ಮೆಸ್ಕಾಂ ಹಾಗೂ ಬೆಸ್ಕಾಂ ನಡಿಯಲ್ಲಿ ವಿದ್ಯುತ್ ಪೂರೈಕೆ ಪಡೆಯುತ್ತಿರುವ ಗ್ರಾಹಕರಿಗೆ ರಾಜ್ಯಸರ್ಕಾರ ಗುಡ್ ನ್ಯೂಸ್ ಕೊಟ್ಟಿದೆ.ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ ಒಂದರ ಹಿಂದೆ ಒಂದು ಹೊಸ ಘೋಷಣೆಗಳನ್ನು ಜಾರಿಗೆ ತರುತ್ತಿದೆ. ಇದರ ನಡುವೆ ಇತ್ತೀಚೆಗಷ್ಟೆ ಇಂಧನ ಸಚಿವ ಸುನೀಲ್ ಕುಮಾರ್, ವಿದ್ಯುತ್ ದರ ಇಳಿಸುವ ಪ್ರಸ್ತಾಪ ಮಾಡಿದ್ದರು.
ಶಿವಮೊಗ್ಗ ಬರ್ತಾರೆ ಭಾಗವತ್: ಇವತ್ತು ಶಿವಮೊಗ್ಗಕ್ಕೆ RSS ನ ಹಿರಿಯ ನಾಯಕ ಮೋಹನ್ ಭಾಗವತ್ ಭೇಟಿ/ ಕಾರಣವೇನು ಓದಿ
ಇದೀಗ ಪೂರಕವಾಗಿ ಬೆಸ್ಕಾಂ (Bescom), ಮೆಸ್ಕಾಂ (Mescom) ವ್ಯಾಪ್ತಿಯಲ್ಲಿ ವಿದ್ಯುತ್ ದರ (Electricity Price) ಇಳಿಕೆ ಮಾಡಿರುವುದಾಗಿ ತಿಳಿಸಿದ್ದಾರೆ. ಈ ಸಂಬಂಧ ಸರ್ಕಾರ (Karnataka Government) ಆದೇಶ ಹೊರಡಿಸಿದೆ.
ಮೋದಿಯವರ ತಾಯಿ ನಿಧನ ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೇನ್ ನಿಧನ
ಇದರ ಬಗ್ಗೆ ಟ್ವೀಟ್ ಮಾಡಿರುವ ಇಂಧನ ಸಚಿವ ಸುನಿಲ್ ಕುಮಾರ್ (Sunil Kumar) ಅವರು, ಬೆಸ್ಕಾಂ ಹಾಗೂ ಮೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಹೊಂದಾಣಿಕೆ ವೆಚ್ಚ ಕಡಿತ ಮಾಡುವ ನಿರ್ಧಾರ ತೆಗದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಎಷ್ಟು ಕಮ್ಮಿಯಾಗ್ತಿದೆ ಬಿಲ್
ಬೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ ಗೆ 37 ಪೈಸೆ
ಮೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ ಗೆ 39 ಪೈಸೆ ಕಡಿತ ಮಾಡಲಾಗಿದೆ
ಶರಾವತಿ ಸುದ್ದಿ ;ಶರಾವತಿ ಸಂತ್ರಸ್ತರಿಗೆ ಸರ್ಕಾರದ ಗುಡ್ನ್ಯೂಸ್/ ಭೂಮಿ ಹಕ್ಕಿಗೆ ಸಂಬಂಧಿಸಿದಂತೆ ಸಿಕ್ಕಿತು ಈ ಆಶ್ವಾಸನೆ/ ವಿವರ ಓದಿ
ಇಂಧನ ಮತ್ತು ವಿದ್ಯುತ್ ಹೊಂದಾಣಿಕೆ ವೆಚ್ಚವನ್ನು ನಿರ್ಣಯಿಸುವ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ(kERC) ಈ ಸಂಬಂಧ ಆದೇಶವನ್ನು ಹೊರಡಿಸಿದೆ. ಇನ್ನೂ ಜನವರಿ ಒಂದರಿಂದ ಈ ಆದೇಶ ಜಾರಿಯಲ್ಲಿ ಇರಲಿದ್ದು, ಬರುವ ಮಾರ್ಚ್ 31 ರ ವರೆಗೂ ಇದರ ಪ್ರಯೋಜನ ಸಿಗಲಿದೆ.
ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ಸೇರುವ ಕೆಇಆರ್ಸಿಯು ವಿದ್ಯುತ್ ಸರಭರಾಜು ಕಂಪನಿಗಳು ಕಳುಹಿಸುವ ಪ್ರಸ್ತಾವನೆಗಳನ್ನು ಇಂಧನ ವೆಚ್ಚ ಹೊಂದಾಣಿಕೆ ಸಂಬಂಧ ವಿದ್ಯುತ್ ದರವನ್ನು ಪರಿಷ್ಕರಿಸುತ್ತದೆ.
ನಮ್ಮ ವಾಟ್ಸ್ಯಾಪ್ ಗ್ರೂಪ್ ಲಿಂಕ್ ಇದು ಕ್ಲಿಕ್ ಮಾಡಿ
ಬೆಸ್ಕಾಂ ಹಾಗೂ ಮೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಹೊಂದಾಣಿಕೆ ವೆಚ್ಚ ಕಡಿತ ಮಾಡುವ ನಿರ್ಧಾರ ತೆಗದುಕೊಳ್ಳಲಾಗಿದೆ.
ಬೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ ಗೆ 37 ಪೈಸೆ ಹಾಗೂ ಮೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ ಗೆ 39 ಪೈಸೆ ಕಡಿತ ಮಾಡಲಾಗಿದ್ದು, ಇದರ ಪ್ರಯೋಜನ ನೇರವಾಗಿ ಗ್ರಾಹಕರಿಗೆ ಲಭಿಸಲಿದೆ.@CMofKarnataka— Sunil Kumar Karkala (@karkalasunil) December 29, 2022