BREAKING NEWS ಸಿಗಂದೂರು ಸೇತುವೆ ಕಾಮಗಾರಿ ಮುಗಿಸಲು ಟೈಮ್ಸ್ ಫಿಕ್ಸ್! ಉದ್ಘಾಟನೆ ಯಾವಾಗ ಗೊತ್ತಾ!? ಸಂಸದ ಬಿ.ವೈ.ರಾಘವೇಂದ್ರರಿಂದ ಮಹತ್ವದ ಮಾಹಿತಿ

KARNATAKA NEWS/ ONLINE / Malenadu today/ Jun 23, 2023 SHIVAMOGGA NEWS  

ಬರುವ ಜನವರಿ ಹೊತ್ತಿಗೆ ಸಿಗಂದೂರು ಸೇತುವೆ ಪೂರ್ಣಗೊಂಡು ಉದ್ಘಾಟನೆಯಾಗಲಿದೆ ಅಂತಾ ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ಧಾರೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಈ ಬಗ್ಗೆ ಮಾತನಾಡಿದ ಅವರು,  

ನಡು ರಸ್ತೆಯಲ್ಲಿ ಪಲ್ಟಿಯಾದ ಲಾರಿ! ಅಡುಗೆ ಎಣ್ಣೆ ಪ್ಯಾಕೆಟ್​ಗಳು ಚೆಲ್ಲಾಪಿಲ್ಲಿ!

 

ಸಿಗಂದೂರು ಸೇತುವೆಯ ಕಾಮಗಾರಿ ಮು೦ದಿನ ವರ್ಷ ಜುಲೈ ವೇಳೆಗೆ ಮುಗಿಯಬೇಕಿತ್ತು. ಈ ಮಧ್ಯೆ ಸೇತುವೆ ಕಾಮಗಾರಿ ಶೀಘ್ರವೇ ಮುಗಿಸುವಂತೆ ಮನವಿ ಮಾಡಿದ್ದೇವೆ.  ನಮ್ಮ ಮನವಿಗೆ ಸ್ಪಂದಿಸಿರುವ ಗುತ್ತಿಗೆದಾರರು 2024 ರ ಜನವರಿ ಅಥವಾ ಫೆಬ್ರವರಿಯಲ್ಲಿ ಕಾಮಗಾರಿ ಮುಗಿಸಿಕೊಡುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. 

ಇನ್ನೂ ಜಿಲ್ಲೆಯಲ್ಲಿ 5 ರೈಲ್ವೆ ನಿಲ್ದಾಣ ಅಭಿವೃದ್ಧಿಗೊಳಿಸಲು 100 ಕೋಟಿ ರೂ.ಅನುದಾನ ಮಂಜೂರಾಗಿದೆ. ಜೋಗ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. 300 ಕೋಟಿ ರೂಪಾಯಿ ವೆಚ್ಚದಲ್ಲಿ ಬಿಎಸ್​ಎನ್​ಎಲ್​ ಟವರ್​ಗಳನ್ನ ಅಳವಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು


ಪೇಟೆಯಲ್ಲಿಯೇ ವೇಶ್ಯಾವಾಟಿಕೆ! ಮೂವರು ಮಹಿಳೆಯರ ರಕ್ಷಣೆ ! ಇಬ್ಬರ ಅರೆಸ್ಟ್ ! ಪೊಲೀಸ್ ಕಾರ್ಯಾಚರಣೆಯ ಇನ್ನಷ್ಟು ಡಿಟೇಲ್ಸ್ ಇಲ್ಲಿದೆ ಓದಿ

ತೀರ್ಥಹಳ್ಳಿ/ ಶಿವಮೊಗ್ಗ ಪೊಲೀಸರು ಮತ್ತೊಮ್ಮೆ ವೇಶ್ಯಾವಾಟಿಕೆ ಜಾಲದ ಬೆನ್ನು ಬಿದ್ದಿದ್ಧಾರೆ. ಈ ಬಾರಿಯು ಸ್ಥಳೀಯ ಮಾಹಿತಿ ಅಡಿಯಲ್ಲಿ ಪೊಲೀಸರು ರೇಡ್ ನಡೆಸಿದ್ದಾರೆ. ದಿನಾಂಕ:22/06/2023 ರಂದು ಮಧ್ಯಾಹ್ನ ತೀರ್ಥಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ದಾಳಿ ನಡೆಸಿ, ಮನೆಯೊಂದರಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆಯನ್ನು ಬಂದ್ ಮಾಡಿದ್ಧಾರೆ. ಇಲ್ಲಿನ ವಾಸದ ಮನೆಯೊಂದರಲ್ಲಿ  ಮಹಿಳೆಯರನ್ನು ಅಕ್ರಮವಾಗಿ ಬಂಧನದಲ್ಲಿಟ್ಟುಕೊಂಡು, ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಸಾಂತ್ವನ ಕೇಂದ್ರ ಅಧಿಕಾರಿಯು ಸೇರಿದಂಂತೆ ಪೊಲೀಸರ ತಂಡ ಮಾಹಿತಿ ಆಧರಿಸಿ ದಾಳಿ ನಡೆಸಿದೆ. ಈ ವೇಳೆ ವಾಸದ ಮನೆಯಲ್ಲಿದ್ದ  ಮೂವರು ಮಹಿಳೆಯರನ್ನು ರಕ್ಷಿಸಲಾಗಿದೆ.  ಈ ಸಂಬಂಧ ಪೊಲೀಸರೇ ನೀಡಿರುವ ಪ್ರಕಟಣೆಯ ಪ್ರಕಾರ, ಇಬ್ಬರನ್ನ ಬಂಧಿಸಲಾಗಿದೆ

ಬಂಧಿತರು

1) ಪ್ರಶಾಂತ್ ಕೆ.ಎಸ್. 33 ವರ್ಷ, ಜೆ.ಪಿ. ನಗರ, ಕಮ್ಮರಡಿ ಗ್ರಾಮ, ಆಗುಂಬೆ, ತೀರ್ಥಹಳ್ಳಿ ಮತ್ತು

 2) ಮಂಜುನಾಥ. ಎಂ,  37 ವರ್ಷ, ಮೇಲಿನ ಕುರುವಳ್ಳಿ, ತೀರ್ಥಹಳ್ಳಿ  


Leave a Comment