Kaatera Piracy Link ಮಾರುತ್ತಿದ್ದ ಯುವಕ ಅರೆಸ್ಟ್! 40 ರೂಪಾಯಿ ಆಸೆಗೆ ಪೊಲೀಸರ ಕೈಗೆ ಸಿಕ್ಕಿಬಿದ್ದ !

Kaatera Piracy Link /Man arrested for selling Kaatera Piracy Link for Rs 40 Kaatera Piracy Link , Kaatera Movie Review

Kaatera Piracy Link  ಮಾರುತ್ತಿದ್ದ ಯುವಕ ಅರೆಸ್ಟ್! 40 ರೂಪಾಯಿ ಆಸೆಗೆ ಪೊಲೀಸರ ಕೈಗೆ ಸಿಕ್ಕಿಬಿದ್ದ !
Kaatera Piracy Link /Man arrested

KARNATAKA  |  Jan 4, 2024  |   ನಟ ದರ್ಶನ್​ ಅಭಿನಯದ ಕಾಟೇರ ಸಿನಿಮಾಕ್ಕೆ Kaatera Piracy Link ನ ಕಾಟ ಶುರುವಾಗಿದೆ. ಇತ್ತೀಚೆಗೆ ತಮ್ಮ ಸಿನಿಮಾದ ಸಕ್ಸಸ್ ಮೀಟ್ ಕರೆದಿದ್ದ DBOSS ದರ್ಶನ್​ ಹಾಗೂ ಚಿತ್ರತಂಡ ಪೈರಸಿ ಮಾಡುವವರಿಗೆ ಹಾಗೂ ಮಾರುವವರಿಗೆ ಎಚ್ಚರಿಕೆ ನೀಡಿದ್ದರು. ಇದರ ನಡುವೆ ದರ್ಶನ್ ಅಭಿನಯದ ಕಾಟೇರ ಸಿನಿಮಾದ ಪೈರಸಿ ವಿಡಿಯೋ ಲಿಂಕ್ ನನ್ನ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ವಿರುದ್ದ  ರಾಯಚೂರಿನಲ್ಲಿ ದೂರು ದಾಖಲಾಗಿದ.ಎ 

READ : Kannada Rajyotsava Award / ಕವಿ ಸತ್ಯನಾರಾಯಣ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ! ಅಭಿನಂದನೆ

Kaatera Piracy Link

Kaatera Piracy Link ಹೆಸರಿನಲ್ಲಿ ಯುವಕನೊಬ್ಬರ 40 ರೂಪಾಯಿಗೆ ಸಿನಿಮಾದ ಪೈರಸಿ ಲಿಂಕ್​ನ್ನ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ,  ಈ ಸಂಬಂಧ ರಾಯಚರೂರು ಸದರ್ ಬಜಾರ್ ಪೊಲೀಸ್ ಸ್ಟೇಷನ್​ನಲ್ಲಿ ಕಂಪ್ಲೆಂಟ್ ಸಹ ದಾಖಲಾಗಿತ್ತು. ಸೈಬರ್ ಕ್ರೈಂ ಆದ್ದರಿಂದ ಆರೋಪಿಯ ಅಡ್ರೆಸ್​ ತಟ್ಟನೆ ಸಿಕ್ಕಿದೆ ಹೀಗಾಗಿ ಕಾರ್ಯಾಚರಣೆಗೆ ಇಳಿದ ಪೊಲೀಸರು ಓರ್ವನನ್ನ ಬಂಧಿಸಿದ್ದಾರೆ. ಅಲ್ಲದೆ ಈ ಸಂಬಂಧ ಇನ್ನಷ್ಟು ಮಂದಿಗಾಗಿ ಹುಡುಕಾಡುತ್ತಿದ್ದಾರೆ. 

ಸಾಮಾನ್ಯವಾಗಿ ಇಂತಹ ಕೃತ್ಯವೆಸಗುವವರು ಟೊರೆಂಜ್ಸ್​ ಅಥವಾ ಟೆಲಿಗ್ರಾಂಗಳ ಮೂಲಕ ಲಿಂಕ್ ಷೇರ್ ಮಾಡಿ ಮಾರುತ್ತಾರೆ. ಆದರೆ ಇವುಗಳಲ್ಲಿ ಬಹುತೇಕ ಮೋಸದ ಲಿಂಕ್ ಆಗಿರುತ್ತದೆ. ಕೆಲವೊಮ್ಮೆ ಅಕೌಂಟ್ ಹ್ಯಾಕ್ ಆಗುವ ಸಾಧ್ಯತೆ ಇರುತ್ತದೆ. GOOGLE  ನಲ್ಲಿ ಸರ್ಚ್​ ಕೊಟ್ಟು ಹುಡುಕುವರು ಇರುತ್ತಾರೆ. ಆದರೆ ಗೂಗಲ್ ಇಂತಹ ಕೃತ್ಯಗಳಿಗೆ ಬಹುತೇಕ ಸಪೋರ್ಟ್ ಮಾಡುವುದಿಲ್ಲ. 

ಇನ್ನೂ ಪ್ರಕರಣದಲ್ಲಿ ಆರೋಪಿಯು ವಾಟ್ಸ್ಯಾಪ್​ನಲ್ಲಿ 40 ರೂಪಾಯಿ ಪೇ ಮಾಡಿದರೆ, ಅವರಿಗೆ ಕಾಟೇರಾ ಸಿನಿಮಾದ ಲಿಂಕ್ ಕಳುಹಿಸಿಕೊಡುತ್ತಿದ್ದನಂತೆ. ಹೀಗೆ ಆತನಿಂದ ಪೈರಸಿ ಲಿಂಕ್ ಕಳುಹಿಸಿಕೊಂಡ ವ್ಯಕ್ತಿಯೊಬ್ಬರು ಸಾಕ್ಷಿ ಸಮೇತ ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಆತನ ವಿರುದ್ಧ ಕಾಪಿ ರೈಟ್ ಆ್ಯಕ್ಟ್ ಮತ್ತು ಐಪಿಸಿ ಸೆಕ್ಷನ್​ 420 ಅಡಿಯಲ್ಲಿ ಪ್ರಕರಣ ದಾಖಲಾಗಿದೆ 

 Kaatera Movie Review

ಇನ್ನೂ ಸದ್ಯ ಹೊರಬರುತ್ತಿರುವ ವಿಮರ್ಶೆಗಳ ಪ್ರಕಾರ, ಸಿನಿಮಾ ಕ್ಲಾಸ್ ಆಗಿ ಮಾಸ್ ಆಡಿಯನ್ಸ್​ನ ಸಿನಿಮಾ ಥಿಯೇಟರ್​ಗೆ ಬರುವಂತೆ ಮಾಡುತ್ತಿದೆ. ಅದರಲ್ಲಿಯು ದರ್ಶನರವರ ಸಿಂಪಲ್​ ಸ್ಪೆಷಲ್​ ಆಕ್ಟಿಂಗ್ ಜನರನ್ನ ಮರುಳಾಗಿಸುತ್ತಿದೆ. ನಿರ್ದೇಶನ, ಕ್ಯಾಮರಾ ಹಾಗೂ ಟೆಕ್ನಿಕಲ್ ಆಸ್ಪೆಕ್ಟ್​ಗಳು ಸಿನಿಮಾದಲ್ಲಿ ಹಳ್ಳಿಗಾಡಿನ ಸೊಗಸನ್ನ ವಿಶೇಷವಾಗಿ ಮೂಡುವಂತೆ ಮಾಡಿದೆ. ಒಟ್ಟಾರೆ ಸಿನಿಮಾ ಪ್ರೇಕ್ಷಕನ ಬಾಯಲ್ಲಿಯೇ ಅಬ್ಬರ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದು, ಸಿನಿಮಾ ಚೆನ್ನಾಗಿದೆ