ಕೊಟ್ಟ ಸಾಲ ವಾಪಸ್‌ ಪಡೆದವನಿಗೆ ಶಾಕ್!‌ ಐನೂರು ರೂಪಾಯಿಗಳ ಕಂತೆಯಲ್ಲಿತ್ತು ಖೋಟಾ?!

An FIR has been registered in connection with the circulation of fake currency notes in sagar town station limits

ಕೊಟ್ಟ ಸಾಲ ವಾಪಸ್‌ ಪಡೆದವನಿಗೆ ಶಾಕ್!‌ ಐನೂರು ರೂಪಾಯಿಗಳ ಕಂತೆಯಲ್ಲಿತ್ತು ಖೋಟಾ?!
sagar town station limits

Shivamogga  Mar 26, 2024 sagar town station limits   ಚುನಾವಣೆ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ನಕಲಿ ನೋಟಿನ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಸಂಬಂಧ ಸಾಗರ ಟೌನ್‌ ಪೊಲೀಸ್‌ ಸ್ಟೇಷನ್‌ನಲ್ಲಿ ಎಫ್‌ಐಆರ್‌ ಸಹ ದಾಖಲಾಗಿದೆ. 

2 ದಿನಗಳ ಹಿಂದೆ ದಾಖಲಾಗಿರುವ ಪ್ರಕರಣದಲ್ಲಿ ಐಪಿಸಿ 489ಬಿ ಹಾಗೂ 420 ಅಡಿಯಲ್ಲಿ ಕೇಸ್‌ ದಾಖಲಾಗಿದೆ. ಸ್ಟೇಷನ್‌ ಲಿಮಿಟ್ಸ್‌ನ ವ್ಯಕ್ತಿಯೊಬ್ಬರು ತಮ್ಮ ಸ್ನೇಹಿತನಿಗೆ ಮೂರನೇ ವ್ಯಕ್ತಿಯ ಸಾಕ್ಷಿ ಇಟ್ಟುಕೊಂಡು ಮೂವತ್ತು ಸಾವಿರ ಹಣವನ್ನು ಕಳೆದ ವರ್ಷ ನೀಡಿದ್ದರು. ಈ ವರ್ಷ ಅದನ್ನು ವಾಪಸ್‌ ನೀಡುವಂತೆ ಕೇಳಿದ್ದಾರೆ. ಈ ಸಂಬಂಧ ಹಲವು ಸಲು ಮಾತುಕತೆ ನಡೆದು ಕಳೆದ 22 ರಂದು ಹಣ ನೀಡಲು ಅವರ ಸ್ನೇಹಿತ ಬಂದಿದ್ದಾರೆ. ಸಾಕ್ಷಿಯಾಗಿದ್ದ ವ್ಯಕ್ತಿಯ ಎದುರು ಹಣ ವಾಪಸ್‌ ಕೊಟ್ಟಿದ್ದಾರೆ. ಐನೂರು ಮುಖಬೆಲೆಯ 60 ನೋಟುಗಳನ್ನ ಪಡೆದಿದ್ದ ದೂರುದಾರರಿಗೆ ಆಮೇಲೆ ಅನುಮಾನ ಮೂಡಿದೆ. ಹಾಗಾಗಿ ಮತ್ತೊಮ್ಮೆ ಹಣವನ್ನು ಪರಿಶೀಲನೆಗೆ ಒಳಪಡಿಸಿದಾಗ ಅದರಲ್ಲಿ ಖೋಟಾ ನೋಟು ಇರುವುದು ಗೊತ್ತಾಗಿದೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.