ಉಪ್ಪಿನಕಾಯಿ ಕೇಳಲು ಬಂದು ಮನೆಯಾಕೆಯ ಕೆನ್ನೆ ಕಚ್ಚಿದ ಆರೋಪಿ! ದಾಖಲಾಯ್ತು ಕೇಸ್​

A case has been registered in Davanagere in connection with the incident in which a woman was bitten on the cheek by a man who came to ask for pickles

ಉಪ್ಪಿನಕಾಯಿ ಕೇಳಲು ಬಂದು ಮನೆಯಾಕೆಯ ಕೆನ್ನೆ ಕಚ್ಚಿದ ಆರೋಪಿ! ದಾಖಲಾಯ್ತು ಕೇಸ್​

DAVANAGERE |   Dec 6, 2023 | ಉಪ್ಪಿನಕಾಯಿ ಕೇಳುವ ನೆಪದಲ್ಲಿ  ಬಂದ ವ್ಯಕ್ತಿಯೊಬ್ಬ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಸಂಬಂಧ ದೂರೊಂದು ದಾಖಲಾಗಿದ್ದು ಎಫ್ಐಆರ್ ಆಗಿದೆ. 

ಉಪ್ಪಿನಕಾಯಿ ಕೇಳುವ ನೆಪದಲ್ಲಿ

ದಾವಣಗೆರೆ ತಾಲ್ಲೂಕಿನ ಗ್ರಾಮವೊಂದರಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ನಿವಾಸಿಯೊಬ್ಬ ಅದೇ ಗ್ರಾಮದಲ್ಲಿ ವಾಸವಿದ್ದ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

READ : ಪಿಂಗಾರ ಬಾರ್ ಬಳಿ ನಡೆದ ಕೊಲೆ ಪ್ರಕರಣ 20 ತಿಂಗಳಲ್ಲಿ ಇತ್ಯರ್ಥ! ಆರೋಪಿಗೆ ಕೋರ್ಟ್ ಕೊಟ್ಟ ಶಿಕ್ಷೆ ಏನು ಗೊತ್ತಾ?

ಇಲ್ಲಿನ ನಿವಾಸಿಯೊಬ್ಬರು ತಮ್ಮ ಪತಿಯನ್ನ ಕಳೆದುಕೊಂಡ ಬಳಿಕ  ಟೈಲರಿಂಗ್‌ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಇವರ ಮನೆಗೆ ಬಂದ ವ್ಯಕ್ತಿಯೊಬ್ಬ ಉಪ್ಪಿನಕಾಯಿ ಕೆಳಿದ್ದಾರೆ. ಇದಕ್ಕೆ  ಮನೆಯ ಬಾಗಿಲಲ್ಲೇ ಮನೆಯಾಕೆ  ಉಪ್ಪಿನ ಕಾಯಿ ಮಾರುವುದಿಲ್ಲವೆಂದು ಹೇಳಿ, ಒಳಹೋಗಿದ್ದಾರೆ. 

ಈ ವೇಳೆ ಆಕೆಯ ಹಿಂದೆಯೇ ಮನೆ ಒಳಗೆ ನುಗ್ಗಿದ ವ್ಯಕ್ತಿಯು  ಆಕೆಯ ಕೈ ಹಿಡಿದುಕೊಂಡು, ಅನುಚಿತ ವರ್ತನೆ ತೋರಿದ್ದಾನೆ. ಅಲ್ಲದೆ, ಆರೋಪಿಯು ಮಹಿಳೆಯ ಎಡಗಣ್ಣಿನ ಕೆಳಭಾಗಕ್ಕೆ ಕಚ್ಚಿದ್ದಾನೆ. ಈ ವೇಳೆ ಮಹಿಳೆ ಕಿರುಚಿದ್ದಾಳೆ. ಮಹಿಳೆಯ ಚೀರಾಟಕ್ಕೆ ಬೆದರಿ ವ್ಯಕ್ತಿಯು ಅಲ್ಲಿಂದ ಪರಾರಿಯಾಗಿದ್ದಾನೆ. ಈ ಸಂಬಂಧ ದಾವಣಗೆರೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.