ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್​ರಿಗೆ ಮಿನಿಸ್ಟರ್ ಗಿರಿ ಮಿಸ್ ಆಗಿದ್ದು ಏಕೆ ಗೊತ್ತಾ?

Do you know the reason why Bhadravathi MLA B.K. Sangamesh did not get a ministerial berth?

ಹಂಚಿಕೊಳ್ಳಿ
WhatsApp Facebook X Telegram
ಸುದ್ದಿ ಸಾರಾಂಶ

Do you know the reason why Bhadravathi MLA B.K. Sangamesh did not get a ministerial berth?

KARNATAKA NEWS/ ONLINE / Malenadu today/ May 28, 2023 SHIVAMOGGA NEWS

ಭದ್ರಾವತಿ/ ತಾಲ್ಲೂಕಿಗೆ ಸಚಿವ ಸ್ಥಾನ, ಗ್ಯಾರಂಟಿ ಸರ್ಕಾರದಲ್ಲಿಯು ಸಿಗಲಿಲ್ಲ. ಇದು ಜನರ ಬೇಸರಕ್ಕೆ ಕಾರಣವಾಗಿದೆ. ಅಲ್ಲದೆ  ಈ ವಿಚಾರವಾಗಿ ಆಕ್ರೋಶವೂ ಹೊರಬೀಳುತ್ತಿದೆ. ಭದ್ರಾವತಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ 4ನೇ ಬಾರಿಗೆ ಆಯ್ಕೆಯಾದರೂ ಸಹ ಬಿ.ಕೆ ಸಂಗಮೇಶ್ವರ್‌ಗೆ (bhadravati mla sangamesh,)ಸಚಿವ ಸ್ಥಾನ, ನೀಡಲಾಗುತ್ತದೆ ಎಂದು ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಹೇಳಿದ್ದರು. ಆದರೆ ಆಡಿದ ಮಾತು ಸುಳ್ಳಲಾಗಿದೆ. 

ಸಂಗಮೇಶ್ ಸತತ ಪ್ರಯತ್ನ

ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ಬೆಂಗಳೂರಿನಲ್ಲಿಯೇ ಉಳಿದುಕೊಂಡಿದ್ದ ಭದ್ರಾವತಿ ಶಾಸಕ ಸಚಿವ ಸ್ಥಾನಕ್ಕಾಗಿ ತೀವ್ರ ಪೈಪೋಟಿ ಒಡ್ಡಿದ್ದರು. ಸಿಎಂ, ಡಿಸಿಎಂ, ಉಸ್ತುವಾರಿ ಹೀಗೆ ಕಾಂಗ್ರೆಸ್​ನ ದಿಗ್ಗಜರನ್ನ ಭೇಟಿಯಾಗಿ ತಮಗೇಕೆ ಮಂತ್ರಿಗಿರಿ ನೀಡಬೇಕು ಎಂದು ವಿವರಿಸಿದ್ದರು. ಆದರೆ  ಇದೀಗ  ಬರಿಗೈಯಲ್ಲಿ ಭದ್ರಾವತಿಗೆ ವಾಪಸ್ ಆಗಿದ್ದಾರೆ. 

ಹಿಂದೆಯು ಸಿಕ್ಕಿರಲಿಲ್ಲ ಸ್ಥಾನ

ಇನ್ನೂ ಸಂಗಮೇಶ್​ರಿಗೆ ಸಚಿವ ಸ್ಥಾನ ಸಿಗದೇ ನಿರಾಸೆಯಾಗ್ತಿರುವುದು ಇದೇ ಮೊದಲಲ್ಲ,  ಈ ಹಿಂದೆ ಜೆಡಿಎಸ್-ಕಾಂಗ್ರೆಸ್   ಮೈತ್ರಿ ಸರ್ಕಾರದಲ್ಲೂ ಸಂಗಮೇಶ್​ರಿಗೆ ಮಿನಿಸ್ಟರ್​ ಗಿರಿ ಮಿಸ್ ಆಗಿತ್ತು. ಆನಂತರ  ನಿಗಮ ಮಂಡಳಿಯೊಂದಕ್ಕೆ  ಅಧ್ಯಕ್ಷರನ್ನಾಗಿ ಮಾಡಲಾಗಿತ್ತು. ಇದೀಗ ಕಾಂಗ್ರೆಸ್​ ಸ್ವಂತ ಬಲದಲ್ಲಿ ಅಧಿಕಾರಕ್ಕೆ ಬಂದಿದ್ದರು ಸಚಿವ ಸ್ಥಾನ ಸಂಗಮೇಶ್​ ರಿಗೆ ನಿಕ್ಕಿಯಾಗಲಿಲ್ಲ.  

ಹಾಗಾದರೇ ಸಚಿವ ಸ್ಥಾನ ಸಿಗದಿರಲು ಕಾರಣವೇನು?

ಅಂದಹಾಗೆ ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್​ ಒಂಟಿ ಸಲಗವಿದ್ದಂತೆ, ಭದ್ರಾವತಿಯ ರಾಜಕೀಯದಂತೆ ವ್ಯಕ್ತಿಗತವಾಗಿ ಬೆಳದು ಬಂದವರು, ತಮಗೆ ಟಿಕೆಟ್ ಮಿಸ್ ಆಗಿದ್ದಾಗಲೂ ಕೇರ್ ಮಾಡದೇ ಸ್ವತಂತ್ರವಾಗಿ ಸ್ಪರ್ಧಿಸಿದವರು. ಹೀಗೆ ತಮ್ಮ ಹಟ ಹಾಗೂ ಸ್ವಾಭಿಮಾನದಲ್ಲಿಯೇ ನಾಲ್ಕು ಸಲ ಶಾಸಕರಾಗಿರುವ ಅವರಿಗೆ ದೊಡ್ಡ ಪ್ರಭಾವಿ ರಾಜಕಾರಣದ ಬೆನ್ನಲೆಬು ಇದುವರೆಗೂ ಸಿಕ್ಕಿಲ್ಲ. ಸಿದ್ದರಾಮಯ್ಯರ ಆಪ್ತರೆನಿಸಿದರೂ ಸಹ, ಅದರಿಂದ ಸಂಗಮೇಶ್​ರಿಗೆ ಲಾಭವಾಗಿದ್ದು ಕಡಿಮೆಯೇ! ಇನ್ನೂ ಹೈಕಮಾಂಡ್​ನಲ್ಲಿ ಲಾಭಿ ಮಾಡುವಂತಹ ಲೀಡರ್​ಗಳು ಸಂಗಮೇಶ್​ರ (bhadravathi mla sangamesh wikipedia)ಬೆನ್ನಿಗಿಲ್ಲ.  ಬೆಂಗಳೂರು, ದೆಹಲಿ ಮಟ್ಟದಲ್ಲಿ ರಾಜಕೀಯ ಗುರುಗಳನ್ನು ಸಹ ಹೊಂದಿಲ್ಲ. ಹೀಗಾಗಿ ಏಕಾಂಗಿಯಾಗಿಯೇ ಅವರು ಸಚಿವ ಸ್ಥಾನಕ್ಕಾಗಿ ಒತ್ತಡ ಹೇರಿದರು. ಆದರೆ ಅದು ಕೈಗೂಡಲಿಲ್ಲ. 

ಭದ್ರಾವತಿಗೆ ಸೀಮಿತವಾದ ಸಂಗಮೇಶ್​

ಶಾಸಕ ಮಧು ಬಂಗಾರಪ್ಪ, ಕಾಂಗ್ರೆಸ್​ಗೆ ಬರುತ್ತಲೇ ಅವರಿಗೆ ಸಂಘಟನೆಯ ಜವಾಬ್ದಾರಿಯನ್ನ ನೀಡಲಾಯ್ತು. ಈ ಸಂಘಟನೆಯ ಹೊರೆಯನ್ನ ಹೆಗಲಿಗೆ ಏರಿಸಿಕೊಂಡಿದ್ದರೆ ಸಂಗಮೇಶ್​ರವರು ಇಂದು ಮಂತ್ರಿಯಾಗಿರುತ್ತಿದ್ದರು ಎನ್ನುತ್ತಾರೆ  ರಾಜಕೀಯ ತಜ್ಞರು, ಕ್ಷೇತ್ರಕ್ಕೆ ಸೀಮಿತರಾದ ಭದ್ರಾವತಿ ಎಂಎಲ್​ಎ, ಜಿಲ್ಲಾ ಮಟ್ಟದ ನಾಯಕರಾಗಿ ಹೊರಹೊಮ್ಮಲಿಲ್ಲ. ಸಂಪರ್ಕ ಹಾಗೂ ಕ್ಷೇತ್ರಕ್ಕೆ ಸೀಮಿತವಾಗಿದ್ದೇ ಸಂಗಮೇಶ್​ರ ಹಿನ್ನಡೆಗೆ ಕಾರಣವಾಯ್ತು ಎನ್ನಲಾಗುತ್ತಿದೆ. 

 

 

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor