ಗಲ್ಲಿಗಳಲ್ಲಿ ರೌಂಡ್ಸ್! ಅಂಗಡಿಗಳಲ್ಲಿ ಎನ್​ಕ್ವೈರಿ! ಬೀದಿಗಿಳಿದ ಲಾಠಿ & ಪೊಲೀಸ್ ! ನಿನ್ನೆ ಒಂದೇ ದಿನ 19 ಕೇಸ್​

Shivamogga police conducted foot patrolling on the streets and registered 19 pitti cases last night

ಗಲ್ಲಿಗಳಲ್ಲಿ ರೌಂಡ್ಸ್! ಅಂಗಡಿಗಳಲ್ಲಿ ಎನ್​ಕ್ವೈರಿ! ಬೀದಿಗಿಳಿದ ಲಾಠಿ  & ಪೊಲೀಸ್ ! ನಿನ್ನೆ ಒಂದೇ ದಿನ 19 ಕೇಸ್​
Shivamogga police

Shivamogga | Feb 8, 2024 | ಶಿವಮೊಗ್ಗ ಪೊಲೀಸರು ಫೂಟ್​​ ಪೆಟ್ರೋಲಿಂಗ್​ ಮುಂದುವರಿಸಿದ್ದಾರೆ. ಈ ಸಂಬಂಧ ನಿನ್ನೆ ಅಂದರೆ,    ದಿನಾಂಕಃ 07-02-2024  ರಂದು ಸಂಜೆ ಶಿವಮೊಗ್ಗ ಎ ಉಪ ವಿಭಾಗ ವ್ಯಾಪ್ತಿಯ ಎಂಕೆಕೆ ರಸ್ತೆ, ಬರ್ಮಪ್ಪ ನಗರ, ಮೆಹಬೂಬ್ ಗಲ್ಲಿ, ಟಿಪ್ಪು ನಗರ, ಶಿವಮೊಗ್ಗ ಬಿ ಉಪ ವಿಭಾಗ ವ್ಯಾಪ್ತಿಯ ಎಎ ಕಾಲೋನಿ, ಬೊಮ್ಮನಕಟ್ಟೆ, ಪುರ್ಲೆ, ಆಯನೂರು ಪೂಟ್ ಪೆಟ್ರೋಲಿಂಗ್  (Foot Patrolling)  ನಡೆಸಿದ್ದಾರೆ 

ಅತ್ತ ಭದ್ರಾವತಿ ಉಪ ವಿಭಾಗ ವ್ಯಾಪ್ತಿಯ ಕೂಲಿ ಬ್ಲಾಕ್ ಶೆಡ್, ಸೀಗೆ ಬಾಗಿ, ಹನುಮಂತ ನಗರ, ಬರಂದೂರು, ದೊನಭಘಟ್ಟ, ಜಂಭರಘಟ್ಟ, ಶಿಕಾರಿಪುರ  ಉಪ ವಿಭಾಗ ವ್ಯಾಪ್ತಿಯ ಶಿಕಾರಿಪುರ ಟೌನ್ ನ ದೊಡ್ಡಪೇಟೆ, ಶಿರಾಳಕೊಪ್ಪದ ಕುರುಬರ ಕೇರಿ, ಆನವಟ್ಟಿಯ ವೈಎಂಜಿ ವೃತ್ತ, ಅಜಾದ್ ನಗರ, ಪ್ರಗತಿ ವೃತ್ತ,

ಸಾಗರ ಉಪ ವಿಭಾಗ ವ್ಯಾಪ್ತಿಯ ಸಾಗರ ಟೌನ್ ನ ಅರಳೆಕೊಪ್ಪ, ಸೊರಬ ರಸ್ತೆ, ಆನಂದಪುರದ ಮಾರಿಕಾಂಬ ದೇವಸ್ಥಾನ ರಸ್ತೆ ಮತ್ತು ತೀರ್ಥಹಳ್ಳಿ ಉಪ ವಿಭಾಗ ವ್ಯಾಪ್ತಿಯ ತೀರ್ಥಹಳ್ಳಿ ಟೌನ್ ನ ಸೀಬಿನ ಕೆರೆ, ಬೈಸೆ, ಬಿದರಗೋಡು, ಬೆಜ್ಜುವಳ್ಳಿಯಲ್ಲಿ ಆಯಾ ಪೊಲೀಸ್ ಉಪಾಧೀಕ್ಷಕರುಗಳ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕರು, ಪೋಲಿಸ್ ಉಪನಿರೀಕ್ಷಕರು ಮತ್ತು ಸಿಬ್ಬಂದಿಗಳ ತಂಡಗಳು ಕಾಲ್ನಡಿಗೆ ವಿಶೇಷ ಗಸ್ತು  (Foot Patrolling) ಮಾಡಿ Public Nuisance ಮಾಡಿದ ಮತ್ತು ಅನುಮಾನಸ್ಪಾದ ವ್ಯಕ್ತಿಗಳ ವಿರುದ್ದ ಒಟ್ಟು 19 ಲಘು ಪ್ರಕರಣಗಳನ್ನು ದಾಖಲಿಸಿರುತ್ತಾರೆ