ಸಾಗರ ಪೊಲೀಸರಿಂದ ಶಿವಮೊಗ್ಗ ಟಿಪ್ಪು ನಗರ ಬಾಯಿಜಾನ್ ಅರೆಸ್ಟ್ ! ಈತನ ಬಳಿ ಸಿಕ್ಕಿದ್ದು ಆರು ಲಕ್ಷ ಮೌಲ್ಯದ ಚಿನ್ನ!

 SHIVAMOGGA |  Dec 20, 2023  |   ಶಿವಮೊಗ್ಗ ಜಿಲ್ಲೆ  ಸಾಗರ ಗ್ರಾಮಾಂತರ ಪೊಲೀಸ್ ಠಾಣೆ, ಸಾಗರ ಪೇಟೆ ಪೊಲೀಸ್ ಠಾಣೆ ಮತ್ತು ಆನಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇತ್ತೀಚೆಗೆ ಹಲವು ಮನೆ ಕಳ್ಳತನ ಪ್ರಕರಣಗಳು ವರದಿಯಾಗಿದ್ದವು.  ಈ ಸಂಬಂಧ  ಮಹಾಬಲೇಶ್ವರ ಪಿಐ ಸಾಗರ ಗ್ರಾಮಾಂತರ ಠಾಣೆ,   ಸುಜಾತ ಪಿಎಸ್ಐ ಸಾಗರ ಟೌನ್ ಠಾಣೆ ಮತ್ತು ಯುವರಾಜ್ ಪಿಎಸ್ಐ ಆನಂದಪುರ ಪೊಲೀಸ್ ಠಾಣೆ ರವರ ನೇತೃತ್ವದಲ್ಲಿ ಸಾಗರ ಗ್ರಾಮಾಂತರ ಠಾಣೆಯ ಸಿಬ್ಬಂದಿಗಳಾದ ಹೆಚ್‌ಸಿ ಸನಾವುಲ್ಲಾ, ಷೇಖ್ ಫೈರೋಜ್ ಅಹಮದ್ ಮತ್ತು ಪಿಸಿ ರವಿಕುಮಾರ್ ರವರುಗಳನ್ನು ಒಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಲಾಗಿತ್ತು. 

ಸದ್ಯ ಈ ತಂಡ  ದಿನಾಂಕ:-18-12-2023 ರಂದು ಆರೋಪಿಯಾದ ತೌಸಿಪ್ @ ಬಾಯಿಜಾನ್, 25 ವರ್ಷ, ಟಿಪ್ಪುನಗರ,  ಶಿವಮೊಗ್ಗ ಈತನನ್ನು ದಸ್ತಗಿರಿ ಮಾಡಿ  ಆರೋಪಿತನಿಂದ 8 ಮನೆಗಳ್ಳತನ ಪ್ರಕರಣವನ್ನು ಭೇದಿಸಿದ್ದಾರೆ. 

READ : ಹುಲಿಉಗುರು ಸೇರಿ ವನ್ಯಜೀವಿಗಳ ವಸ್ತುಗಳಿದ್ರೆ ವಾಪಸ್ ನೀಡಲು ಮೂರು ತಿಂಗಳ ಕಾಲವಾಕಾಶ!? ಏನಂದ್ರು ಈಶ್ವರ್ ಖಂಡ್ರೆ

ಸಾಗರ ಗ್ರಾಮಾಂತರ ಪೊಲೀಸ್ ಸ್ಟೇಷನ್

ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯ 1) ಗುನ್ನೆ ಸಂಖ್ಯೆ 217/2023 ರ ಪಿರ್ಯಾದಿ  ಗಗನ್ ವಾಸ ಕರ್ಕಿಕೊಪ್ಪ 2) ಗುನ್ನೆ ಸಂಖ್ಯೆ 231/2023 ರ ಪಿರ್ಯಾದಿ  ಮತಿ ವಾಸ ಗೀಜಗಾರು 3) ಗುನ್ನೆ ಸಂಖ್ಯೆ 235/2023 ರ ಪಿರ್ಯಾದಿ   ರಾಮಚಂದ್ರ ವಾಸ ತೊರಗೋಡು ಶಿರುವಾಳ 4) ಗುನ್ನೆ ಸಂಖ್ಯೆ 236/2023 ರ ಪಿರ್ಯಾದಿ  ಮತಿ ರೇಣುಕಮ್ಮ ವಾಸ ಬಳಸಗೋಡು 

ಸಾಗರ ಪೇಟೆ ಪೊಲೀಸ್ ಸ್ಟೇಷನ್

ಸಾಗರ ಪೇಟೆ ಪೊಲೀಸ್ ಠಾಣೆಯ 5) ಗುನ್ನೆ ಸಂಖ್ಯೆ 221/2022 ರ  ಪಿರ್ಯಾದಿ   ಸಂತೋಷ್ ವಾಸ ಧರ್ಮ  ಲೇ ಔಟ್ ಗೋಪಾಲಗೌಡ ನಗರ, 6) ಗುನ್ನೆ ಸಂಖ್ಯೆ 222/2022 ರ ಪಿರ್ಯಾದಿ   ರಂಗನಾಥ ವಾಸ ಧರ್ಮ  ಲೇ ಔಟ್ ಗೋಪಾಲಗೌಡ ನಗರ,  7) ಗುನ್ನೆ ಸಂಖ್ಯೆ 223/2022 ರ ಪಿರ್ಯಾದಿ ಮಧು ವಾಸ ಕಂಬಳಿಕೊಪ್ಪ 

ಆನಂದಪುರ ಪೊಲೀಸ್ ಸ್ಟೇಷನ್

ಆನಂದಪುರ ಪೊಲೀಸ್ ಠಾಣೆಯ 8) ಗುನ್ನೆ ಸಂಖ್ಯೆ 143/2023 ರ ಪಿರ್ಯಾದಿ ತೀರ್ಥ ವಾಸ ಬೋಳನಕಟ್ಟೆ ರವರುಗಳು ನೀಡಿದ ದೂರಿನ ಪ್ರಕರಣಗಳನ್ನು ಇತ್ಯರ್ಥಗೊಳಿಸಿದ್ದಾರೆ. 

ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯ 4, ಸಾಗರ ಟೌನ್ ಪೊಲೀಸ್ ಠಾಣೆಯ 3 ಮತ್ತು ಆನಂದಪುರ  ಪೊಲೀಸ್ ಠಾಣೆಯ 1 ಪ್ರಕರಣ ಸೇರಿ ಒಟ್ಟು 8 ಮನೆಗಳ್ಳತನ ಪ್ರಕರಣಗಳಿಗೆ ಸಂಬಂಧಿಸಿದ ಅಂದಾಜು ಮೌಲ್ಯ 5,70,000/- ರೂ ಗಳ 100 ಗ್ರಾಂ ತೂಕದ ಬಂಗಾರದ ಆಭರಣ ಮತ್ತು ಅಂದಾಜು ಮೌಲ್ಯ 62,400/- ರೂಗಳ 1 ಕೆ.ಜಿ ಬೆಳ್ಳಿ ಆಭರಣಗಳು ಸೇರಿ ಒಟ್ಟು 6,32,400/-  ರೂ ಮೌಲ್ಯದ ಮಾಲನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ.

 

Leave a Comment