ಶಿವಮೊಗ್ಗ ರೈಲು, ಬಸ್ ನಿಲ್ದಾಣದಲ್ಲಿ ಆಟೋರಿಕ್ಷಾ ಪ್ರಿ-ಪೇಯ್ಡ್ ಕೌಂಟರ್!

Autorickshaw pre-paid counter at Shivamogga railway station, bus stand

ಶಿವಮೊಗ್ಗ ರೈಲು, ಬಸ್ ನಿಲ್ದಾಣದಲ್ಲಿ ಆಟೋರಿಕ್ಷಾ ಪ್ರಿ-ಪೇಯ್ಡ್ ಕೌಂಟರ್!
Autorickshaw pre-paid counter at Shivamogga railway station, bus stand

SHIVAMOGGA  |  Jan 5, 2024  |   ರೈಲು, ಬಸ್ ನಿಲ್ದಾಣದಲ್ಲಿ ಆಟೋರಿಕ್ಷಾ ಪ್ರಿ-ಪೇಯ್ಡ್ ಕೌಂಟರ್ ತೆರೆಯಲು ಸೂಚನೆ

ನಿನ್ನೆ ಗುರುವಾರ ಸಾರಿಗೆ ಇಲಾಖೆಯ ಅಧಿಕಾರಿಗಳ ಜೊತೆಗೆ ಹಾಗೂ ಸಾರ್ವಜನಿಕರು ಜೊತೆಗೆ ಸಭೆ ನಡೆಸಿದ ಜಿಲ್ಲಾಧಿಕಾರಿ ಡಾ.ಆರ್​ ಸೆಲ್ವಮಣಿ ಆಟೋಗಳ ಸಂಚಾರದ ವಿಚಾರದಲ್ಲಿ ಆಗುತ್ತಿರುವ ಸಮಸ್ಯೆಗಳನ್ನ ಜನರಿಂದ ಆಲಿಸಿದ್ರು. ಅದರಲ್ಲಿಯು ಮುಖ್ಯವಾಗಿ ಶಿವಮೊಗ್ಗ ರೈಲ್ವೆ ನಿಲ್ದಾಣ ಹಾಗೂ ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ಆಟೋಗಳ ರಶ್ ಹಾಗೂ ದುಬಾರಿ ಹಣ ವಸೂಲಿ ಬಗ್ಗೆ ಜನರು ಸಲ್ಲಿಸಿದ ದೂರನ್ನ ಆಲಿಸಿ ಪ್ರೀಪೇಯ್ಡ್​​ ಕೌಂಟರ್ ನಿರ್ಮಾಣಕ್ಕೆ ಸೂಚನೆ ಕೊಟ್ಟಿದ್ದಾರೆ. 

ಶಿವಮೊಗ್ಗ ರೈಲ್ವೆ ನಿಲ್ದಾಣ (shivamogga railway station)

READ :ಆಟೋ ಪರ್ಮಿಟ್​, ನೈಟ್ ONE AND HALF ರೇಟ್​, ರೈಲ್ವೆ ಸ್ಟೇಷನ್​ನಲ್ಲಿ ರಿಕ್ಷಾ ರಶ್​! ಮಹತ್ವದ ಸೂಚನೆ ನೀಡಿದ DC ಡಾ.ಆರ್.ಸೆಲ್ವಮಣಿ

 

ಸಾರ್ವಜನಿಕರಿಗೆ ತೊಂದರೆ ಆಗುವ ರೀತಿಯಲ್ಲಿ ಆಟೋ ನಿಲ್ಲಿಸಿದ ಚಾಲಕರಿಗೆ ಸರ್ಕಲ್ ಇನ್ಸ್‌ಪೆಕ್ಟರ್ ದಂಡ ವಿಧಿಸಬೇಕು ಎಂದು ಸೂಚಿಸಿದ ಜಿಲ್ಲಾಧಿಕಾರಿ ಜೋರಾಗಿ ಹಾರ್ನ್ ಕಂಡುಬಂದಲ್ಲಿ ಪೊಲೀಸ್ ಠಾಣೆಯ ಸಂಖ್ಯೆಗೆ ಒಂದು ದೂರು ಸಲ್ಲಿಸಿದಲ್ಲಿ ಕ್ರಮ ವಹಿಸಲಾಗುವುದು ಎಂದಿದ್ದಾರೆ. 



ಅಲ್ಲದೆ. ಆಟೋಗಳಲ್ಲಿ ಮೀಟರ್‌ಹಾಕಬೇಕು. ರಾತ್ರಿ 10 ರಿಂದ ಬೆಳಗ್ಗೆ 5 ರವರೆಗೆ ಮಾತ್ರ ಒಂದುವರೆ ಚಾರ್ಜ್​ ತೆಗೆದುಕೊಳ್ಳಬೇಕು. ಬಳಿಕ ನಿಗಧಿ ಪಡಿಸಿದ ಚಾರ್ಚ್ ಮಾತ್ರ ತೆಗೆದುಕೊಳ್ಳಬೇಕು. ಹೆಚ್ಚುವರಿ ದರ ತೆಗೆದುಕೊಳ್ಳಬಾರದು ಎಂದ ಅವರು, ಮೊದಲನೇ ಹಂತದಲ್ಲಿ ರೈಲು ನಿಲ್ದಾಣ ಮತ್ತು ಬಸ್ ನಿಲ್ದಾಣದಲ್ಲಿ ಇನ್ನು 20 ದಿನಗಳ ಒಳಗೆ ಆಟೋರಿಕ್ಷಾ ಪ್ರಿ-ಪೇಯ್ಡ್ ಕೌಂಟರ್ ಗಳನ್ನು ತೆರೆಯಬೇಕು ಎಂದು ಆರ್‌ಟಿಒ ಅಧಿಕಾರಿಗೆ ಜಿಲ್ಲಾಧಿಕಾರಿ ಸೂಚಿಸಿದರು.