ಚಡ್ಡಿ ಜೇಬಿಗೆ ಕೈ ಹಾಕಿದ ಕಳ್ಳ! ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಹೊಸಪೇಟೆ ಕಡೆಯ ಬಸ್ ಹತ್ತಿದವನಿಗೆ ಶಾಕ್

SHIVAMOGGA |  Dec 19, 2023  | ಶಿವಮೊಗ್ಗ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದಲ್ಲಿ ಮತ್ತೊಂದು ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರಿದ್ದು ಕಳ್ಳತನವನ್ನ ನಿಲ್ಲಿಸಲಾಗದೇ ಇರುವುದು ದೊಡ್ಡಪೇಟೆ ಪೊಲೀಸ್ ಲಿಮಿಟ್ಸ್​ನಲ್ಲಿ  ಶಿವಮೊಗ್ಗದ ಮಾನ ಹರಾಜಾಗುತ್ತಿದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. 

ಇದೀಗ ಕೂಲಿ ಕಾರ್ಮಿಕನೊಬ್ಬ  ಸಾಲದ ಕಂತು ಕಟ್ಟಲು ಮಕ್ಕಳು ಕೊಟ್ಟ ಹಣವನ್ನು ತೆಗೆದುಕೊಂಡು ಹೋಗುತ್ತಿದ್ದಾಗ, ಆತನ ಜೇಬಿಗೆ ಕೈ ಹಾಕಿ ಕಳ್ಳರು ಹಣ ಎಗರಿಸಿದ್ದಾರೆ. ಶಿವಮೊಗ್ಗ ಬಸ್​ ನಿಲ್ದಾಣದಲ್ಲಿ ಕಳ್ಳತನದ ಗ್ಯಾಂಗ್​ವೊಂದು ಕೆಲಸ ಮಾಡುತ್ತಿದೆ ಎಂಬ ಆರೋಪವಿದೆ. ಆದರೆ ಪೊಲೀಸ್ ಇಲಾಖೆ, ಕೆ.ಎಸ್​​.ಆರ್​ಟಿಸಿ ಸಿಬ್ಬಂದಿ ಈ ಬಗ್ಗೆ ಗಮನಹರಿಸ್ತಿಲ್ಲವಂತೆ. ಇದರ ಪರಿಣಾಮ ಎಂಬಂ ವಿಜಯನಗರ ಜಿಲ್ಲೆ ಹರಪನಹಳ್ಳಿ ಆಲೂರು ಚೌಡಪ್ಪ ಎಂಬವರು ತಮ್ಮ ದುಡಿಮೆಯ ದುಡ್ಡನ್ನ ಕಳೆದುಕೊಂಡಿದ್ದಾರೆ. 

READ : ಹೆದ್ದಾರಿ ಅಗಲೀಕರಣದ ವೇಳೆ ಮಣ್ಣಿನಡಿ ಸಿಲುಕಿ ಕಾರ್ಮಿಕನ ದುರಂತ ಸಾವು!/ ಅಬಕಾರಿ ಅಧಿಕಾರಿಗಳಿಂದ ಕಳ್ಳಭಟ್ಟಿ ಜಪ್ತಿ

ಬಾಳೆ ಹೊನ್ನೂರು ಕಾಪಿ ತೋಟದಲ್ಲ ಚೌಡಪ್ಪರವರ ಮಕ್ಕಳು ಕೆಲಸ ಮಾಡುತ್ತಿದ್ದಾರೆ. ಅಲ್ಲಿಗೆ ಹೋಗಿದ್ದ ಚೌಡಪ್ಪರವರು ಬಳಿಕ ವಾಪಸ್ ವಿಜಯ ನಗರ ಹೋಗಲು ಶಿವಮೊಗ್ಗ ಬಸ್​ ನಿಲ್ದಾಣಕ್ಕೆ ಬಂದಿದ್ಧಾರೆ. ಅಲ್ಲಿ ಅವರ ಚಡ್ಡಿ ಜೇಬಿಗೆ ಕೈ ಹಾಕಿ ಯಾರೋ ದುಡ್ಡು ಎಗರಿಸಿದ್ದಾರೆ. ಬರೋಬ್ಬರಿ 37 ಸಾವಿರ ರೂಪಾಯಿ ಕಳ್ಳತನವಾಗಿದೆ. ಈ ಸಂಬಂಧ ದೂರು ದಾಖಲಾಗಿದೆಯಷ್ಟೆ. ತನಿಖೆ ಇನ್ನಷ್ಟೆ ಆಗಬೇಕಿದೆ.   

 

Leave a Comment