ಮಂಗಳೂರು ಕುಕ್ಕರ್ ಸ್ಫೋಟ & ಶಿವಮೊಗ್ಗ ಟ್ರಯಲ್​ ಬ್ಲಾಸ್ಟ್​ ನಡುವೆ ಇರುವ ಸಂಬಂಧ ಏನು ಗೊತ್ತಾ? ತುಂಗಾ ತೀರದಲ್ಲಿ NIA ಚಾರ್ಜ್​ ಶೀಟ್​!

Do you know the connection between Mangaluru cooker blast case and Shivamogga trial blast case? On the banks of tunga. NIA chargesheet!

ಮಂಗಳೂರು ಕುಕ್ಕರ್ ಸ್ಫೋಟ & ಶಿವಮೊಗ್ಗ  ಟ್ರಯಲ್​ ಬ್ಲಾಸ್ಟ್​  ನಡುವೆ ಇರುವ ಸಂಬಂಧ ಏನು ಗೊತ್ತಾ? ತುಂಗಾ ತೀರದಲ್ಲಿ NIA  ಚಾರ್ಜ್​ ಶೀಟ್​!

SHIVAMOGGA  |  Dec 25, 2023  |  ಮಂಗಳೂರು ನಲ್ಲಿ ನಡೆದಿದ್ದ ಕುಕ್ಕರ್​ ಬಾಂಬ್ ಸ್ಫೋಟದ ಸಂಬಂಧ ಎನ್​ಐಎ ಅಧಿಕಾರಿಗಳು ಸಲ್ಲಿಸಿದ್ದ ಚಾರ್ಜ್​ಶೀಟ್​ ನಲ್ಲಿ  ಶಿವಮೊಗ್ಗ ಟ್ರಯಲ್ ಬ್ಲಾಸ್ಟ್ ಹಾಗೂ ಮಂಗಳೂರು ಕುಕ್ಕರ್ ಬ್ಲಾಸ್ಟ್​ ಗೂ ಇರುವ ಸಂಬಂಧದ ವಿವರಿಸಲಾಗಿದೆ. ಮತ್ತು ಈ ವಿವರದ ಬಗ್ಗೆ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ. 


ಕಂಕನಾಡಿ ಪೊಲೀಸ್ ಸ್ಟೇಷನ್​

 

ಆ ವರದಿಯ ಪ್ರಕಾರ,  ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ನವೆಂಬರ್ 19, 2022 ರಂದು ಸಂಜೆ 4.40 ಕ್ಕೆ ಆಟೋರಿಕ್ಷಾದಲ್ಲಿ ಸ್ಫೋಟಗೊಂಡ ಮಂಗಳೂರು ಕುಕ್ಕರ್‌ ಸ್ಫೋಟ ಪ್ರಕರಣ (Mangaluru cooker bomb blast case) ಹಾಗೂ ಈ ಘಟನೆಗೂ ಮೊದಲು ಶಿವಮೊಗ್ಗದಲ್ಲಿ ಆಗಸ್ಟ್ 15 ರಂದು ನಡೆದಿದ್ದ  ಫ್ರೇಮ್​ಸಿಂಗ್​ಗೆ ಇರಿತ ಪ್ರಕರಣದಲ್ಲಿ ಸಿಕ್ಕಿಬಿದ್ದ ಆರೋಪಿಗಳು ಮತ್ತು ಆರೋಪಿಗಳ ತನಿಖೆಯ ಬಯಲಾಗಿದ್ದ ಐಎಸ್​ಐಎಸ್​ ನಂಟಿನ ಪ್ರಕರಣದಲ್ಲಿ ಹೊರಬಿದ್ದ ತುಂಗಾ ತೀರದ ಟ್ರಯಲ್ ಬ್ಲಾಸ್ಟ್​ ಪ್ರಕರಣಕ್ಕೂ ಲಿಂಕ್ ಇದೆ ಎನ್ನಲಾಗಿದೆ. 

2023 ರ ನವೆಂಬರ್‌ನಲ್ಲಿ ಮಂಗಳೂರು ಕುಕ್ಕರ್ ಬಾಂಬ್ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದೆ. ಈ ಪ್ರಕರಣದ ಮೂಲ ಶಿವಮೊಗ್ಗದಲ್ಲಿ ಬ್ಲಿಂಕ್ ಆಗಿದೆ.. 

 

ಆರೋಪಿಗಳ ಜಾಡು

 

ಆಗಸ್ಟ್ 15, 2022 ರಂದು ಶಿವಮೊಗ್ಗದಲ್ಲಿ ಪ್ರೇಮ್ ಸಿಂಗ್ ಎಂದು ಗುರುತಿಸಲಾದ ವ್ಯಕ್ತಿಯನ್ನು ಚಾಕುವಿನಿಂದ ಇರಿದ ಪ್ರಕರಣ ಸಂಭವಿಸಿತ್ತು. ಮೇಜರ್ ಆಗಿದ್ದ ಕೇಸ್​ ನಲ್ಲಿ ಅಂದಿನ ಎಸ್​ಪಿ ಲಕ್ಷ್ಮೀಪ್ರಸಾದ್​ ವಿಶೇಷ ತಂಡ ರಚಿಸಿ  ಜಬೀವುಲ್ಲಾ ಮತ್ತಿತರನ್ನ ಅರೆಸ್ಟ್ ಮಾಡಿದ್ದರು. ಈ ವೇಳೆ ದೊಡ್ಡಪೇಟೆ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ನಡೆದಿದ್ದ ಈ ಕೇಸ್​ನ ಬೆನ್ನಲ್ಲೆ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್​ನಲ್ಲಿ ಬಿಗ್ ಬ್ಲಾಸ್ಟ್​ ಎನ್ನುವಂತಹ ಸುದ್ದಿ ಹೊಂದಿದ್ದ ಕೇಸ್ ರಿಜಿಸ್ಟರ್ ಆಗಿತ್ತು. ಅಂದಿನ ಬೆಂಗಳೂರು ಮಾಧ್ಯಮಗಳು ಈ ವರದಿಯನ್ನ ಬ್ರೇಕ್ ಮಾಡಿದ್ದವು. 


ಅಂದಿನ ಎಸ್​ಪಿ ಲಕ್ಷ್ಮೀಪ್ರಸಾದ್​ 

 

ಅಂದಿನ ಎಸ್​ಪಿ ಲಕ್ಷ್ಮೀಪ್ರಸಾದ್ & ಟೀಂ​ ಜಬಿವುಲ್ಲಾನ ಪೂರ್ವಪರ ಹಾಗೂ ಆತನ ಮೊಬೈಲ್​ನ ಡೇಟಾಗಳನ್ನ ಪರಿಶೀಲಿಸಿದ ಬಳಿಕ ಇಡೀ ಪ್ರಕರಣ ರೋಚಕ ಟ್ವಿಸ್ಟ್ ಪಡೆದುಕೊಂಡಿತ್ತು. ಕೇವಲ ದ್ವೇಷದ ಕಾರಣಕ್ಕೆ ಪ್ರೇಮ್​ ಸಿಂಗ್ಗೆ ಇರಿಯಲಾಗಿರಲಿಲ್ಲ ಎಂದು ನಂಬಿದ್ದ ಪೊಲೀಸರಿಗೆ ತನಿಖೆಯಲ್ಲಿ ಐಸಿಸ್​ ಲಿಂಕ್​ನ ವಿಚಾರ ಸ್ಪಷ್ಟವಾಗಿತ್ತು. 

 

ಶಿವಮೊಗ್ಗ ಟ್ರಯಲ್ ಬ್ಲಾಸ್ಟ್​ 

 

ಸದ್ಯ ರಾಷ್ಟ್ರೀಯ ಮಾಧ್ಯಮದ ವರದಿಯ ಪ್ರಕಾರ, ಅಂದಿನ ಘಟನೆಯಲ್ಲಿಯು (ಇರಿತ ಪ್ರಕರಣ) ಮೊಹಮ್ಮದ್ ಶಾರೀಖ್​ನ ಪಾತ್ರವಿತ್ತು. ಈ ಘಟನೆಯ ನಂತರ ಶಾರೀಖ್ ಮಂಗಳೂರು Ulaibettu ಎಂಬಲ್ಲಿಗೆ ತೆರಳಿ ತಲೆಮರೆಸಿಕೊಂಡಿದ್ದ ಅಲ್ಲ ಅನ್ಸರ್ ಎಂಬವನ ಜೊತೆಗಿದ್ದ ಶಾರೀ ಶಿವಮೊಗ್ಗ ಟ್ರಯಲ್​ ಬ್ಲಾಸ್ಟ್​ನ ಪ್ರಮುಖ ಆರೋಪಿ ಸಯ್ಯದ್​​ ಯಾಸೀನ್​ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದ ಎನ್ನಲಾಗಿದೆ.


ಮಂಗಳೂರು ಗೋಡೆ ಪ್ರಕರಣ

 

ಮಂಗಳೂರು ಗೋಡೆ ಪ್ರಕರಣದ ಆರೋಪಿ ಜೊತೆಗಿದ್ದ ಶಾರೀಖ್​ ಆನಂತರ ಐಸಿಸ್ ಹ್ಯಾಂಡ್ಲರ್​ನ ಅಣತಿಯಂತೆ ಕೆಲಸ ಮಾಡುತ್ತಿದ್ದ. ವಿವಿಧ ಆ್ಯಪ್​ ಗಳ ಮೂಲಕ ಪರಸ್ಪರ ಸಂಪರ್ಕದಲ್ಲಿದ್ದ  ಆರೋಪಿಗಳು ಹಾಗೂ ಶಾರೀಖ್​ ಆಗಸ್ಟ್ 20 ಕ್ಕೆ ತೀರ್ಥಹಳ್ಳಿಗೆ ವಾಪಸ್ ಬಂದಿದ್ದ. ಅಲ್ಲಿಂದ ಬೆಂಕಿ ಪೊಟ್ಟಣಗಳನ್ನ ಪ್ರಾಸ್ಪರಸ್  (phosphorus)​ ಗಾಗಿ ಸಂಗ್ರಹಿಸಲು ಆರಂಭಿಸಿದ್ದ ಎಂದು ಹೇಳಲಾಗಿದೆ. ಅಲ್ಲದೆ ಇದೇ ಸಂದರ್ಭದಲ್ಲಿ  ಯಾಸೀನ್​ಗೂ ಬೆಂಕಿಪೊಟ್ಟಣ್ಣಗಳನ್ನ ಸಂಗ್ರಹಿಸಲು ತಿಳಿಸಿದ್ದಾನೆ. ರಾಷ್ಟ್ರೀಯ ಮಾಧ್ಯಮದ ವರದಿ ಪ್ರಕಾರ, ಹೀಗೆ ಎನ್​ಐಎ ಆರೋಪಿಗಳ ಜಾಡ್​ನ್ನ ರಿವರ್ಸ್​ ಇನ್​ವೆಸ್ಟಿಗೇಷನ್​ನ ಮೂಲಕ ಪತ್ತೆ ಮಾಡುತ್ತಾ ಚಾರ್ಜ್​ಶೀಟ್​ನಲ್ಲಿ ಹಲವು ಅಂಶಗಳನ್ನು ನಮೂದಿಸಿದೆ. 

 

ಪ್ರೇಮ್​ ಇಂಗ್​ಗೆ ಇರಿತ ಪ್ರಕರಣ


ಚಾರ್ಜ್​ಶೀಟ್​ನಲ್ಲಿ ಮುಂದುವರಿದಂತೆ, ಪ್ರೇಮ್​ ಸಿಂಗ್  ಪ್ರಕರಣವನ್ನು ಮುಖ್ಯವಾಗಿ ಪರಿಗಣಿಸಿದ ಎಸ್​ಪಿ ಲಕ್ಷ್ಮೀಪ್ರಸಾದ್ ಆ್ಯಡ್ ಟೀಂ ಜಬಿವುಲ್ಲನ ಬಳಿ ಇಸ್ಲಾಮಿಕ್ ಸ್ಟೇಟ್ಸ್​ಗೆ ಸಂಬಂಧಿಸಿದ ವಿಷಯಗಳು ಸಿಕ್ಕ ಬಳಗಿ ಮತ್ತಷ್ಟು ಅಲರ್ಟ್ ಆಗುತ್ತದೆ. ಈ ವಿಚಾರ ಆಗಸ್ಟ್ 28 ಕ್ಕೆ ಶಾರೀಖ್​ಗೆ ಗೊತ್ತಾಗುತ್ತದೆ. ತನ್ನ ತಂಡದ ಮುಖ್ಯಸ್ಥನಿಗೆ ಇದರ ಮಾಹಿತಿ ನೀಡಿದ ಆತ ತೀರ್ಥಹಳ್ಳಿ ಬಿಟ್ಟು ಎಸ್ಕೇಪ್ ಆಗಲು ರೆಡಿಯಾಗುತ್ತಾನೆ. 



ತೀರ್ಥಹಳ್ಳಿ ಹೊಳೆ

 

ಇದಕ್ಕೂ ಮೊದಲು ಸೈಯ್ಯದ್ ಯಾಸೀನ್​ನನ್ನ ತೀರ್ಥಹಳ್ಳಿಯ ನಾಡ್ತಿ ಹೊಳೆಯ ಬಳಿಯಲ್ಲಿ ಭೇಟಿಯಾಗುತ್ತಾನೆ. ಅಲ್ಲಿ ಯಾಸಿನ್​ ಗೆ ಶಾರೀಖ್​  ಪ್ರಾಸ್ಪರಸ್​ ಪೌಡರ್ ನೀಡುತ್ತಾನೆ. ಇದಕ್ಕೆ ಬದಲಾಗಿ ಯಾಸೀನ್​ ಟೈಂ ರಿಲೇ ಸರ್ಕಿಟ್​ವೊಂದನ್ನ ಶಾರೀಖ್​ಗೆ ನೀಡುತ್ತಾನೆ. ಇದಾದ ಬಳಿಕ ಶಾರೀಖ್ ಬೆಂಗಳೂರುಗೆ ತೆರಳಿದ್ದ ಇನ್ನೂ ಇವೆಲ್ಲದರ ನಡುವೆ ಶಿವಮೊಗ್ಗದ ತುಂಗಾ ತೀರದಲ್ಲಿ ಟ್ರಯಲ್ ಬ್ಲಾಸ್ಟ್ ನಡೆದಿತ್ತು. ಇದು ಸಹ ಶಾರೀಖ್​ ತಂಡದ ಮುಖ್ಯಸ್ಥ ಹೇಳಿದ್ದ ಕಾರಣಕ್ಕೆ . ಈ ಟ್ರಯಲ್​ನಲ್ಲಿ ಐಇಡಿಯನ್ನ ಬಳಸಲಾಗಿತ್ತು. ಈ ಟ್ರಯಲ್​ ಬ್ಲಾಸ್ಟ್​ ಗೆ ಕಾರಣಗಳು ಇದ್ದವು. 

 

ತುಂಗಾ ತೀರದಲ್ಲಿ ಟ್ರಯಲ್​ ಬ್ಲಾಸ್ಟ್

 

ಕಾರಣ 1: ಆರೋಪಿಗಳೇ ತಯಾರಿಸಿದ ಐಇಡಿ ಸಮರ್ಪಕವಾಗಿ ಕೆಲಸ ಮಾಡುತ್ತಿದೆಯಾ ಎಂದು ನೋಡುವ ಸಲುವಾಗಿ ಬ್ಲಾಸ್ಟ್​ ಮಾಡಿದ್ದರು. ಟ್ರಯಲ್​ ಬ್ಲಾಸ್ಟ್ ಮೂಲಕ ಐಇಡಿಯ ಸಾಮರ್ಥ್ಯವನ್ನ ಪರೀಕ್ಷಿಸಿದ್ದರು. 

 

ಕಾರಣ 2 : ಈ ಟ್ರಯಲ್ ಬ್ಲಾಸ್ಟ್​ ನ ಮೂಲಕ ಈ ಆರೋಪಿಗಳ ತಂಡ ಸೇರಿದ್ದವರನ್ನ ತಮ್ಮ ವಿಚಾರದಲ್ಲಿ ಇನ್ನಷ್ಟು ಕಾನ್ಫಿಡೆನ್ಸ್​ ತುಂಬಲು ಪ್ರಯತ್ನಿಸಿದ್ದರು. ಈ ವಿಡಿಯೋವನ್ನ ಸೋಶಿಯಲ್ ಮೀಡಿಯಾ ಮೂಲಕ ಅಪ್​ಲೋಡ್ ಮಾಡುವ ಮೂಲಕ ತಮ್ಮ ಕೃತ್ಯದ ಬಗ್ಗೆ ಸಾರಲು ಮುಂದಾಗಿದ್ದರು. 

 

ಕಾರಣ 3 : ವಿಐಪಿ ಹಾಗೂ ವಿವಿಐಪಿಗಳ ಮೇಲೆ ತೋಳದ ದಾಳಿ(ಏಕಾಂಗಿಯಾಗಿ ಇರುವ ವಸ್ತುಗಳು ವಾಹನಗಳನ್ನ ಬಳಸಿ ದಾಳಿ ನಡೆಸುವ ಭಯೋತ್ಪಾದನಾ ಕೃತ್ಯ!) ನಡೆಸುವ ಉದ್ದೇಶಕ್ಕೆ ತಯಾರಿ ನಡೆಸಲು ಮುಂದಾಗಿದ್ದರು. 

 

ತೋಳದ ದಾಳಿ

 

ಎನ್​ಐಎ ತನ್ನ ಚಾರ್ಜ್​ಶೀಟ್​​ ನಲ್ಲಿ ಟ್ರಯಲ್​ ಬಾಸ್ಟ್​ ನಡೆಸಲು ಆರೋಪಿಗಳು ಉದ್ದೇಶಿಸಿದ ಈ ಮೂರು ಕಾರಣಗಳನ್ನ ತಿಳಿಸಿರುವುದರ ಜೊತೆ ಜೊತೆಗೆ  ತೋಳದ ದಾಳಿ ಮಾದರಿ ಅಟ್ಯಾಕ್ ಮಾಡುವ ಸಾಧ್ಯತೆ ಇತ್ತು ಎಂದು ಹೇಳಿದೆ. ಇದು ಆತಂಕಕಾರಿ ಸಂಗತಿಯಾಗಿದೆ. 



ಇನ್ನೂ ಶಿವಮೊಗ್ಗದಲ್ಲಿ ನಡೆದಿದ್ದ ಟ್ರಯಲ್ ಬ್ಲಾಸ್ಟ್​ಗೆ ಶಾರೀಖ್​ ರಾ ಮೆಟಿರಿಯಲ್ ಸಪ್ಲೆ ಮಾಡಿದ್ದರೆ, ಯಾಸಿನ್​ ಬಾಂಬ್​ನ್ನ ಅಸಂಬಲ್ ಮಾಡಿದ್ದ , ಅಲ್ಲದೆ ಅದಕ್ಕೆ ಟೈಮರ್ ಫಿಕ್ಸ್ ಮಾಡಿದ್ದ. ಈತನ ಬಂಧನದ ಬೆನ್ನಲ್ಲೆ ಶಾರೀಖ್​ ಅಂಡರ್​ ಗ್ರೌಂಡ್​​ಗೆ ತೆರಳಿದ್ದ 

 

ಪ್ರಕರಣದಲ್ಲಿ ಯಾಸೀನ್​ ಪೊಲೀಸರಿಗೆ ಇಡೀ ಕೃತ್ಯದ ರೂಪುರೇಷೆ, ಕಾರಣ ಹಾಗೂ ಉದ್ದೇಶಗಳನ್ನ ಸ್ಪಷ್ಟವಾಗಿ ತಿಳಿಸಿದ್ದ. ಅಲ್ಲದೆ 2047 ರಲ್ಲಿ Islamic Caliphate ನ್ನ ಸ್ಥಾಪಿಸುವ ಗುರಿ ಹೊಂದಿದ್ದ. 



ಮೈಸೂರು ಜಿಲ್ಲೆ 

 

ಆಗಸ್ಟ್ ಕೊನೆವಾರದಲ್ಲಿ ಎಸ್ಕೇಪ್ ಆಧ ಶಾರೀಖ್​ ಮೈಸೂರಿಗೆ ಹೋಗಿ ಫೇಕ್ ಆಧಾರ್​ ಕಾರ್ಡ್​ ನೀಡಿ ವಿವಿಧ ಕಡೆಗಳಲ್ಲಿ ವಾಸವಿದ್ದ ಆತ ಅಲ್ಲಿ ಕುಕ್ಕರ್ ಬಾಂಬ್ ತಯಾರಿಸಿಕೊಂಡು ಮಂಗಳೂರಿಗೆ ಬಂದಿಳಿದಿದ್ದ. ಅಲ್ಲಿ ನಡೆದ ಘಟನೆಯ ವಿವರ ನಿಮಗೆಲ್ಲಾ ಗೊತ್ತೆ ಇದೆ. ಇದಿಷ್ಟು ಮಂಗಳೂರು ಹಾಗೂ ಶಿವಮೊಗ್ಗ ಟ್ರಯಲ್​ ಬ್ಲಾಸ್ಟ್​ಗೆ ಇರುವ ಲಿಂಕ್​.. ಈ ಬಗ್ಗೆ ಎನ್​ಐಎನ ಜಾರ್ಜ್ ಶೀಟ್​ನಲ್ಲಿದ್ದಂತೆ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.