ಮಾಜಿ ಸಚಿವರ ಆರಗ ಜ್ಞಾನೇಂದ್ರರವರ ವಿರುದ್ಧ ಖಾಸಗಿ ಕೇಸ್‌ ದಾಖಲಿಗೆ ನಿರ್ಧಾರ ! ಏನಿದು ವಿಚಾರ

Decision to file a private case against former minister Araga Jnanendra! What is the point? Araga Jnanendra, Sudheer Kumar Murolli, Thirthahalli, Koppa Taluk News,

ಮಾಜಿ ಸಚಿವರ ಆರಗ ಜ್ಞಾನೇಂದ್ರರವರ ವಿರುದ್ಧ ಖಾಸಗಿ ಕೇಸ್‌ ದಾಖಲಿಗೆ ನಿರ್ಧಾರ ! ಏನಿದು ವಿಚಾರ
Araga Jnanendra, Sudheer Kumar Murolli, Thirthahalli, Koppa Taluk News,

SHIVAMOGGA | MALENADUTODAY NEWS | May 2, 2024  

ಶಿವಮೊಗ್ಗ ಲೋಕಸಭಾ ಚುನಾವಣಾ ಕದನ ಅಂತಿಮಹಂತದಲ್ಲಿದೆ. ಇದರ ನಡುವೆ ಮಾಜಿ ಸಚಿವ ಆರಗ ಜ್ಞಾನೇಂದ್ರರ ವಿರುದ್ಧ ಕೇಸ್‌ ಹಾಕುತ್ತೇನೆ  ಎಂದು ಕೆಪಿಸಿಸಿ ಪ್ರಚಾರ ಸಮಿತಿ ಸಹ ಅಧ್ಯಕ್ಷ ಸುಧೀರ್‌ ಕುಮಾರ್‌ ಮುರೋಳ್ಳಿ ಹೇಳಿದ್ದಾರೆ. 

ಶಾಸಕ ಆರಗ ಜ್ಞಾನೇಂದ್ರ ಭಾರತವನ್ನು ಹಾವಾಡಿಗರು, ಭಿಕ್ಷುಕರ ದೇಶ ಎನ್ನುವ ಮೂಲಕ ಭಾರತದ ಸನಾತನ ಸಂಸ್ಕೃತಿಗೆ ಅಪಮಾನ ಮಾಡಿದ್ದಾರೆ, ಬ್ರಿಟಿಷ್‌ ಮನಃಸ್ಥಿತಿ ಹೊಂದಿರುವ ಅವರ ವಿರುದ್ಧ ಖಾಸಗಿ ಪ್ರಕರಣ ದಾಖಲಿಸುತ್ತೇನೆ ಎಂದಿದ್ದಾರೆ. 

ನಿನ್ನೆ ಈ ಬಗ್ಗೆ ತೀರ್ಥಹಳ್ಳಿ ಮಾತನಾಡಿದ ಅವರು, ಚಿಕ್ಕಮಗಳೂರು ಜಿಲ್ಲೆ ಕೊಪ್ಪದಲ್ಲಿ ಮಾತನಾಡ್ತಾ ಆರಗ ಜ್ಞಾನೇಂದ್ರರವರು 2014ಕ್ಕಿಂತ ಮೊದಲು ಭಾರತ ಹಾವಾಡಿಗರು, ಭಿಕ್ಷುಕರ ದೇಶ ಆಗಿತ್ತು. ಮೋದಿ ಬಂದ ಮೇಲೆಯೇ ದೇಶ ಅಭಿವೃದ್ಧಿಯಾಗಿದೆ ಎಂದಿದ್ದಾರೆ. 

ಇದು ಅವರ ಹಿರಿತನ, ಪ್ರಭುದ್ಧತೆ ಮೀರಿದ ಮಾತಾಗಿದ್ದು, ಅವರು ದೇಶವನ್ನು ಅವಮಾನಿಸಿದ್ದಾರೆ ಎಂದು ದೂರಿದರು. ಆರಗ ಜ್ಞಾನೇಂದ್ರ 2014ಕ್ಕಿಂತ ಮೊದಲು ತೀರ್ಥಹಳ್ಳಿ ಕ್ಷೇತ್ರದ ಶಾಸಕರಾಗಿದ್ದಾರೆ. ಶಾಲೆ, ಕಾಲೇಜಿನಲ್ಲಿ ಉಚಿತ ಶಿಕ್ಷಣ ಪಡೆದಿದ್ದಾರೆ. ಡಿಗ್ರಿ ಮಾಡಿಲ್ಲವಾ?, ರೈಸ್‌ ಮಿಲ್‌ ಮ್ಯಾನೇಜರ್‌ ಆಗಿರಲಿಲ್ಲವಾ?. ಅವರ ಕುಲ, ಕುಟುಂಬ, ಬಂಧು, ಬಳಗ, ಪೂರ್ವಜರು ಭಿಕ್ಷುಕರಾಗಿದ್ದರಾ ಎಂದು ಪ್ರಶ್ನಿಸಿದ್ದಾರೆ. 

2014ಕ್ಕಿಂತ ಮೊದಲು ತೀರ್ಥಹಳ್ಳಿ ಕ್ಷೇತ್ರ ವಿಶ್ವಮಾನವ ಸಂದೇಶ ಸಾರಿದೆ. ಕಲೆ, ಸಾಹಿತ್ಯ, ಸಂಗೀತ ಕ್ಷೇತ್ರದಲ್ಲಿ ದೊಡ್ಡ ಸಾಧನೆ ನಡೆದಿದೆ. ಭಾರತ ಗಗನಯಾನ, ಚಂದ್ರಯಾನ ಮಾಡಿ ಸಾಧನೆ ಮೆರೆದಿದೆ ಎಂದ ಅವರು, ಆರಗರವರ ಮಾತಿನ ಕುರಿತಾಗಿ ಖಾಸಗಿ ಪ್ರಕರಣ ದಾಖಲಿಸುವುದಾಗಿ ತಿಳಿಸಿದರು