ಹುಲಿಉಗುರು ಸೇರಿ ವನ್ಯಜೀವಿಗಳ ವಸ್ತುಗಳಿದ್ರೆ ವಾಪಸ್ ನೀಡಲು ಮೂರು ತಿಂಗಳ ಕಾಲವಾಕಾಶ!? ಏನಂದ್ರು ಈಶ್ವರ್ ಖಂಡ್ರೆ

ಹಂಚಿಕೊಳ್ಳಿ
WhatsApp Facebook X Telegram

 SHIVAMOGGA |  Dec 20, 2023  |    ಇತ್ತೀಚೆಗೆ ಹುಲಿ ಉಗುರು ಸೇರಿದಂತೆ ವನ್ಯಜೀವಿಯ ಅವಶೇಷಗಳನ್ನ ಸಂಗ್ರಹಿಸಿಟ್ಟುಕೊಂಡಿರುವ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು ಅರಣ್ಯ ಇಲಾಖೆ ಸಿಕ್ಕಸಿಕ್ಕವರ ಮೇಲೆ ಕೇಸ್ ಜಡಿದು ಸ್ಟಾರ್​ಗಳ ಮೇಲೆ ಸಾಪ್ಟ್​ ಕಾರ್ನರ್ ತೋರಿತ್ತು ಎಂದು ಜನರು ಮಾತನಾಡಿಕೊಂಡಿದ್ದರು. 

ಈ ನಡುವೆ  ತಮ್ಮ ಬಳಿ ಹೊಂದಿರುವ ಹುಲಿ ಉಗುರು, ಆನೆ ದಂತ ಮುಂತಾದ ವನ್ಯ ಜೀವಿಗಳ ಅಂಗಾಂಗಳನ್ನು ಮೂರು ತಿಂಗಳಲ್ಲಿ ಸರ್ಕಾರಕ್ಕೆ ವಾಪಸು ನೀಡಲು ಅವಕಾಶ ಕಲ್ಪಿಸಲು ಸರ್ಕಾರವೇ ಮುಂದಾಗಿದೆ. ಈ ಸಂಬಂಧ  ಪ್ರಸ್ತಾವನೆಯನ್ನು ಸಚಿವ ಸಂಪುಟದ ಮುಂದೆ ಮಂಡಿಸಿ ಅನುಮೋದನೆ ಪಡೆಯಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

READ : ರಾಜ್ಯ ಪೊಲೀಸರಿಗೆ ಗುಡ್ ನ್ಯೂಸ್ ಕೊಟ್ಟ ಗೃಹಸಚಿವ ಜಿ.ಪರಮೇಶ್ವರ್!

ವಿಧಾನಸೌಧದಲ್ಲಿ ಮಾತನಾಡಿದ ಅವರು ಜನರು ಗೊತ್ತಿದ್ದೋ ಅಥವಾ ಅರಿವಿಲ್ಲದೇ ಹೊಂದಿರುವ ಅಂಗಾಂಗಳನ್ನು ಸರ್ಕಾರದ ಮೂಲಕ ವಾಪಸ್ ಪಡೆದು ನಾಶಪಡಿಸಲಾಗುವುದು. ಮೈಸೂರಿನ ಅರಣ್ಯ ಸಂಗ್ರಹಾಲಯದಲ್ಲಿ ಇರುವ ವನ್ಯ ಜೀವಿಗಳ ಅಂಗಾಂಗಳನ್ನು ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ನಾಶಪಡಿ ಸಲು ಚಿಂತನೆ ನಡೆಸಲಾಗಿದೆ ಎಂದರು.

ಇನ್ನೂ ಇದೇ ವೇಳೇ  ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣದ ವೇಳೆ ಭೂಮಿ ನೀಡಿದ ಕುಟುಂಬ ಗಳಿಗೆ ಅರಣ್ಯ ಜಮೀನು ನೀಡ ಲಾಗಿದೆ. ಈ ವಿಷಯ ಹೈಕೋರ್ಟ್‌ನಲ್ಲಿದೆ. ಆದರೆ ಅರಣ್ಯ ಜಮೀನು ನೀಡುವ ವಿಷಯ ದಲ್ಲಿ ಸರ್ಕಾರ ಸಂತ್ರಸ್ತರ ಪರವಾಗಿದ್ದು, ಈ ಬಗ್ಗೆ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದೆ. ಸುಪ್ರೀಂ ಕೋರ್ಟ್‌ನಲ್ಲಿಯೂ ಸಹಸಂತ್ರಸ್ತರ ಪರ ಪ್ರಮಾಣ ಪತ್ರ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor