ತೀರ್ಥಹಳ್ಳಿಯಲ್ಲಿ ವೈರಲ್ ಆಗುತ್ತಿದೆ ಮತ್ತೊಂದು ವಿಡಿಯೋ! ರಾಜಕೀಯ ಮುಖಂಡರೊಬ್ಬರ ಆ ದೃಶ್ಯ ವೈರಲ್!

Malenadu Today

KARNATAKA NEWS/ ONLINE / Malenadu today/ Sep 14, 2023 SHIVAMOGGA NEWS  

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯಲ್ಲಿ ಮತ್ತೊಂದು ಅಶ್ಲೀಲ ವಿಡಿಯೋ ವೈರಲ್ ಆಗಿದೆ. ತಾಲ್ಲೂಕಿನಲ್ಲಿ ಇತ್ತೀಚೆಗಷ್ಟೆ ಅಶ್ಲೀಲ ವಿಡಿಯೋಗಳು ಹರಿದಾಡಿದ್ದು, ಆ ಸಂಬಂಧ  ಕೇಸ್​ ಗಳು ಸಹ ದಾಖಲಾಗಿದ್ದವು. ಆನಂತರ ಹನಿಟ್ರ್ಯಾಪ್ ಸಂಬಂಧ ಪ್ರಕರಣವೊಂದು ದಾಖಲಾಗಿತ್ತು. ಈ ಪ್ರಕರಣ ಹೈಪ್ರೊಫೈಲ್ ಕೇಸ್ ಆಗಿ ಮಾರ್ಪಟ್ಟಿತ್ತು. ಇವೆಲ್ಲದರ ಬೆನ್ನಲ್ಲೆ ಮತ್ತೊಂದು ಅಶ್ಲೀಲ ವಿಡಿಯೋ ಹೊರಬಿದ್ದಿದೆ. 

ತೀರ್ಥಹಳ್ಳಿ ತಾಲ್ಲೂಕಿನಲ್ಲಿನ ಹಿರಿಯ ವ್ಯಕ್ತಿಯೊಬ್ಬರ ವಿಡಿಯೋ ಇದಾಗಿದ್ದು, ಸದ್ಯ ಸೋಶಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಲಾಡ್ಜ್​ ರೀತಿಯಲ್ಲಿ ಕಾಣುವ ರೂಂನಲ್ಲಿ ನಡೆದ ಅಶ್ಲೀಲತೆಯ ವಿಡಿಯೋ ಇದಾಗಿದೆ. ದೃಶ್ಯದಲ್ಲಿ ಇರುವ ವ್ಯಕ್ತಿಯು ರಾಜಕೀಯ ಮುಖಂಡರೊಬ್ಬರ ಆಪ್ತ ವಲಯದಲ್ಲಿ ಇರುವವರು ಎಂದು ಜನರು ಮಾತನಾಡಿಕೊಳ್ತಿದ್ದಾರೆ. 

ತೀರ್ಥಹಳ್ಳಿ ತಾಲ್ಲೂಕಿನಲ್ಲಿ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈ ಹಿಂದೆ ಹಲವಾರು ಪ್ರಕರಣಗಳು ಹೊರಬಿದ್ದಿದ್ದವು. ಆನಂತರ ಆಪ್ರಾಪ್ತಯರನ್ನು ದುರ್ಬಳಕೆ ಮಾಡಿಕೊಂಡ ಆರೋಪವೊಂದು ಕೇಳಿಬಂದಿತ್ತಷ್ಟೆ ಅಲ್ಲದೆ ಕೆಲವು ವಿಡಿಯೋಗಳು ವೈರಲ್ ಆಗಿದ್ದವು. ಈ ಸಂಬಂಧ ಯುವಕನೊಬ್ಬ ಅರೆಸ್ಟ್ ಆಗಿದ್ದ. ತದನಂತರ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವುದರ ಬಗ್ಗೆ ದೂರು ದಾಖಲಾಗಿತ್ತು. ಮೇಲಾಗಿ ಈ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದೆಲ್ಲದ ಬಳಿಕ ಹನಿಟ್ರ್ಯಾಪ್ ಟೀಂನದ್ದು ತೀರ್ಥಹಳ್ಳಿಯಲ್ಲಿ ದೊಡ್ಡಮಟ್ಟದ ಸುದ್ದಿ ಮಾಡಿತ್ತು. 

ಇದೀಗ ವಯಸ್ಸಾದ ವ್ಯಕ್ತಿಯೊಬ್ಬರ ವಿಡಿಯೋ ವೈರಲ್ ಆಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅಲ್ಲದೆ ತೀರ್ಥಹಳ್ಳಿಯ ಜೋರು ಚರ್ಚೆಗೆ ಗ್ರಾಸವಾಗಿದೆ. ಇಂತಹ ಅಸಹ್ಯಕರ ವಿಡಿಯೋಗಳು ಹಂಚಿಕೆಯಾಗುವುದು ತಾಲ್ಲೂಕಿನ ಘನತೆಗೆ ದಕ್ಕೆ ತರುತ್ತಿದೆ. ಹೀಗಾಗಿ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂಬ ಅಭಿಪ್ರಾಯ ತೀರ್ಥಹಳ್ಳಿಯಲ್ಲಿ ಕೇಳಿಬರುತ್ತಿದೆ 


ಇನ್ನಷ್ಟು ಸುದ್ದಿಗಳು 

 


 

Share This Article