ಸಾಗರ ಪೇಟೆಯಲ್ಲಿ ಖೋಟಾ ನೋಟು ವಹಿವಾಟು! ಓರ್ವ ಅರೆಸ್ಟ್!
Counterfeit note transactions in Sagar Pete! An arrest!
Shivamogga Mar 31, 2024 Sagar Pete ಖೋಟಾ ನೋಟು ವ್ಯವಹಾರಕ್ಕೆ ಸಂಬಂದಿಸಿದಂತೆ ಮಲೆನಾಡು ಟುಡೆ ಶಿವಮೊಗ್ಗ ಜಿಲ್ಲೆ ಸಾಗರ ಟೌನ್ ಪೊಲೀಸ್ ಸ್ಟೇಷನ್‌ನಲ್ಲಿ ದಾಖಲಾಗಿದ್ದ ಪ್ರಕರಣವನ್ನು ವರದಿ ಮಾಡಿತ್ತು. ಈ ಸಂಬಂಧ ಇದೀಗ ಆರೋಪಿಯನ್ನು ಬಂಧಿಸಲಾಗಿದೆ.
30 ಸಾವಿರ ರೂ. ಬೆಲೆಯ ಖೋಟಾ ನೋಟುಗಳನ್ನು ಸ್ನೇಹಿತನಿಗೇ ದಾಟಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನ ಸಾಗರ ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಸಂತೋಷ್ ಬಂಧಿತ ಅರೋಪಿ. ಈತ ತನ್ನ ಸ್ನೇಹಿತನಿಂದ ಕಳೆದ ವರ್ಷದ ನವೆಂಬರ್‌ನಲ್ಲಿ 30 ಸಾವಿರ ರೂಪಾಯಿ ಸಾಲ ಪಡೆದಿದ್ದ. ಪಡೆದ ದುಡ್ಡನ್ನ ವಾಪಸ್ ಕೊಟ್ಟ ಈತ ಅದರಲ್ಲಿ ಖೋಟಾ ನೋಟು ಸೇರಿಸಿದ್ದ. ಇದು ಸ್ನೇಹಿತನ ಗಮನಕ್ಕೆ ಬಂದು ಪೊಲೀಸರಿಗೆ ದೂರು ನೀಡಿದ್ದ. ಈ ಸಂಬಂಧ ತನಿಖೆ ನಡೆಸಿದ ಪೊಲೀಸರು ಸಂತೋಷ್‌ನನ್ನ ಅರೆಸ್ಟ್ ಮಾಡಿದ್ದಾರೆ.