ಭದ್ರಾವತಿಯಲ್ಲಿ ಆಟೋ-ಬೈಕ್ ನಡುವೆ ಡಿಕ್ಕಿ ಓರ್ವನಿಗೆ ಗಾಯ!/ ಸಾಗರದಲ್ಲಿ ವಿದ್ಯಾರ್ಥಿಗಳಿಗೆ ಪೊಲೀಸ್ ಇಲಾಖೆಯ ಪಾಠ!

One injured in auto-bike collision in Bhadravathi!/ Police department's lesson for students in Sagar!

ಭದ್ರಾವತಿಯಲ್ಲಿ ಆಟೋ-ಬೈಕ್ ನಡುವೆ ಡಿಕ್ಕಿ  ಓರ್ವನಿಗೆ ಗಾಯ!/ ಸಾಗರದಲ್ಲಿ ವಿದ್ಯಾರ್ಥಿಗಳಿಗೆ ಪೊಲೀಸ್ ಇಲಾಖೆಯ ಪಾಠ!

SHIVAMOGGA  |  Dec 22, 2023  |  ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಪೇಪರ್ ಟೌನ್​ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ  ಆಟೋ ಹಾಗೂ ಬೈಕ್​ ನಡುವೆ ಡಿಕ್ಕಿಯಾಗಿದೆ. ಘಟನೆಯಲ್ಲಿ  ಓರ್ವ ಗಾಯಗೊಂಡಿದ್ದು ಅವರನ್ನ ಸಾರ್ವಜನಿಕರೇ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ನೀಡಿದ್ದಾರೆ. ಇನ್ನೂ ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ವಾಹನಗಳನ್ನ ತೆರವುಗೊಳಿಸಿ ಟ್ರಾಫಿಕ್​ ಕ್ಲೀಯರ್ ಮಾಡಿದ್ದಾರೆ. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ಉಲ್ಲೇಖವಾಗಿದೆ. 

ಅಪರಾಧ ತಡೆ ಮಾಸಾಚರಣೆ

 

ಅಪರಾಧ ತಡೆ ಮಾಸಾಚರಣೆ – 2023  ರ ಹಿನ್ನೆಲೆಯಲ್ಲಿ, ಈ ದಿನ ದಿನಾಂಕಃ 21-12-2023  ರಂದು ಸಾಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಶಿವಲಿಂಗಪ್ಪ ಪ್ರೌಢ ಶಾಲೆಯಲ್ಲಿ ಕಾನೂನು ಅರಿವು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು,  ಗೋಪಾಲ ಕೃಷ್ಣ ಟಿ ನಾಯಕ್, ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ ಜಿಲ್ಲೆ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು

ಕಾರ್ಯಕ್ರಮದಲ್ಲಿ ಹಾಜರಿದ್ದ ವಿದ್ಯಾರ್ಥಿಗಳ ಕುರಿತು ಮಾತನಾಡಿ, ಮಾದಕ ದ್ರವ್ಯ ವ್ಯಸನದ ದುಷ್ಪರಿಣಾಮಗಳು, ಸಾಮಾಜಿಕ ಜಾಲತಾಣದ ಅತಿಯಾದ ಬಳಕೆಯಿಂದ ವಿದ್ಯಾರ್ಥಿ ಜೀವನದ ಮೇಲೆ ಉಂಟಾಗುವ ದುಪರಿಣಾಮಗಳು,  NDPS ಕಾಯ್ದೆ, POCSO ಕಾಯ್ದೆ, ಸೈಬರ್ ಕ್ರೈಂ ಕಾಯ್ದೆ, ಮಹಿಳಾ ಮತ್ತು ಮಕ್ಕಳ ಸುರಕ್ಷತೆಗಾಗಿ ಪೊಲೀಸ್ ಇಲಾಖೆಯಿಂದ ಕೈಗೊಳ್ಳಲಾಗುತ್ತಿರುವ ಸುರಕ್ಷತಾ ಕ್ರಮಗಳು, ಮಕ್ಕಳ ಹಕ್ಕುಗಳ ಬಗ್ಗೆ ವಿವರಿಸಿ, ಯಾವುದೇ ತುರ್ತು ಸಂದರ್ಭದಲ್ಲಿ 112 ಸಹಾಯವಾಣಿಗೆ ಕರೆ ಮಾಡುವಂತೆ ತಿಳಿಸಿದರು.  ಈ ಸಂದರ್ಭದಲ್ಲಿ ಸೀತಾರಾಮ್, ಪಿಐ ಸಾಗರ ಟೌನ್, ಪೊಲೀಸ್ ಠಾಣೆ ಮತ್ತು ಶಾಲೆಯ ಪ್ರಾಂಶುಪಾಲರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.