRAM ಪೋಸ್ಟ್ ಹಾಕಬೇಕಾದರೆ ಹುಷಾರ್! ಬೀಳುತ್ತೆ ಕೇಸ್​! social media monitoring ಮಾಡುತ್ತಿದೆ ಶಿವಮೊಗ್ಗ ಪೊಲೀಸ್ ಇಲಾಖೆ

  3. ಈ ಹಾವು ನಿಮ್ಮ ಕಣ್ಣಿಗೆ ಬಿದ್ದಿತ್ತಾ? ಇದನ್ನ ಏನಂದು ಕರೆಯುತ್ತಾರೆ? ಈ ಹಾವಿನ ಮೈಮೇಲೆ ನೀರು ಇಂಗುತ್ತೆ ಗೊತ್ತಾ?


 

Share This Article