ಶಿವಮೊಗ್ಗ ಪೊಲೀಸ್‌ | ದಿಢೀರ್‌ ರೇಡ್‌ | 19 ಜನ ಅರೆಸ್ಟ್‌ | ಒಂದು ಕಾಲು ಲಕ್ಷ ಸೀಜ್|‌ ದೊಡ್ಡಪೇಟೆಯಲ್ಲಿ ಕೇಸ್‌

Shivamogga Police | Sudden Raid | 19 arrested | One and a half lakh seized | Case in Doddapet

ಶಿವಮೊಗ್ಗ ಪೊಲೀಸ್‌  | ದಿಢೀರ್‌ ರೇಡ್‌ | 19 ಜನ ಅರೆಸ್ಟ್‌  |  ಒಂದು ಕಾಲು ಲಕ್ಷ ಸೀಜ್|‌  ದೊಡ್ಡಪೇಟೆಯಲ್ಲಿ ಕೇಸ್‌
Shivamogga Police

Shivamogga Apr 17, 2024  ಶಿವಮೊಗ್ಗದಲ್ಲಿ ಚುನಾವಣೆ ಡ್ಯೂಟಿ ಹಾಗೂ ಬಂದೋಬಸ್ತ್‌ ಓಡಾಟದ ನಡುವೆ ಶಿವಮೊಗ್ಗ ಪೊಲೀಸರು ಇಸ್ಪೀಟ್‌ ಕ್ಲಬ್‌ ಮೇಲೆ ರೇಡ್‌ ನಡೆಸಿದ್ದಾರೆ. ಶಿವಮೊಗ್ಗ ದೊಡ್ಡಪೇಟೆ ಪೊಲೀಸ್‌ ಸ್ಟೇಷನ್‌ ಲಿಮಿಟ್ಸ್‌ ನಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ಪೊಲೀಸ್‌ ಇಲಾಖೆ ಪ್ರಕಟಣೆಯನ್ನು ಸಹ ನೀಡಿದೆ.

ಪತ್ರಿಕಾ ಪ್ರಕಟಣೆ

ದಿನಾಂಕ: 16-04-2024 ರಂದು ಸಂಜೆ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಬಿ.ಹೆಚ್ ರಸ್ತೆಯ ಹರ್ಷ ಆರ್ಕಿಡ್ ನ 2ನೇ ಮಹಡಿಯಲ್ಲಿರುವ ಮಲೆನಾಡು ಮರ್ಚೆಂಟ್ಸ್ ಮನೋರಂಜನಾ ಕೇಂದ್ರದ ಮೇಲೆ ರೇಡ್‌ ನಡೆಸಲಾಗಿದೆ. 

ಅಕ್ರಮವಾಗಿ ಹಣವನ್ನು ಪಣವಾಗಿಟ್ಟು ಅಂದರ್ ಬಾಹರ್ ಇಸ್ಪೀಟು ಜೂಜಾಟ ಆಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಅಡಿಯಲ್ಲಿ ರೇಡ್‌ ನಡೆಸಲಾಗಿದೆ.  ಶಿವಮೊಗ್ಗ ಎ ಉಪ ವಿಭಾಗದ ಡಿವೈಎಸ್‌ಪಿ ಬಾಬು ಅಂಜನಪ್ಪ ಹಾಗೂ ಪ್ರಕಾಶ್ ಪೊಲೀಸ್ ಉಪಾಧೀಕ್ಷಕರು, ಡಿಎಆರ್ ಶಿವಮೊಗ್ಗ ರವರ ನೇತೃತ್ವದಲ್ಲಿ ತಿಪ್ಪೇಸ್ವಾಮಿ ಪಿಐ ಸಿಇಎನ್ ಪೊಲೀಸ್ ಠಾಣೆ, ಶ್ರೀಶೈಲ ಪಟ್ಟಣ ಶೆಟ್ಟಿ ಪಿಎಸ್ಐ ಡಿಸಿಆರ್. ಬಿ ಶಿವಮೊಗ್ಗ ಮತ್ತು ಸಿಬ್ಬಂಧಿಗಳನ್ನೊಳಗೊಂಡ ತಂಡ ಈ ದಾಳಿ ನಡೆಸಿದೆ. 

ದಾಳಿ ವೇಳೆ 19 ಜನ ಆರೋಪಿತರನ್ನು ದಸ್ತಗಿರಿ ಮಾಡಲಾಗಿದ್ದು,  ಜೂಜಾಟದಲ್ಲಿ ಪಣವಾಗಿಟ್ಟಿದ್ದ ಒಟ್ಟು 1,25,850/- ರೂಪಾಯಿ ನಗದು ಹಣ, ಟೋಕನ್‌ಗಳು ಮತ್ತು ಇಸ್ಪೀಟು ಎಲೆಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ. ಆರೋಪಿತರ ವಿರುದ್ಧ ದೊಡ್ಡಪೇಟೆ ಪೊಲೀಸ್ ಸ್ಟೇಷನ್‌ ನಲ್ಲಿ  79, 80 ಕೆ.ಪಿ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ