ಶರಾವತಿ ಸಂತ್ರಸ್ತರಿಗೆ ಸರ್ಕಾರದ ಗುಡ್​ನ್ಯೂಸ್​/ ಭೂಮಿ ಹಕ್ಕಿಗೆ ಸಂಬಂಧಿಸಿದಂತೆ ಸಿಕ್ಕಿತು ಈ ಆಶ್ವಾಸನೆ/ ವಿವರ ಓದಿ

ಈ ವಿಚಾರದಲ್ಲಿ ಮಾತನಾಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿಯವರು ಶರಾವತಿ ಸಂತ್ರಸ್ತರು ಮತ್ತು ಅನುಸೂಚಿತ ಬುಡಕಟ್ಟುಗಳ ಹಾಗೂ ಇತರ ಪಾರಂಪರಿಕ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವುದಿಲ್ಲ ಎಂದಿದ್ದಾರೆ

ಶರಾವತಿ ಸಂತ್ರಸ್ತರಿಗೆ ಸರ್ಕಾರದ ಗುಡ್​ನ್ಯೂಸ್​/  ಭೂಮಿ ಹಕ್ಕಿಗೆ ಸಂಬಂಧಿಸಿದಂತೆ ಸಿಕ್ಕಿತು ಈ ಆಶ್ವಾಸನೆ/ ವಿವರ ಓದಿ

ಸದನ ಕಲಾಪದಲ್ಲಿ ನಿನ್ನೆ ಶರಾವತಿ ಸಂತ್ರಸ್ತರ ವಿಚಾರ ಚರ್ಚೆಯಾಗಿದೆ., ನಿಯಮ 69 ರ ಅಡಿಯಲ್ಲಿ ಹರತಾಳು ಹಾಲಪ್ಪರವರು ಮತ್ತು ದಿನಕರ ಶೆಟ್ಟಿಯವರು ಈ ವಿಚಾರ ಪ್ರಸ್ತಾಪಿಸಿದರು. ಈ ವಿಚಾರದಲ್ಲಿ ಮಾತನಾಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿಯವರು ಶರಾವತಿ ಸಂತ್ರಸ್ತರು ಮತ್ತು ಅನುಸೂಚಿತ ಬುಡಕಟ್ಟುಗಳ ಹಾಗೂ ಇತರ ಪಾರಂಪರಿಕ ಅರಣ್ಯವಾಸಿಗಳನ್ನು ಒಕ್ಕಲೆಬ್ಬಿಸುವುದಿಲ್ಲ , ಸುಪ್ರೀಂಕೋರ್ಟ್​ನ ಮನವೊಲಿಸಿ ಜಮೀನುಗಳನ್ನು ಅವರ ಹೆಸರಿಗೆ ಮಾಡಿಕೊಡಲಾಗುವುದು ಎಂಧದು ತಿಳಿಸಿದರು, ಅಲ್ಲದೆ ಶರಾವತಿ ಸಂತ್ರಸ್ತರ ವಿಚಾರದಲ್ಲಿ ಸಿಎಂ ನೇತೃತ್ವದಲ್ಲಿ ಕೇಂದ್ರಕ್ಕೆ ನಿಯೋಗ ಒಯ್ದು ಇತ್ಯರ್ಥ ಮಾಡುತ್ತೇವೆ ಎಂದರು

ಇದನ್ನು ಸಹ ಓದಿ : ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಸಾಗರ ತಾಲ್ಲೂಕಿನ ಆನಂದಪುರದಲ್ಲಿ ಮೂರು ಆಕ್ಸಿಡೆಂಟ್​/ ಬಸ್​ಗಳ ಡಿಕ್ಕಿ/ ಬೈಕ್​ ಆಕ್ಸಿಡೆಂಟ್/ ಓರ್ವನ ಸಾವು

ಸರ್ಕಾರದಿಂದ ಒತ್ತುವರಿದಾರರಿಗೆ ನೋಟಿಸ್​ ನೀಡುತ್ತಿರುವುದು ಒಕ್ಕಲೆಬ್ಬಿಸುವುದಕ್ಕಲ್ಲ, ಅಲ್ಲಿ ವಾಸವಿರುವುವದಕ್ಕೆ ದಾಖೆಲಗಳ ಪರಾಮರ್ಶೆಗೆ ಮಾತ್ರ ಎಂದ ಸಚಿವರು ಈ ದಾಖಲೆಗಳು ವಿಭಾಗೀಯ ಅಧಿಕಾರಿಗೆ ಹೋಗುತ್ತದೆ. ಹಾಗಾಗಿ ನೋಟಿಸ್​ನ ಭಯ ಬೇಡ ಎಂದು ಸ್ಪಷ್ಟಪಡಿಸಿದರು. 

ಅಡಿಕೆ ಬೆಳೆಗೆ ಪ್ರೋತ್ಸಾಹ ಕೊಡಬಾರದು: ಗೃಹಸಚಿವ ಆರಗ ಜ್ಞಾನೇಂದ್ರ ಸದನದಲ್ಲಿ ಹೀಗ್ಯಾಕೆ ಹೇಳಿದ್ರು/ ವಿರೋಧಕ್ಕೆ ಗುರಿಯಾಯ್ತೇ ಹೇಳಿಕೆ

1980 ರ ಅರಣ್ಯ ಕಾಯಿದೆ ಜಾರಿಗೆ ಬಂದಮೇಲೆ ರಾಜ್ಯ ಸರ್ಕಾರವೂ, ಕೇಂದ್ರ ಸರ್ಕಾರ ಹಾಗೂ ಸುಪ್ರೀಂಕೋರ್ಟ್ನ್ ಅನುಮತಿ ಪಡಯದೇ ಜಮೀನು ಡಿ ನೋಟಿಫೈ ಮಾಡಿದ್ದನ್ನ ಹೈಕೋರ್ಟ್ ಮಾನ್ಯ ಮಾಡಿಲ್ಲ. ಮೇಲಾಗಿ ನ್ಯಾಯಾಂಗ ನಿಂಧನೆ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಲು ಸಹ ಅವಕಾಶ ಇಲ್ಲದಂತಾಗಿದೆ ಎಂಧರು. 

ಸರಣಿ ಸುದ್ದಿ : DYSP ಬಾಲ್​ರಾಜ್​ಗೆ ಸಿಕ್ತು ಕೇಂದ್ರ ಮಂತ್ರಿ ಪದಕ/ ಅತ್ಯುನ್ನತ ಪ್ರಶಸ್ತಿ ಸಿಗಲು ಕಾರಣವಾದ ಕೇಸ್​ ಯಾವುದು ಗೊತ್ತಾ? ಇಲ್ಲಿದೆ ಪ್ರಕರಣ ರೋಚಕ ತನಿಖೆಯ ಸರಣಿ

ಇನ್ನೂ ಈ ಸಂದರ್ಭದಲ್ಲಿ ಮಾತನಾಡಿದ ಹರತಾಳು ಹಾಲಪ್ಪನವರು ಲಿಂಗನಮಕ್ಕಿ ಡ್ಯಾಂ ನಿರ್ಮಿಸಿ, 8 ಸಾವಿರ ಕುಟುಂಗಳನ್ನ ರಾತೋರಾತ್ರಿ ಬೇರೆ ಕಡೆಗಳಲ್ಲಿ ತಂದು ಬಿಡಲಾಯ್ತು. ಈಗಲೂ ಇವರ ಹೆಸರಿಗೆ ಭೂಮಿ ಆಗಿಲ್ಲ. ಅಲ್ಲದೆ ಅನುಸೂಚಿತ ಬುಡಕಟ್ಟುಗಳ ಮತ್ತು ಇತರೇ ಪಾರಂಪರಿಕ ಅರಣ್ಯವಾಸಿಗಳ ನಿಯಮ ಸರಳೀಕರಿಸಿ ಮೂರು ತಲೆಮಾರು ಎಂಬುದನ್ನ ಬಿಟ್ಟು ಒಂದು ತಲೆಮಾರು ಎಂದು ಮಾಡಬೇಕು ಎಂದರು, ಅಲ್ಲದೆ ಈ ಸಂಬಂಧ ಸದನ ಒಮ್ಮತದ ತೀಋ್ಮಾ ತೆಗೆದುಕೊಳ್ಳಬೇಕು , ಸಂತ್ರಸ್ತರನ್ನು ಒಕ್ಕಲೆಬ್ಬಿಸುವ ಪ್ರಯತ್ನ ಮಾಡಿದರೇ ರಕ್ತ ಕ್ರಾಂತಿಯಾಗುತ್ತದೆ ಎಂದರು. 

ಸಾಗರ ಸುದ್ದಿ :  Exclusive / ಸಾಗರ ಟೌನ್​ನಲ್ಲಿ ನಡೆದ ಭೀಕರ ಲಾರಿ ಅಪಘಾತ ಸಂಭವಿಸಿದ್ದೇಗೆ ನೋಡಿ ಸಿ.ಸಿ.ಟಿವಿ ವಿಡಿಯೋದಲ್ಲಿ!