KARNATAKA NEWS/ ONLINE / Malenadu today/ May 28, 2023 SHIVAMOGGA NEWS
ಭದ್ರಾವತಿ ತಾಲ್ಲೂಕಿನಲ್ಲಿ ಹುಟ್ಟುಹಬ್ಬದ ಶುಭಾಶಯ ಕೋರಿ ವಾಟ್ಸ್ಯಾಪ್ ಸ್ಟೇಟಸ್ ಹಾಕಿದ ವಿಚಾರಕ್ಕೆ ಗಲಾಟೆ ನಡೆದು ಪರಸ್ಪರ ಹೊಡೆದಾಟ ಆಗಿದ್ದು, ಈ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಸ್ಟೇಷನ್ನಲ್ಲಿ ಎಫ್ಐಆರ್ ಸಹ ದಾಖಲಾಗಿದೆ. (bhadravati crime news,)
ನಡೆದಿದ್ದೇನು?
ಆಕಾಶ್ ಎಂಬಾತ ಲೋಹಿತ್ ಎಂಬಾತನ ಹುಟ್ಟುಹಬ್ಬಕ್ಕೆ ವಿಶ್ ಮಾಡಿ ಶುಭಾಶಯಗಳು ಶಿಷ್ಯಾ ಎಂದು ವಾಟ್ಸ್ಯಾಪ್ ಸ್ಟೇಟಸ್ ಹಾಕಿಕೊಂಡಿದ್ದನಂತೆ. ಆದರೆ ಲೋಹಿತ್ ನನ್ನ ವಯಸ್ಸೇನು ನಿನ್ನ ವಯಸ್ಸೇನು ನಿನಗಿಂತ ದೊಡ್ಡವನು ನಾನು ಶಿಷ್ಯಾ ಎಂದು ಏಕೆ ಹಾಕಿದೆ ಎಂದು ಕೇಳಿದ್ದಾನೆ. ಇದೇ ಕಾರಣಕ್ಕೆ ಇಬ್ಬರ ನಡುವೆ ಜಗಳವಾಗಿದೆ. ಈ ಮಧ್ಯೆ ಇವರ ಸ್ನೇಹಿತರು ಗಲಾಟೆ ಬಿಡಿಸಿದ್ದಾರೆ.
ಆನಂತರ ಜಗಳ ಬಿಡಿಸಿದ್ದ ಪ್ರೀತಮ್ ಹಾಗೂ ಚರಣ್ ಎಂಬವರು ವೀರಾಪುರದ ಬಳಿ ಹೋಗುತ್ತಿದ್ದಾಗ ಅವರ ಮೇಲೆ ಆಕಾಶ್ ಹಾಗೂ ಇತರರು ಹಲ್ಲೆ ನಡೆಸಿದ್ಧಾರೆ ಎಂದು ಆರೋಪಿಸಲಾಗಿದೆ.
ಅಲ್ಲದೆ ಇದೇ ವಿಚಾರವಾಗಿ ಇನ್ನೊಂದು ಆರೋಪ ಕೂಡ ದಾಖಲಾಗಿದೆ. ಅದರಲ್ಲಿ ಗಾಯಾಳು ಆಕಾಶ್ ದೂರು ನೀಡಿದ್ದು, ತನ್ನ ಮೇಲೆ ನಾಲ್ವರು ಏಕಾಯೇಕಿ ಬಂದು ಹಲ್ಲೆ ನಡೆಸಿ, ಚಾಕು ಚುಚ್ಚಿರುವ ಆರೋಪ ಹೊರಸಿದ್ದಾರೆ. ಒಟ್ಟಾರೆ, ಹುಟ್ಟುಹಬ್ಬ ಶುಭಾಶಯದ ವಾಟ್ಸ್ಯಾಪ್ ಸ್ಟೇಟಸ್ನಿಂದ ಇಷ್ಟೆಲ್ಲಾ ನಡೆದುಹೋಗಿದ್ದು, ಮನಸ್ಸುಗಳು ಎಷ್ಟು ಸಂಕುಚಿತವಾಗುತ್ತಿವೆ ಎಂಬುದನ್ನ ಸಾರುತ್ತಿವೆ.
ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ರಿಗೆ ಮಿನಿಸ್ಟರ್ ಗಿರಿ ಮಿಸ್ ಆಗಿದ್ದು ಏಕೆ ಗೊತ್ತಾ?
ಭದ್ರಾವತಿ/ ತಾಲ್ಲೂಕಿಗೆ ಸಚಿವ ಸ್ಥಾನ, ಗ್ಯಾರಂಟಿ ಸರ್ಕಾರದಲ್ಲಿಯು ಸಿಗಲಿಲ್ಲ. ಇದು ಜನರ ಬೇಸರಕ್ಕೆ ಕಾರಣವಾಗಿದೆ. ಅಲ್ಲದೆ ಈ ವಿಚಾರವಾಗಿ ಆಕ್ರೋಶವೂ ಹೊರಬೀಳುತ್ತಿದೆ. ಭದ್ರಾವತಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ 4ನೇ ಬಾರಿಗೆ ಆಯ್ಕೆಯಾದರೂ ಸಹ ಬಿ.ಕೆ ಸಂಗಮೇಶ್ವರ್‌ಗೆ ಸಚಿವ ಸ್ಥಾನ, ನೀಡಲಾಗುತ್ತದೆ ಎಂದು ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಹೇಳಿದ್ದರು. ಆದರೆ ಆಡಿದ ಮಾತು ಸುಳ್ಳಲಾಗಿದೆ.
ಸಂಗಮೇಶ್ ಸತತ ಪ್ರಯತ್ನ
ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಬೆಂಗಳೂರಿನಲ್ಲಿಯೇ ಉಳಿದುಕೊಂಡಿದ್ದ ಭದ್ರಾವತಿ ಶಾಸಕ ಸಚಿವ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಒಡ್ಡಿದ್ದರು. ಸಿಎಂ, ಡಿಸಿಎಂ, ಉಸ್ತುವಾರಿ ಹೀಗೆ ಕಾಂಗ್ರೆಸ್ನ ದಿಗ್ಗಜರನ್ನ ಭೇಟಿಯಾಗಿ ತಮಗೇಕೆ ಮಂತ್ರಿಗಿರಿ ನೀಡಬೇಕು ಎಂದು ವಿವರಿಸಿದ್ದರು. ಆದರೆ ಇದೀಗ ಬರಿಗೈಯಲ್ಲಿ ಭದ್ರಾವತಿಗೆ ವಾಪಸ್ ಆಗಿದ್ದಾರೆ.
ಹಿಂದೆಯು ಸಿಕ್ಕಿರಲಿಲ್ಲ ಸ್ಥಾನ
ಇನ್ನೂ ಸಂಗಮೇಶ್ರಿಗೆ ಸಚಿವ ಸ್ಥಾನ ಸಿಗದೇ ನಿರಾಸೆಯಾಗ್ತಿರುವುದು ಇದೇ ಮೊದಲಲ್ಲ, ಈ ಹಿಂದೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲೂ ಸಂಗಮೇಶ್ರಿಗೆ ಮಿನಿಸ್ಟರ್ ಗಿರಿ ಮಿಸ್ ಆಗಿತ್ತು. ಆನಂತರ ನಿಗಮ ಮಂಡಳಿಯೊಂದಕ್ಕೆ ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಇದೀಗ ಕಾಂಗ್ರೆಸ್ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬಂದಿದ್ದರು ಸಚಿವ ಸ್ಥಾನ ಸಂಗಮೇಶ್ ರಿಗೆ ನಿಕ್ಕಿಯಾಗಲಿಲ್ಲ.
ಹಾಗಾದರೇ ಸಚಿವ ಸ್ಥಾನ ಸಿಗದಿರಲು ಕಾರಣವೇನು?
ಅಂದಹಾಗೆ ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ ಒಂಟಿ ಸಲಗವಿದ್ದಂತೆ, ಭದ್ರಾವತಿಯ ರಾಜಕೀಯದಂತೆ ವ್ಯಕ್ತಿಗತವಾಗಿ ಬೆಳದು ಬಂದವರು, ತಮಗೆ ಟಿಕೆಟ್ ಮಿಸ್ ಆಗಿದ್ದಾಗಲೂ ಕೇರ್ ಮಾಡದೇ ಸ್ವತಂತ್ರವಾಗಿ ಸ್ಪರ್ಧಿಸಿದವರು. ಹೀಗೆ ತಮ್ಮ ಹಟ ಹಾಗೂ ಸ್ವಾಭಿಮಾನದಲ್ಲಿಯೇ ನಾಲ್ಕು ಸಲ ಶಾಸಕರಾಗಿರುವ ಅವರಿಗೆ ದೊಡ್ಡ ಪ್ರಭಾವಿ ರಾಜಕಾರಣದ ಬೆನ್ನಲೆಬು ಇದುವರೆಗೂ ಸಿಕ್ಕಿಲ್ಲ. ಸಿದ್ದರಾಮಯ್ಯರ ಆಪ್ತರೆನಿಸಿದರೂ ಸಹ, ಅದರಿಂದ ಸಂಗಮೇಶ್ರಿಗೆ ಲಾಭವಾಗಿದ್ದು ಕಡಿಮೆಯೇ! ಇನ್ನೂ ಹೈಕಮಾಂಡ್ನಲ್ಲಿ ಲಾಭಿ ಮಾಡುವಂತಹ ಲೀಡರ್ಗಳು ಸಂಗಮೇಶ್ರ ಬೆನ್ನಿಗಿಲ್ಲ. ಬೆಂಗಳೂರು, ದೆಹಲಿ ಮಟ್ಟದಲ್ಲಿ ರಾಜಕೀಯ ಗುರುಗಳನ್ನು ಸಹ ಹೊಂದಿಲ್ಲ. ಹೀಗಾಗಿ ಏಕಾಂಗಿಯಾಗಿಯೇ ಅವರು ಸಚಿವ ಸ್ಥಾನಕ್ಕಾಗಿ ಒತ್ತಡ ಹೇರಿದರು. ಆದರೆ ಅದು ಕೈಗೂಡಲಿಲ್ಲ.
ಭದ್ರಾವತಿಗೆ ಸೀಮಿತವಾದ ಸಂಗಮೇಶ್
ಶಾಸಕ ಮಧು ಬಂಗಾರಪ್ಪ, ಕಾಂಗ್ರೆಸ್ಗೆ ಬರುತ್ತಲೇ ಅವರಿಗೆ ಸಂಘಟನೆಯ ಜವಾಬ್ದಾರಿಯನ್ನ ನೀಡಲಾಯ್ತು. ಈ ಸಂಘಟನೆಯ ಹೊರೆಯನ್ನ ಹೆಗಲಿಗೆ ಏರಿಸಿಕೊಂಡಿದ್ದರೆ ಸಂಗಮೇಶ್ರವರು ಇಂದು ಮಂತ್ರಿಯಾಗಿರುತ್ತಿದ್ದರು ಎನ್ನುತ್ತಾರೆ ರಾಜಕೀಯ ತಜ್ಞರು, ಕ್ಷೇತ್ರಕ್ಕೆ ಸೀಮಿತರಾದ ಭದ್ರಾವತಿ ಎಂಎಲ್ಎ, ಜಿಲ್ಲಾ ಮಟ್ಟದ ನಾಯಕರಾಗಿ ಹೊರಹೊಮ್ಮಲಿಲ್ಲ. ಸಂಪರ್ಕ ಹಾಗೂ ಕ್ಷೇತ್ರಕ್ಕೆ ಸೀಮಿತವಾಗಿದ್ದೇ ಸಂಗಮೇಶ್ರ ಹಿನ್ನಡೆಗೆ ಕಾರಣವಾಯ್ತು ಎನ್ನಲಾಗುತ್ತಿದೆ.