ಕುಮುಟಾ ವ್ಯಕ್ತಿ ಸಾಗರದಲ್ಲಿ ಸಾವು | ಭದ್ರಾವತಿಯಲ್ಲಿ ಲಾರಿಗೆ ಮಹಿಳೆ ಬಲಿ | KSRTC ಬಸ್ ಲಾರಿ ನಡುವೆ ಡಿಕ್ಕಿ 

Kumuta man dies in Sagara | Woman killed in lorry in Bhadravathi | KSRTC bus collides with lorry 

ಕುಮುಟಾ ವ್ಯಕ್ತಿ  ಸಾಗರದಲ್ಲಿ ಸಾವು | ಭದ್ರಾವತಿಯಲ್ಲಿ ಲಾರಿಗೆ ಮಹಿಳೆ ಬಲಿ | KSRTC ಬಸ್ ಲಾರಿ ನಡುವೆ ಡಿಕ್ಕಿ 
Bhadravathi

shivamogga Mar 16, 2024  ಲಾರಿಗೆ ಮಹಿಳೆ ಬಲಿ

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ನಗರದ ನ್ಯಾಯಾಲಯ ಮುಂಭಾಗದ ರಸ್ತೆಯಲ್ಲಿ ಮಹಿಳೆಯೊಬ್ಬರು ಸರಕು ತುಂಬಿದ ಲಾರಿಗೆ ಸಿಲುಕಿ ಮೃತಪಟ್ಟಿದ್ದಾರೆ. ಹೊಸಮನೆ ನಿವಾಸಿ ವಿಜಯಲಕ್ಷ್ಮೀ (70) ಮೃತರು. ಕೆಲಸಕ್ಕಾಗಿ ತೆರಳುತ್ತಿದ್ಧಾಗ  ಈ ದುರ್ಘಟನೆ ಸಂಭವಿಸಿದೆ. ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕುಮಟಾ ವ್ಯಕ್ತಿ ಆತ್ಮಹತ್ಯೆ

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ತಾಳಗುಪ್ಪ ಹೋಬಳಿ ಆಲಳ್ಳಿ ಸಮೀಪ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನ ಹೆಸರು ಉಪೇಂದ್ರ (45), ಕುಮಟಾ ಮೂಲದ ಈತನ ಶವ ಆಲಳ್ಳಿ ಸಮೀಪ ನೇಣು ಬಿಗಿದ ರೀತಿಯಲ್ಲಿ ಪತ್ತೆಯಾಗಿದೆ. ಇವರ ಕುಟುಂಬ ಸಿದ್ದಾಪುರದಲ್ಲಿ ನೆಲೆಸಿದೆ ಎನ್ನಲಾಗಿದೆ.ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯುಲ್ಲಿ ಪ್ರಕರಣ ದಾಖಲಾಗಿದ್ದು, ಕುಟುಂಬದವರ ಪತ್ತೆಗಾಗಿ ಕ್ರಮ ಕೈಗೊಳ್ಳಲಾಗಿದೆ.

ಬಸ್ ಲಾರಿ ನಡುವೆ ಡಿಕ್ಕಿ 

ಇನ್ನೊಂದೆಡೆ ದಿ:14.03.2024ರಂದು ಪೇಪರ್ ಟೌನ್ ಠಾಣಾ ವ್ಯಾಪ್ತಿಯಲ್ಲಿ  ಕಾರೇಹಳ್ಳಿ ಚೆಕ್ ಪೋಸ್ಟ್ ಬಳಿ KSRTC ಬಸ್ & ಲಾರಿಗೆ ಅಪಘಾತವಾಗಿದೆ. ಘಟನೆ ಬಗ್ಗೆ ವಿಷಯ ತಿಳಿದು  ಸ್ಥಳಕ್ಕೆ ತೆರಳಿದ ERV ಸಿಬ್ಬಂ ಎರಡು ವಾಹನಗಳನ್ನು ರಸ್ತೆಯಿಂದ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ. ಘಟನೆಯಲ್ಲಿ ಯಾರಿಗೂ ಅಪಾಯ ಉಂಟಾಗಿಲ್ಲ