ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಅತ್ತಿಗುಂದದ ಶಿಕ್ಷಕಿಯೊಬ್ಬರು ಭದ್ರಾವತಿ ಗ್ರಾಮಾಂತ ಪೊಲೀಸ್ ಸ್ಟೇಷನ್ಗೆ ದೂರೊಂದನ್ನು ಕೊಟ್ಟಿದ್ಧಾರೆ. ಈ ದೂರು ಕುತೂಹಲ ಮೂಡಿಸುತ್ತಿದ್ದು, ದಾಖಲಾಗಿರುವ ಕೇಸ್ನ ಪ್ರಕಾರ, ಚೀಟಿ ವ್ಯವಹಾರಕ್ಕೆ ಶಿಕ್ಷಕಿಯೊಬ್ಬರನ್ನು ಸೇರಿಸಿಕೊಂಡು ಅವರ ವಿರುದ್ಧ ಮೋಸ ವಂಚನೆಯ ಆರೋಪ ಮಾಡಿ ಇಲಾಖೆಗೆ ದೂರು ನೀಡಲು ಯತ್ನಿಸಿದ ಆರೋಪ ಕೇಳಿಬಂದಿದೆ.
ಇದನ್ನು ಸಹ ಓದಿ : ಜೀವ ಪರ ಸರ್ಜಿ ಬಿಜೆಪಿ ಪರ ಆಗಲು ಕಾರಣವಾಗಿದ್ದು ವಿನಯ್ ಗುರೂಜಿಯಾ?
ಅತ್ತಿಗುಂದ ಶಿಕ್ಷಕಿಯನ್ನು(teacher) ಅವರು ಕೆಲಸ ಮಾಡುವ ಶಾಲೆಯ ಅತಿಥಿ ಶಿಕ್ಷಕ ತನ್ನ ಚೀಟಿಗೆ ಸೇರಿಸಿಕೊಂಡಿದ್ದನಂತೆ. ಆ ಬಳಿಕ ಶಿಕ್ಷಕಿ ಚೀಟಿ ಕಟ್ಟುವಲ್ಲಿ ಐದು ತಿಂಗಳು ವ್ಯತ್ಯಾಸವಾಗಿದ್ದು, ಬಳಿಕ ಅದನ್ನು ಪೂರ್ಣವಾಗಿ ಕಟ್ಟಿದ್ಧಾರಂತೆ.
FIFA world cup 2022 ವಿಶ್ವಕಪ್ ನ ವೈದ್ಯಕೀಯ ಟೀಂನಲ್ಲಿ ಶಿವಮೊಗ್ಗದ ಮಹಿಳೆಯ ಸೇವೆ
ಇದರ ನಡುವೆ ಚೀಟಿ ಸೇಪ್ಟಿಗೆ ಖಾಲಿ ಪೇಪರ್ ಮೇಲೆ ಸಹಿ ಪಡೆದಿದ್ದ ಅತಿಥಿ ಶಿಕ್ಷಕ ಚೆಕ್ವೊಂದನ್ನ ಪಡೆದುಕೊಂಡಿದ್ದ. ಟೀಚರ್ ಚೀಟಿ ಕಟ್ಟಲು ವಿಳಂಬ ಮಾಡಿದ ಸಮಯದಲ್ಲಿ ಈ ಚೆಕ್ನ್ನು ಮುಖ್ಯಶಿಕ್ಷಕರೊಬ್ಬರ ಮೂಲಕ ಕ್ಯಾಶ್ಗೆ ಹಾಕಿಸಿ ಚೆಕ್ಬೌನ್ಸ್ ಮಾಡಿಸಿದ್ದಾರೆ. ಅಲ್ಲದೆ, ದಾಖಲೆಗಳನ್ನು ಇಲಾಖೆಗೆ ಕಳುಹಿಸಿದ್ದಾರೆ. ಸದ್ಯ ಈ ಷಡ್ಯಂತ್ರದ ವಿರುದ್ಧ ಶಿಕ್ಷಕಿ ದೂರು ನೀಡಿದ್ದು ಪೊಲೀಸರು ತನಿಖೆ ನಡೆಸ್ತಿದ್ದಾರೆ.
ಇನ್ನಷ್ಟು ಸುದ್ದಿಗಳಿಗಾಗಿ : ನಮ್ಮ ವಾಟ್ಸ್ಯಾಪ್ ಗ್ರೂಪ್ಗೆ ಕ್ಲಿಕ್ ಮಾಡಿ : Whatsapp link
