ವಿಐಎಸ್​​ಎಲ್​ ಗುತ್ತಿಗೆ ಕಾರ್ಮಿಕರ ಬದುಕು ಅತಂತ್ರ! ಉದ್ಯೋಗವಿಲ್ಲದೇ ಪೆಂಟಿಂಗ್ ಕೆಲಸಕ್ಕೆ ಹೋಗಿ ಜೀವ ಕಳೆದುಕೊಂಡ ಕಾರ್ಮಿಕ !

VISL contract worker goes to painting job, loses his life

ವಿಐಎಸ್​​ಎಲ್​ ಗುತ್ತಿಗೆ ಕಾರ್ಮಿಕರ ಬದುಕು ಅತಂತ್ರ! ಉದ್ಯೋಗವಿಲ್ಲದೇ  ಪೆಂಟಿಂಗ್ ಕೆಲಸಕ್ಕೆ ಹೋಗಿ ಜೀವ ಕಳೆದುಕೊಂಡ ಕಾರ್ಮಿಕ !

KARNATAKA NEWS/ ONLINE / Malenadu today/ Jun 28, 2023 SHIVAMOGGA NEWS

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕಿನ ವಿಐಎಸ್​ಎಲ್ ಗುತ್ತಿಗೆ ಕಾರ್ಮಿಕರೊಬ್ಬರು, ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರು ಖಾಸಗಿ ಆಸ್ಪತ್ರೆಯಲ್ಲಿ ಪೆಂಟಿಂಗ್ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಮೇಲಿನಿಂದ ಕೆಳಕ್ಕೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದರು

ವಿಐಎಸ್​ಎಲ್​ನಲ್ಲಿ ಗುತ್ತಿಗೆ ಕಾರ್ಮಿಕರು ಅತಂತ್ರರಾಗಿದ್ದಾರೆ. ಅವರಿಗೆ ದಿನನಿತ್ಯ ಅಲ್ಲಿ ಕೆಲಸ ಸಿಗುತ್ತಿಲ್ಲ. ಹೀಗಾಗಿ ಬೇರೆ ಬೇರೆ ಕೆಲಸಗಳನ್ನು ಹುಡುಕಿಕೊಂಡು ಗುತ್ತಿಗೆ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅದೇ ರೀತಿಯಲ್ಲಿ ಜನ್ನಾಪುರದ ನಿವಾಸಿ ಮಂಜುನಾಥ್ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಪೆಂಟಿಂಗ್ ಕೆಲಸಕ್ಕೆ ಬಂದಿದ್ದರು. ಕಳೆದ 22 ರಂದು ಅವರು ಕೆಲಸ ಮಾಡುತ್ತಿದ್ದಾಗ, ಕಟ್ಟಡದ ಮೇಲಿನಿಂದ ಕೆಳಕ್ಕೆ ಬಿದ್ದಿದ್ಧಾರೆ. ಪರಿಣಾಮ ತೀವ್ರವಾಗಿ ಗಾಯಗೊಂಡಿದ್ದ ಅವರನ್ನ ಅದೇ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಲಾಗಿತ್ತು. ಆದರೆ ಅಲ್ಲಿ ಸಮರ್ಪಕ ಚಿಕಿತ್ಸೆ ಸಿಗಲಿಲ್ಲ ಎಂಬುದು ಕುಟುಂಬಸ್ಥರ ಆರೋಪ. ಈ ಮಧ್ಯೆ 25 ನೇ ತಾರೀಖು ಮಣಿಪಾಲ್ ಆಸ್ಪತ್ರೆಗೆ ಮಂಜುನಾಥ್​ರನ್ನು ಶಿಫ್ಟ್ ಮಾಡಲಾಗಿತ್ತು. ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ನಿನ್ನೆ ರಾತ್ರಿ ಸಾವನ್ನಪ್ಪಿದ್ದಾರೆ. 

ಭದ್ರಾವತಿ ವಿಐಎಸ್​ಎಲ್ ಕಾರ್ಖಾನೆ ಮುಚ್ಚುವ ಹಂತ ತಲುಪಿರುವುದು ಹಲವು ಗುತ್ತಿಗೆ ಕಾರ್ಮಿಕರ ಜೀವನವನ್ನು ಅತಂತ್ರಗೊಳಿಸಿದೆ. ಜೀವನೋಪಾಯಕ್ಕೆ ಸಿಕ್ಕ ಸಿಕ್ಕ ಕೆಲಸವನ್ನೆಲ್ಲಾ ಮಾಡುವಂತಹ ಪರಿಸ್ತಿತಿ ಎದುರಾಗಿದ್ದು, ಕಾರ್ಮಿಕರ ಜೀವಕ್ಕೆ ಅಪಾಯ ತರುತ್ತಿದೆ. ಇನ್ನೂ ಮಂಜುನಾಥ್​ರ ಸಾವಿನಿಂದ ಅವರ ಕುಟುಂಬ ಅತಂತ್ರವಾಗಿದೆ. ಸದ್ಯ ಘಟನೆ ಸಂಬಂಧ ದೂರು ದಾಖಲಾಗಿದೆ. 


ರಸ್ತೆಗೆ ಅಡ್ಡವಾಗಿದ್ದ ಮರ ಕಡಿಯುವ ಸಂದರ್ಭದಲ್ಲಿ ಕರೆಂಟ್ ಶಾಕ್! ಶಿವಮೊಗ್ಗ ನಗರದಲ್ಲಿ ಇಬ್ಬರು ಸಾವು!

ಶಿವಮೊಗ್ಗ / ರಸ್ತೆಗೆ ಅಡ್ಡಲಾಗಿ ಬಿದ್ದಿ ಮರ ಕಟಾವ್ ಮಾಡಲು ಹೋಗಿದ್ದ ಇಬ್ಬರು ಕರೆಂಟ್ ತಗುಲಿ ಸಾವನ್ನಪ್ಪಿದ್ಧಾರೆ. ಶಿವಮೊಗ್ಗ ನಗರದ ಊರುಗಡೂರ್​ ಬಳಿಯಲ್ಲಿ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ  ಓರ್ವರು ಗುಂಟೂರು ಮೂಲದ ಚಲ್ಲಾ ಸೋಮಶೇಖರ್ ಎಂದು ಗೊತ್ತಾಗಿದ್ದು, ಇನ್ನೊಬ್ಬರ ಸುಳಿವು ಸಿಗಬೇಕಿದೆ.ಘಟನೆಯಲ್ಲಿ ಮರ ಕಡಿಯುತ್ತಿರುವ ಸಂದರ್ಭದಲ್ಲಿ ಮೇನ್​ ಲೇನ್​ ಸಂಪರ್ಕಗೊಂಡಿದ್ದು, ಅದರಿಂದ ಹರಿದ ವಿದ್ಯುತ್ನಿಂದಾಗಿ ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿದ್ದಾರೆ. ತಕ್ಷಣವೇ ಸ್ಥಳೀಯರು 108 ಗೆ ಕರೆ ಮಾಡಿ ಆ್ಯಂಬುಲೆನ್ಸ್​ನ್ನ ಕರೆಸಿಕೊಂಡಿದ್ದಾರೆ. ಮೆಗ್ಗಾನ್ ಆಸ್ಪತ್ರೆಗೆ ಇಬ್ಬರನ್ನು ಶಿಫ್ಟ್ ಮಾಡಲಾಗಿದ್ದು, ಅಲ್ಲಿನ ವೈದ್ಯರು ಇಬ್ಬರು ಮೃತಪಟ್ಟಿರುವುದನ್ನ ದೃಡಿಕರಿಸಿದ್ದಾರೆ. ತುಂಗಾ ನಗರ ಪೊಲೀಸ್ ಸ್ಟೇಷನ್​ನಲ್ಲಿ ಈ ಸಂಬಂಧ ಕೇಸ್ ದಾಖಲಾಗಿದೆ.