ಚೋರರಿಗೊಂದು ಕಾಲ, ಶೂರರಿಗೊಂದು ಕಾಲ! ಬೇಳೂರು ಗೋಪಾಲಕೃಷ್ಣರ ಹಾಡು, ಕುಣಿತ ಸಂಭ್ರಮ ಏನನ್ನೋ ಹೇಳುತ್ತಿದೆ!? ಏನು ನೋಡಿ!

Here is a video of MLA Belur Gopalakrishna who danced in the Ganesha procession held in Hosnagar taluk of Shimoga district.ಶಿವಮೊಗ್ಗ ಜಿಲ್ಲೆ ಹೊಸನಗರ ತಾಲ್ಲೂಕಲ್ಲಿ ನಡೆದ ಗಣೇಶ ವಿಸರ್ಜನೆ ಮೆರವಣಿಗೆಯಲ್ಲಿ ಡ್ಯಾನ್ಸ್ ಮಾಡಿದ ಶಾಸಕ ಬೇಳೂರು ಗೋಪಾಲಕೃಷ್ಣರ ವಿಡಿಯೋ ಇಲ್ಲಿದೆ

ಚೋರರಿಗೊಂದು ಕಾಲ, ಶೂರರಿಗೊಂದು ಕಾಲ! ಬೇಳೂರು ಗೋಪಾಲಕೃಷ್ಣರ ಹಾಡು, ಕುಣಿತ ಸಂಭ್ರಮ ಏನನ್ನೋ ಹೇಳುತ್ತಿದೆ!? ಏನು ನೋಡಿ!

KARNATAKA NEWS/ ONLINE / Malenadu today/ Sep 22, 2023 SHIVAMOGGA NEWS’

ಚೌತಿಗೆ ಬಂದ ಗಣಪ, ಇದೀಗ ಮೂರು, ಐದು, ಏಳು ಹೀಗೆ ಬೆಸ ಸಂಖ್ಯೆಯ ದಿನಗಳಿಗೆ ಅನುಗುಣವಾಗಿ ವಾಪಸ್​ ಹೊರಡುತ್ತಿದ್ದಾನೆ. ಗಣೇಶನ ಆಗಮನ ಹಾಗೂ ನಿರ್ಗಮನ ಎರಡು ಕೂಡ ಸಂಭ್ರಮವೇ ಆಗಿರುತ್ತದೆ. ಮಲೆನಾಡಿನಲ್ಲಿ ಈ ಸಂಭ್ರಮದಲ್ಲಿ ರಾಜಕಾರಣವೂ ಸಹ ವಿಶೇಷವಾಗಿ ಸಮ್ಮಿಳಿತಗೊಂಡಿರುತ್ತದೆ. 

ಆಯಾ ಸನ್ನಿವೇಶ, ಆದ ಬದಲಾವಣೆ, ನಡೆದ ಘಟನೆಗಳಿಗೆ ಪೂರಕವಾಗಿ ಗಣೇಶನ ಆರಾಧನೆಯಲ್ಲಿ  ಕುಣಿತ, ಹಾಡು, ಮಾತು , ಸಡಗರಗಳು ಕಂಡುಬರುತ್ತವೆ. ಇದಕ್ಕೆ ಪೂರಕವಾಗಿಯೋ! ಅಥವಾ ಕಾಕತಾಳಿಯವೋ ಎಂಬಂತೆ ಸಾಗರ ಶಾಸಕರು ಗಣಪತಿ ಮೆರವಣಿಗೆಯೊಂದರಲ್ಲಿ ಕುಣಿದು ಸಂಭ್ರಮಿಸಿದ ವಿಡಿಯೋ ಇದೀಗ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. 

ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ  ಹೊಸನನಗರ ತಾಲೂಕಿನ ಆಲಗೆರಿಮಂಡ್ರಿ ಗಣೇಶೋತ್ಸವದಲ್ಲಿ ಭಾಗಿಯಾದ್ದರು. ಗಣೇಶನ ವಿಸರ್ಜನೆಯಲ್ಲಿ ಪಾಲ್ಗೊಂಡ ಅವರು, ಅಲ್ಲಿದ್ದವರ ಜೊತೆಗೆ ಕುಣಿದು ಕುಪ್ಪಳಿಸಿದರು.  ಈ ವೇಳೆ ಅಲ್ಲಿ ಪ್ಲೇ ಆದ ಹಾಡು ಹಾಗೂ ಅದಕ್ಕೆ ಗೋಪಾಲಕೃಷ್ಣರವರು ಕುಣಿದು ತೋರಿದ ರೀತಿ ಸಾಕಷ್ಟು ಕುತೂಹಲ ಮೂಡಿಸ್ತಿದ್ದು, ಜನರ ನಡುವೆ ಇದು ಆಕ್ಚುಲಿ ಚೆನ್ನಾಗಿರೋದು ಎಂಬಂತೆ ಚರ್ಚೆಯಾಗ್ತಿದೆ. 

ಇದು ಹೊಡ್ತಾ ಅಂದರೆ ಮಾತನಾಡಿಕೊಳ್ತಿರುವ ಜನರು ಬೇಳೂರು ಗೋಪಾಲಕೃಷ್ಣರ ವಿಡಿಯೋ ಸುಮ್ಮೆಯಲ್ಲ ಅಂತಾ ಮಾಡಿಕೊಳ್ತಿದ್ದಾರೆ.ಅಂದಹಾಗೆ ಗಣಪತಿ ವಿಸರ್ಜನೆಯ ವೇಳೆಯಲ್ಲಿ ಶಾಸಕರ ಚುನಾವಣಾ ದಿಗ್ವಿಜಯಕ್ಕೆ ಪೂರಕವಾದ ಹಾಡು ಪ್ರಸಾರವಾಗುತ್ತಿತ್ತು. ಇದು ಕಾಕತಾಳೀಯವೂ ಸಹ ಆಗಿತ್ತು. ಮೋಜುಗಾರ ಸೊಗಸುಗಾರ ಸಿನಿಮಾದ ಹಾಡಿನಲ್ಲಿ ಒಳ್ಳೆಯತನ ಒಳ್ಳೆಜನಕ್ಕೆ ಕೇಳೋ ಮೂರ್ಖ ಸೋಲಿಲ್ಲ. ನಮಗೆ ಜಯಬೇರಿ… ನಿಮ್ಮ ಪಾಪದ ಬಿಂದಿಗೆಯಲ್ಲಿ ಹೊಸ ಪಾಪಕ್ಕೆ ಸ್ಥಳವಿಲ್ಲ. ನರಕಕ್ಕೆ ಸವಾರಿ… ಚೋರರಿಗೊಂದು ಕಾಲ, ಶೂರರಿಗೊಂದು ಕಾಲ,, ಸುಳ್ಳಿಗೂ ಒಂದು ಕಾಲ, ಸತ್ಯಕ್ಕೂ ಒಂದು ಕಾಲ ಎಂಬ ಸಾಲು ಬರುತ್ತದೆ. 

ಈ ಸಾಲು ಹಾಗೂ ರಿಮಿಕ್ಸ್​ ಮ್ಯೂಸಿಕ್​ನೊಂದಿಗೆ ಎಫೆಕ್ಟ್​ ಕೊಡುತ್ತಿದ್ದ ಸ್ಪೀಕರ್​ ಸೌಂಡ್​​ಗೆ ಬೇಳೂರು ಗೋಪಾಲಕೃಷ್ಣರ ಅಭಿಮಾನಿಗಳು ಸಹ ಸಿಕ್ಕಾಪಟ್ಟೆ ಕುಣಿದಿದ್ದಾರೆ. ಬೇಳೂರುರವರು ಶೂರರಿಗೊಂದು ಕಾಲ ಎನ್ನುತ್ತಲೆ ಜೈಕಾರ ಹಾಕಿದ ಸ್ಟೈಲ್​ನಲ್ಲಿ ಸ್ಟೆಪ್ ಹಾಕುತ್ತಾರೆ. ಅವರು ಎಂಜಾಯ್​ ಮಾಡಿ ಕುಣಿದ ವಿಡಿಯೋ ಮತ್ತು ಆ ಹಾಡು ಏನನ್ನೋ ಹೇಳುತ್ತಿದೆ? ಯಾರನ್ನೂ ಗುರಿ ಮಾಡುತ್ತಿರಬಹುದು ಎಂದು ನಿಮಗೂ ಅನ್ನಿಸಿದರೆ.. ಅದು ಜಸ್ಟ್ ಕಾಕತಾಳೀಯ ಅಷ್ಟೆ ಇರಬೇಕು…  


ಇನ್ನಷ್ಟು ಸುದ್ದಿಗಳು