ರಾಜ್ಯ ಪೊಲೀಸರಿಗೆ ಗುಡ್ ನ್ಯೂಸ್ ಕೊಟ್ಟ ಗೃಹಸಚಿವ ಜಿ.ಪರಮೇಶ್ವರ್!

ಹಂಚಿಕೊಳ್ಳಿ
WhatsApp Facebook X Telegram

CHIKKAMAGALURU  |  Dec 20, 2023  | ರಾಜ್ಯ ಪೊಲೀಸ್ ಸಿಬ್ಬಂಧಿಗಳಿಗೆ ಗೃಹಸಚಿವ  ಜಿ ಪರಮೇಶ್ವರ್ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಪೊಲೀಸ್ ಸಿಬ್ಬಂಧಿ ಇನ್ನೂ ಸಹ  ಬ್ರಿಟಿಷರ ಕಾಲದ ವಸತಿ ಗೃಹಗಳಲ್ಲಿ ವಾಸವಿದ್ದಾರೆ. ಹಾಗಾಗಿ ಪ್ರತಿಯೊಬ್ಬ ಪೊಲೀಸರಿಗೆ ಮನೆಗಳನ್ನ ಒದಗಿಸುವುದು ನಮ್ಮ ಗುರಿ ಎಂದಿದ್ದಾರೆ. 

ನಿನ್ನ ಚಿಕ್ಕಮಗಳೂರು ನಲ್ಲಿ ಮಾತನಾಡಿದ ಅವರು ಸುಮಾರು 47 ಸಾವಿರ ಮನೆಯನ್ನು ಈಗಾಗಲೇ ರಾಜ್ಯದಲ್ಲಿ ನಿರ್ಮಾಣ ಮಾಡಲಾಗಿದೆ. ಈ ಯೋಜನೆ ನಿರಂತರವಾಗಿ ಜಾರಿಯಲ್ಲಿರುತ್ತದೆ. ಎಲ್ಲಾ ಪೊಲೀಸರಿಗೆ ಮನೆಗಳನ್ನು ನೀಡುವುದು ಇದರ ಉದ್ದೇಶವಾಗಿದೆ ಎಂದಿದ್ದಾರೆ. 

READ : ಚಡ್ಡಿ ಚೇಬಿಗೆ ಕೈ ಹಾಕಿದ ಕಳ್ಳ! ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಹೊಸಪೇಟೆ ಕಡೆಯ ಬಸ್ ಹತ್ತಿದವನಿಗೆ ಶಾಕ್

 ಶೇ. 100 ರಷ್ಟು ಪೊಲೀಸರಿಗೆ ಮನೆಗಳನ್ನ ಒದಗಿಸಬೇಕಿದೆ. ಈ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಅವರು 3 ಸಾವಿರ ಕೋಟಿ ರುಪಾಯಿ  ಅನುದಾನ ನೀಡಿದ್ದಾರೆ ಎಂದರು.  ಪೊಲೀಸ್ ವಸತಿ ಯೋಜನೆ ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಬಾರದು. ಅದು, ಗ್ರಾಮಾಂತರ ಪ್ರದೇಶಕ್ಕೆ ವಿಸ್ತರಿಸಬೇಕು ಎಂಬುದು ನಮ್ಮ ಅಭಿಲಾಷೆಯಾಗಿದೆ ಎಂದಿದ್ದಾರೆ 

 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor